ರಾಮ ರಕ್ಷಾಪಠಣ ದೀಪ ಪ್ರತಿಯೋಂದು ಮನೆಯಲ್ಲಿ ಬೆಳಗಲಿ
ಇಂಡಿ: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ
ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಂದ ತಂದಿದ್ದ ರಾಮ ರಕ್ಷಾಪಠಣ ದೀಪ ಪಟ್ಟಣದಲ್ಲಿ ಭಾನುವಾರ ವಿವೇಕ ಬಳಗದ ವತಿಯಿಂದ ರಾಮಭಕ್ತರು ಪ್ರತಿ ಮನೆಗೆ ತೆರಳಿ ಶ್ರದ್ದೆ ಭಕ್ತಿಯಿಂದ ವಿತರಿಸಿ ಭಕ್ತಿ ಭಾವ ಮೆರೆದರು.
ಪಟ್ಟಣದ ಓಂ ಶಾಂತಿ ಆಶ್ರಮದಲ್ಲಿ ವಿವೇಕ ಬಳಗದ
ವತಿಯಿಂದ ಪೂಜೆ ಸಲ್ಲಿಸಿ, ಜೈ ಶ್ರೀ ರಾಮ್ ಘೋಷಣೆ
ಮೊಳಗಿಸಿ, ರಾಮನ ಭಾವಚಿತ್ರ ಹಾಗೂ ರಾಮ ರಕ್ಷಾ ಪಠಣ ದೀಪ ಹಂಚಿಕೆ ಮಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾಶ್ರಿ ಪಾಟೀಲ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆಯಾಗುತ್ತಿರುವುದು ಇಡೀ ದೇಶ ಸಂತೋಷಪಡುವ ವಿಷಯವಾಗಿದೆ. ರಾಮ ರಕ್ಷಾಪಠಣ ದೀಪ ಪ್ರತಿಯೋಂದು ಮನೆಯಲ್ಲಿ ಬೆಳಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿ.ಕೆ. ಯಮುನಾ ಅಕ್ಕ, ದ್ರಾಕ್ಷಾಯಣಿ, ಉಮಾ
ಪಟ್ಟದಕಲ್ಲ, ಸಂಗಾ ಸಿಸ್ಟರ್ ಸೇರಿದಂತೆ ವಿವೇಕ ಬಳಗದ
ಮಾತೆಯರು ಉಪಸ್ಥಿತರಿದ್ದರು.
ಇಂಡಿ: ಪಟ್ಟಣದ ಓಂ ಶಾಂತಿ ಆಶ್ರಮದಲ್ಲಿ ವಿವೇಕ ಬಳಗದ ವತಿಯಿಂದ ರಾಮ ರಕ್ಷಾ ಪಠಣ ದೀಪವನ್ನು ಪೂಜೆ ಸಲ್ಲಿಸಿದರು.