ಮತದಾನ ಮಹತ್ವ ಮನವರಿಕೆ ಮಾಡಿ ಬೈಕ್ ರ್ಯಾಲಿ
ಇಂಡಿ : ಮತದಾನದ ಬಗ್ಗೆ ಜನರಿಗೆ ಮನವರಿಕೆ ಮಾಡಿಸುವದು ಸಮಾಜ ಸೇವೆಯ ಕೆಲಸ, ಅದನ್ನು
ಎಲ್ಲರೂ ಪ್ರಾಮಾಣಿಕವಾಗಿ ಮಾಡೋಣ ಎಂದು ತಾ.ಪಂ
ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಇಒ ನೀಲಗಂಗಾ
ಬಬಲಾದ ಹೇಳಿದರು.
ಪಟ್ಟಣದ ತಾ.ಪಂ ಭವನದಲ್ಲಿ ತಾ.ಪಂ ಸ್ವೀಪ್
ಸಮಿತಿಯಿಂದ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಮತದಾನದ ಮೇಲೆ ದೇಶದ ಅಭಿವೃದ್ದಿ ಹಾಗೂ ಭದ್ರತೆ ನಿಂತಿರುತ್ತದೆ. ನಮ್ಮ ಮತದಾನದ ಹಕ್ಕನ್ನು ಕಡ್ಡಾಯವಾಗಿ ಪಾಲಿಸಿ ಉತ್ತಮ ಸಮಾಜ ನಿರ್ಮಾನಕ್ಕೆ ನಾಂದಿ ಹಾಡೋಣ. ಮತದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ
ಕಾರ್ಯಕ್ರಮಗಳನ್ನು ತಾಲೂಕಿನಲ್ಲಿ ಹಮ್ಮಿಕೊಂಡಿದ್ದು ಆ ಮೂಲಕ ಮತದಾನ ಪ್ರಾಮುಖ್ಯತೆ ಹಾಗೂ ಮತದಾರರ ಕರ್ತವ್ಯದ ಬಗ್ಗೆ ಮನವರಿಕೆ ಮಾಡೋಣ ಎಂದರು.
ಕಂದಾಯ ಉಪವಿಭಾಗಾಧಿಕಾರಿ ಮತ್ತು ಸಹಾಯಕ
ಚುನಾವಣೆ ಅಧಿಕಾರಿ ಅಬೀದ್ ಗದ್ಯಾಳ ಮಾತನಾಡಿ
ಯಾರೂ ಮತದಾನದಿಂದ ದೂರ ಉಳಿಯದಂತೆ
ನೋಡಿಕೊಳ್ಳುವದು ನಮ್ಮೇಲ್ಲರ ಕರ್ತವ್ಯ. ಎಲ್ಲರಿಗೂ ಕಡ್ಡಾಯವಾಗಿ ಮತದಾನ ಮಾಡಿಸಬೇಕು ಎಂದರು.
ನಂತರ ಬೈಕ್ ರ್ಯಾಲಿ ಹಸಿರು ನಿಶಾನೆ ತೋರಿಸಿ ಚಾಲನೆ
ನೀಡಿದರು. ಬೈಕ್ ರ್ಯಾಲಿ ಸಿಂದಗಿ ರಸ್ತೆ, ಮಿನಿ ವಿಧಾನಸೌಧ, ವಿಜಯಪುರ ರಸ್ತೆ, ಸೇವಾಲಾಲ ವೃತ್ತ, ಬಸವೇಶ್ವರ ವೃತ್ತ, ಅಂಬೇಡಕರ ವೃತ್ತ, ಸ್ಟೇಷನ್ ರಸ್ತೆ
ಗಳಿಂದ ಮತ್ತೆ ತಾ.ಪಂ ದಲ್ಲಿ ಮುಕ್ತಾಯ ಗೊಂಡಿತು.
ತಹಸೀಲ್ದಾರ ಮಂಜುಳಾ ನಾಯಕ, ಸಂಜಯ ಖಡಗೇಕರ, ಪ್ರಕಾಶ ರಾಠೋಡ, ಬಸವರಾಜ ಬಬಲಾದ, ವಿನೋದ ಸಜ್ಜನ, ಸಾಹಿಲ್ ಧನಶೆಟ್ಟಿ, ರಾಮನಗೌಡ ಸದಾಶಿರಗಿ ಮತ್ತಿತರಿದ್ದರು.
ಇಂಡಿ ಪಟ್ಟಣದಲ್ಲಿ ಮತದಾನ ಜಾಗೃತಿ ಕುರಿತು ಬೈಕ್ ರ್ಯಾಲಿ ನಡೆಯಿತು. ಎಸಿ, ಇಒ ಮತ್ತಿತರಿದ್ದರು.