ಲಿಂಗಸೂಗೂರು: ಕಾನೂನು ಸುವ್ಯವಸ್ಥೆ ಕಾಪಾಡಲು ಹಳ್ಳಿಗಳತ್ತ ಪೊಲೀಸ್ ಅಧಿಕಾರಿಗಳು ಪ್ರತಿ ಶುಕ್ರವಾರ ಠಾಣಾ ವ್ಯಾಪ್ತಿಯ ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಇರುವ ಹಳ್ಳಿಗಳನ್ನು ಆಯ್ಕೆ ಮಾಡಿ ಜನರ ಕಂದುಕೊರತೆಗಳನ್ನು ಆಲಿಸುವ ಕಾರ್ಯಕ್ರಮ ಇದಾಗಿದೆ.
ಕಳೆದ ವಾರ ಮುದಗಲ್ ಹೋಬಳಿಯ ಬನ್ನಿಗೋಳ ಗ್ರಾಮದಲ್ಲಿ ಪಿಎಸ್ಐ ಡಂಬಳ್ ಅವರು ಅಲ್ಲಿನ ಜನರ ಜೊತೆ ಕುಂದುಕೊರತೆಗಳನ್ನು ಆಲಿಸಿದ್ದರು. ಇದೀಗ ಕಾಚಾಪೂರ ಗ್ರಾಮಕ್ಕೆ ಬೇಟಿ ನೀಡಿ ಗ್ರಾಮದ ಜನತೆ ಜೊತೆ ಸಭೆ ನಡೆಸಿದರು.
ಅತಿ ಹೆಚ್ಚು ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಹೊಂದಿರುವ ಹಳ್ಳಿಗಳನ್ನು ಗುರುತಿಸಿ, ಅಂತಹ ಹಳ್ಳಿಗಳಿಗೆ ಪೊಲೀಸ್ ಅಧಿಕಾರಿಗಳು ಬೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸುವದಾಗಿದೆ.
ಈ ವೇಳೆ ಮುದಗಲ್ ಠಾಣೆಯ ಪಿಎಸ್ಐ ಪ್ರಕಾಶ್ ರೆಡ್ಡಿ ಡಂಬಳ್ ಮಾತನಾಡಿ ಬಾಲ್ಯ ವಿವಾಹ ಮಾಡುವದು ಕಾನೂನು ಅಪರಾಧವಾಗಿದೆ. ಬಾಲ್ಯ ವಿವಾಹದಲ್ಲಿ ತೊಡಗಿದ ಹುಡಗ ಹಾಗೂ ಹುಡುಗಿಯ ಪೋಷಕರು, ಪುರೋಹಿತರು, ಬಾಣಸಿಗರು, ಹಾಗೂ ಟೆಂಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ.
ಇನ್ನು ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಕೇಳಿದರೆ OTP ಯನ್ನು ನೀಡಬಾರದು. ಅಕೌಂಟ್ ನಂಬರಿನ ಡಿಟೇಲ್ಸ್ ಕೊಡದಂತೆ ಎಚ್ಚರಿಕೆಯಿಂದ ಇರಬೇಕು. ಅನಧಿಕೃತ ಆ್ಯಪ್ಗಳ ಮೂಲಕ ನಿಮಗೆ 50 ಲಕ್ಷ ಬೆಲೆ ಬಾಳುವ ಕಾರು ಆಫರ್ ಬಂದಿದೆ ಎಂದು ಫೋನ್ ಕರೆ ಬಂದರೆ ಅದರಿಂದ ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಸಾರ್ವಜನಿಕರಿಗೆ ಹೇಳಿದರು.