ಸತ್ಸಂಗದಿಂದ ಜೀವನ ಪಾವನವಾಗುತ್ತೆ : ಜಕ್ಕಣ್ಣ ಶಾಸ್ತ್ರಿ
ಇಂಡಿ: ಸತ್ಸಂಗದಿಂದ ಜೀವನ ಪಾವನವಾಗುತ್ತದೆ ಎಂದು ಬ.ಬಾಗೇವಾಡಿ ತಾಲೂಕಿನ ಇಂಗಳೇಶ್ವರದ ಪ್ರವಚನಕಾರ ಜಕ್ಕಣ್ಣ ಶಾಸ್ತಿçÃಗಳು ಹೇಳಿದರು.
ಗುರುವಾರ ತಾಲೂಕಿನ ಹಿರೇಬೇವನೂರ ಗ್ರಾಮದ ಶ್ರೀ ಶಿವಸಿದ್ದ ಭೀರಲಿಂಗೇಶ್ವರ ದೊಡ್ಡಬ್ಬದ ನಿಮಿತ್ಯ ಭೀರಲಿಂಗೇಶ್ವರ ಮಹಾಪುರಾಣ ಪ್ರಾರಂಭೋತ್ಸವದಲ್ಲಿ ಅವರು ಮಾತನಾಡಿದರು.
ಸತ್ಸಂಗಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ಶಾಂತವಾಗುತ್ತದೆ, ಭಕ್ತಿ ಮಾರ್ಗಗಳನ್ನು ಕಲಿಸಿಕೊಡುತ್ತದೆ ಎಂದ ಅವರು, ಹಿರೇಬೇವನೂರ ಗ್ರಾಮದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಈ ರೀತಿಯ ಭೀರಲಿಂಗೇಶ್ವರ ಮಹಾಪುರಾಣ, ಭೀರದೇವರ ಜೀವನ ಚರಿತ್ರೆ, ಹಾಲುಮತದ ಮೂಲ ಬೆಳವಣ ಗೆ ಅವರು ಮಾಡಿದ ಪವಾಡಗಳನ್ನು ಸುಮಾರು ೧೦ ದಿನಗಳ ಕಾಲ ಮಹಾಪುರಾಣವನ್ನು ನಿರ್ಮಲ ಮನಸ್ಸಿನಿಂದ ತಾವುಗಳು ಕೇಳಿ ಪುನೀತರಾಗಿ ಎಂದರು.
ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡ, ಸಾಹಿತಿ, ಶಿಕ್ಷಕ ದಶರಥ ಕೋರಿ, ಶಿಕ್ಷಕ ಪುಂಡಲಿಕ ಕಲ್ಮನಿ ಮಾತನಾಡಿ, ಹಾಲುಮತ ಸಂಪ್ರದಾಯ ಬಹಳ ವಿಶಿಷ್ಟವಾದುದು. ಯಾರ ಜತೆಗೂ ಜಗಳ, ವಿರೋಧ ಕಟ್ಟಿಕೊಳ್ಳುವ ಜನ ಹಾಲುಮತದವರಲ್ಲ. ಗುಡ್ಡಗಾಡಿನಲ್ಲಿದ್ದ ಜನ ನಾಡಿಗೆ ಬಂದು ಎಲ್ಲರೊಂದಿಗೆ ಹೊಂದಿಕೊAಡು ಬದುಕು ಕಟ್ಟಿಕೊಂಡಿದ್ದಾರೆ. ಈ ಸಮುದಾಯವು ಸಮಾಜಕ್ಕೆ ಹಾಲು, ಕಂಬಳಿ ಕೊಡುಗೆ ನೀಡಿದೆ. ಈ ಸಮುದಾಯದ ಮುಖ್ಯ ಆಕರ ಸಾಹಿತ್ಯ ಡೊಳ್ಳಿನ ಹಾಡುಗಳು. ಅದರ ಮೂಲಕವೇ ಅವರ ಸಂಸ್ಕೃತಿಯ ಪರಿಚಯವಾಗಿದೆ ಎಂದರು.
ದಿವ್ಯ ಸಾನಿಧ್ಯ ವೇದಮೂರ್ತಿ ದಯಾನಂದ ಹಿರೇಮಠ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಎಸ್. ಪಾಟೀಲ ವಹಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಶೈಲಜಾ ಜಾಧವ, ಶಂಕರಗೌಡ ಪಾಟೀಲ, ಸಿದ್ದರಾಯ ಹಂಜಗಿ, ಹಣಮಂತಮಹಾರಾಯ ಕಲ್ಮನಿ, ಮುತ್ತಪ್ಪ ಚಿಕ್ಕಬೇವನೂರ, ಹೂವಣ್ಣ ಪೂಜಾರಿ, ಘಂಟೆಪ್ಪ ಕುಂಬಾರ, ಸಂಗಪ್ಪ ಉಪ್ಪಿನ, ಬಸವರಾಜ ಅರ್ಜುಣಗಿ, ಆನಂದ ಪಾಟೀಲ, ಬಸವರಾಜ ತೇಲಿ, ಬಸವರಾಜ ಸೋಲಾಪೂರ, ಗುರಪ್ಪ ಡಂಗಿ, ಶಂಕಪ್ಪ ವಗ್ಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದ ಶ್ರೀ ಶಿವಸಿದ್ದ ಭೀರಲಿಂಗೇಶ್ವರ ದೊಡ್ಡಬ್ಬದ ನಿಮಿತ್ಯ ಭೀರಲಿಂಗೇಶ್ವರ ಮಹಾಪುರಾಣ ಪ್ರಾರಂಭೋತ್ಸವನ್ನು ಗಣ್ಯರು ಉದ್ಘಾಟಿಸಿದರು.