ಜೀವನಕ್ಕೆ ಆಶ್ರಯಯಾಗಿದ್ದ ಲಿಂಬೆ ಗಿಡಗಳು ಸುಟ್ಟು ಕರಕಲು: ಪರಿಹಾರದ ವಿಶೇಷ ಪ್ಯಾಕೇಜಗೆ ಆಗ್ರಹ..!
ಇಂಡಿ : ಜೀವನಕ್ಕೆ ಆಶ್ರಯಯಾಗಿದ್ದ, ಟ್ಯಾಂಕರ ಮೂಲಕ ನೀರು ಹಾಕಿ ಮಗುವಿನಂತೆ ಬೆಳಸಿದ ಲಿಂಬೆ ಗಿಡಗಳು ಆಕಸ್ಮಿಕ ಬೆಂಕಿಗೆ ಆಹುತಿಯಾಗಿ ಸುಮಾರು 20 ಲಕ್ಷ ರೂಪಾಯಿ ಮೌಲ್ಯದಷ್ಟು ಹಾನಿಯಾಗಿದ್ದು, ಆ ಕುಟುಂಬ ಸಂಕಷ್ಟದಲ್ಲಿದೆ. ಈ ಕೂಡಲೇ ಸರಕಾರ ಆ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು ಎಂದು ಮೈತ್ರಿ ಪಕ್ಷದ ಮುಖಂಡರು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಹಂಜಗಿ ರಸ್ತೆಯಲ್ಲಿ ಬರುವ ಗುರುಶಾಂತ. ಚಂದ್ರಶೇಖರ ಸಾಲೋಟಗಿ ಅವರಿಗೆ ಸೇರಿದ್ದ ಜಮೀನು ಸರ್ವೇ ನಂ- 975/5ರಲ್ಲಿ ಬರುವ 3ಏಕರೆ ಲಿಂಬೆ ಗಿಡಗಳು ಆಕಸ್ಮಿಕ ಬೆಂಕಿ ಅನಾಹುತದಲ್ಲಿ ಸುಟ್ಟು ಕರಕಲಾಗಿವೆ. ಸುಮಾರು 10 ವರ್ಷದಿಂದ ಲಿಂಬೆ ಗಿಡಗಳನ್ನು ಟ್ಯಾಂಕರ ಮೂಲಕ ನೀರು ಹಾಕಿ ಮಗುವಿನಂತೆ ಜೋಪಾನ ಮಾಡಿ ಬೆಳೆಸಲಾಗಿತ್ತು. ಆದರೆ ಆಕಸ್ಮಿಕ ಬೆಂಕಿಗೆ ಆಹುತಿಯಾದ ರೈತನ ಕುಟುಂಬಕ್ಕೆ ಬರಶೀಡಿಲ ಬಡಿದಂತಾಗಿದೆ. ಕೂಡಲೇ ಸರಕಾರ ಆ ಕುಟುಂಬದ ಆಶ್ರಯ ಬರಬೇಕೆಂದು ಎಂದು ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಹೇಳಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಮಾತನಾಡಿದ ಅವರು, ಲಿಂಬೆ ಹಾನಿಯಾದ ಪ್ರದೇಶಕ್ಕೆ ಇಲ್ಲಿಯವರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಾಗಲಿ, ಲಿಂಬೆ ಅಬಿವೃದ್ಧಿ ಮಂಡಳಿ ಅಧಿಕಾರಿಗಳಾಗಲಿ ಬೇಟಿ ನೀಡಿ ಸೂಕ್ತ ಕ್ರಮದ ಭರವಸೆ ನೀಡದಿರುವುದು ವಿಪರ್ಯಾಸ. ಈ ಘಟನೆಯನ್ನು ಖಂಡಿಸಿಸುತ್ತೆನೆ ಎಂದು ಹೇಳಿದರು. ಲಿಂಬೆ ನಾಡಿನಲ್ಲಿ ಲಿಂಬೆ ಬೆಳೆಗಾರರಿಗೆ ಹಿಂತಾ ಅವಘಡಗಳು ಸಂಭವಿಸಿದಾಗ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ನಿಂಬೆ ಅಬಿವೃದ್ಧಿ ಮಂಡಳಿ ಹಾಗೂ ಸರಕಾರ ರೈತರ ನೇರವಿಗೆ ಬರಬೇಕು ಎಂದು ಮೈತ್ರಿ ಪಕ್ಷದ ಮುಖಂಡರು ಜಂಟಿಯಾಗಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ,ಬಾಳು ರಾಠೋಡ, ರಮೇಶ್ ರಾಠೋಡ, ತಿಪ್ಪಣ್ಣ ಉಟಗಿ, ಸಾಹಿಬಣ್ಣಾ ಯಲ್ಲಡಗಿ,ಬಾಪುಗೌಡ ಬಿರಾದಾರ ಸಾಹೇಬಣ್ಣಾ ಪೂಜಾರಿ, ಸಿದ್ದು ಹೂಗಾರ , ಇಬ್ರಾಹಿಂ ಚಪ್ಪರಬಂದ , ಶಿವಾನಂದ ಯಂಕಂಚಿ, ಶ್ರೀಶೈಲ ಹೂಲ್ಲೂರ, ಕಲ್ಲಪ್ಪ ಪೂಜಾರಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಬರದ ಹಿನ್ನೆಲೆಯಲ್ಲಿ ರೈತರು ಅತ್ಯಂತ ಸಂಕಷ್ಟದಲ್ಲಿದ್ದಾರೆ. ಅದರಲ್ಲಿ ಈ ಭಾಗದಲ್ಲಿ ತೋಟಗಾರಿಕೆ ಲಿಂಬೆ,ದಾಳಿಂಬೆ, ದ್ರಾಕ್ಷಿ ಯತ್ತಚ್ಚೆವಾಗಿ ಬೆಳೆಯುತ್ತಾರೆ. ಆದರೆ ಮಳೆ ಕೊರತೆಯಿಂದ ನೀರಿನ ಸಮಸ್ಯೆ ದೊಡ್ಡ ಪ್ರಮಾಣದಲ್ಲಿ ಉಲ್ಬಣಗೊಂಡಿದೆ. ಹಾಗಾಗಿ ಅನೇಕ ರೈತರು ಲಿಂಬೆ, ದಾಳಿಂಬೆ ಜೆಸಿಬಿ ಮೂಲಕ ಬೇರು ಸಮೇತ ಕಿತ್ತು ಗುಡ್ಡೆ ಹಾಕುತ್ತಿದ್ದಾರೆ. ಹಾಗಾಗಿ ಸರಕಾರ ಈ ಕೂಡಲೇ ವಿಶೇಷ ಪ್ಯಾಕೇಜ್ ಬಿಡುಗಡೆ ಮೂಲಕ ರೈತರ ನೆರವಿಗೆ ಸರಕಾರ ಬರಬೇಕು.