ಅಕ್ಷರವಂತರು ಶಿಕ್ಷಕರನ್ನು ಆರಾಧಿಸಲಿ – ಯಶವಂತರಾಯಗೌಡರು
ಇಂಡಿ : ಗುರು ಬ್ರಹ್ಮಗಿಂತಲೂ ದೊಡ್ಡವ, ಗುರು ತನ್ನ ವಿದ್ಯಾರ್ಥಿ ಎದುರು ಸೋತಾಗಲೇ ಆತನ ಗೆಲವು ಸಾಧ್ಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು. ಪಟ್ಟಣದ ಗುರುಭವನದಲ್ಲಿ ಆಯೋಜಿಸಿದ ಶಿಕ್ಷಕ ದಿನಾಚರಣೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ೬೨ ಸಾವಿರ ಮಕ್ಕಳ ಭವಿಷ್ಯ ರೂಪಿಸುವ ಕಾರ್ಯ ಶಿಕ್ಷಕರ ಕೈಯಲ್ಲಿ ಇದೆ. ಸೃಷ್ಠಿಯನ್ನು ಬ್ರಹ್ಮನು ರಚಿಸಿದರೆ ಶಿಕ್ಷಕ ಪ್ರಪಂಚದ ಶಿಲ್ಪಿಯಾಗಿದ್ದಾನೆ. ಶಿಕ್ಷಕರು ಮಕ್ಕಳ ಅಭಿರುಚಿಗೆ ಅನುಗುಣವಾಗಿ ಶಿಕ್ಷಣ ನೀಡಲು ಹೇಳಿದರು.
ಅತಿಥಿಯಾಗಿ ಡಾ. ಯಶವಂತ ಕೊಕ್ಕನವರ, ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತçದ ಶಿಕ್ಷಕರ ಮೌಲ್ಯಯುತ ಪವಿತ್ರ ಜೀವನದ ಕುರಿತು ಮಾತನಾಡಿದರು. ಪ್ರಾಸ್ತಾವಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸಯೀದಾ ಮುಜಾವರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಗ್ಯಾರಂಟಿ ಸಮಿತಿ ಜಿಲ್ಲಾ ಅಧ್ಯಕ್ಷ ಇಲಿಯಾಸ ಬೋರಾಮಣಿ, ಶಿವಯೋಗಪ್ಪ ಚನಗೊಂಡ, ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾಹೂರ, ಆರ್.ವಿ.ಪಾಟೀಲ, ವಾಯ್.ಟಿ. ಪಾಟೀಲ, ಎಸ್.ವಿ.ಹರಳಯ್ಯ, ಎಸ್.ಡಿ.ಪಾಟೀಲ, ನಿಜಣ್ಣ ಕಾಳೆ, ಬಿವಾಯ್ ಗೊರನಾಳ ಮತ್ತಿತರಿದ್ದರು. ನಿವೃತ್ತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಆರ್.ನಡಗಡ್ಡಿ, ನೊಡೆಲ್ ಅಧಿಕಾರಿ ಎ.ಓ.ಹೂಗಾರ ಮಾತನಾಡಿದರು.
ಇಂಡಿ ಪಟ್ಟಣದ ಗುರುಭವನದಲ್ಲಿ ಆಯೋಜಿಸಿದ ಶಿಕ್ಷಕ ದಿನಾಚರಣೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿದರು.



















