ಇಂಡಿ : ಒಂದು ಪಕ್ಷ ಕಟ್ಟಲು ಕಾರ್ಯಕರ್ತರು ಮುಖ್ಯ. ಕಾರ್ಯಕರ್ತರು ಇಲ್ಲದೇ ಪಕ್ಷ ಕಟ್ಟಲು ಸಾಧ್ಯವಿಲ್ಲ. ಎಲ್ಲಾ ಜಾತಿ ಎಲ್ಲಾ ವರ್ಗದವರು ಸೇರಿಕೊಂಡಾಗ ಪಕ್ಷ ಕಟ್ಟಲು ಸಾಧ್ಯವಾಗುತ್ತದೆ ಎಂದು ಸಂಸದ ರಮೇಶ ಜಿಗಜಿಣಿಗಿ ಹೇಳಿದರು. ಇಂಡಿ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದ ಸಭಾಭವನದಲ್ಲಿ ಏರ್ಪಡಿಸಿದ್ದ ಬಿಜೆಪಿ ಮಂಡಳ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತಾನಾಡಿದ ಅವರು, ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ ಒಂದು ವೇಳೆ ಕಾರ್ಯಕರ್ತರು ಇಲ್ಲ ಎಂದರೆ ಪುಂಗಿ ಆಗುತ್ತದೆ ಎಂದರು.
ಪಕ್ಷದ ಹಿರಿಯರು, ಮಾರ್ಗದರ್ಶಕರು ಹೇಳಿದಂತೆ, ಪಕ್ಷದ ಗುರಿ ಉದ್ದೇಶ ಕಾರ್ಯಕ್ರಮ ಮತ್ತು ಕಾರ್ಯಗಳನ್ನು ಜನರಿಗೆ ತಲುಪಿಸಬೇಕು ಎಂದು. ಈ ೩ ತಿಂಗಳ ಹಿಂದೆ ಆಯೋಜನೆ ಗೊಳಿಸಿರುವ ಕಾರ್ಯಕ್ರಮ ಮತ್ತೇ ಮುಂಬರುವ ೩ ತಿಂಗಳಲ್ಲಿ ಮಾಡಬೇಕಾದ ಕಾರ್ಯ ಯೋಜನೆಗಳನ್ನು ರೂಪಿಸಲು, ಚರ್ಚಿಸಲು ಈ ಕಾರ್ಯಕಾರಣಿ ಸಭೆಯ ಉದ್ದೇಶ ಎಂದು ಹೇಳಿದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿ. ಅಟಲ್ ಬಿಹಾರಿ ವಾಜಪೇಯಿ ಕಾಲದಿಂದಲೂ ಇಂದಿನವರೆಗೂ ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದು ಜನರ ಸೇವೆ ಮಾಡಿದ್ದೇನೆ ಎಂದರು. ಈಗಾಗಲೇ ಪದವಿಧರ ಮತ್ತು ಶಿಕ್ಷಕರ ಮತಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆ ಬಂದಿದೆ. ಪದವಿಧರ ಕ್ಷೇತ್ರದಿಂದ ಹಣಮಂತ ನಿರಾಣಿ ಮತ್ತು ಶಿಕ್ಷಕರ ಮತಕ್ಷೇತ್ರದಿಂದ ಅರುಣ ಶಹಾಪುರ ಸ್ಪರ್ಧೆ ಮಾಡುತ್ತಾರೆ. ಈ ಹಿಂದೆ ಇಬ್ಬರೂ ಅತ್ಯುತ್ತಮವಾಗಿ, ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ. ಆದ ಕಾರಣ ತಾವುಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು .ಹಣ ಬಲದಿಂದ ಗೆಲ್ಲುತ್ತಾರೆ ಅಥವಾ ದೊಡ್ಡ ಸಮಾಜವಿರುವ ವ್ಯಕ್ತಿ ಗೆಲ್ಲತ್ತಾರೆ ಎಂಬುದು ತಪ್ಪು ಕಲ್ಪನೆಯ ಮಾತು. ನಾನು ಒಂದೇ ಒಂದು ಪೈಸೆ ಖರ್ಚು ಮಾಡಿಲ್ಲ. ಆದರೆ ಕಾರ್ಯಕರ್ತರ ಒಗ್ಗಟ್ಟಿನ ಪ್ರದರ್ಶನದಿಂದ ಗೆಲುವು ಸಾಧಿಸಿದ್ದೆನೆ. ನಾನು ಜೀವನದಾಗ ಕಾರ್ಯಕರ್ತರನ್ನು ಬಿಟ್ಟಿಲ್ಲ, ಬಿಡೊದಿಲ್ಲ ಎಂದರು.
ಮಾರಕ ರೋಗ ಕೊವಿಡ್ ದಿಂದಾಗಿ ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿ ಹಣಕಾಸಿನ ಕೊರತೆಯಿಂದ ರಸ್ತೆಗಳು ಅಭಿವೃದ್ಧಿ ಮಾಡಲಾಗಿಲ್ಲ ಎಂದರು.ತಾಲ್ಲೂಕಿನ ತಡವಲಗಾ ಜೊತೆಗೆ ಇತರೆ ರಸ್ತೆಗಳ ಕೆಟ್ಟ ಬಗ್ಗೆ ಗಮನಕ್ಕೆ ಇದೆ. ಅವುಗಳ ಕುರಿತು ಸಚಿವರ ಜೊತೆ ಮಾತಾಡಿ ಶ್ರಮಿಸುವೆ ಎಂದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಕಿವಡೆ, ಚಂದ್ರಶೇಖರ ಕವಟಗಿ, ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ್ ಶಿವರುದ್ರ ಬಾಗಲಕೋಟ, ಸಿದ್ದಲಿಂಗ ಹಂಜಿಗಿ, ಅನೀಲ ಜಮಾದಾರ , ಹಣಮಂತ್ರಾಗೌಡ ಪಾಟೀಲ್, ಮುತ್ತು ದೇಸಾಯಿ ಶ್ರೀಶೈಲಗೌಡ ಬಿರಾದಾರ, ರಾಜಶೇಖರ ಪೂಜಾರಿ, ಶೀಲವಂತ ಉಮಾರಾಣಿ, ರಾಜಕುಮಾರ ಸಗಾಯಿ, ವಿಜಯಲಕ್ಷ್ಮಿ ರೂಗಿಮಠ, ಯಲ್ಲಪ್ಪ ಹದರಿ ಉಪಸ್ಥಿತರಿದ್ದರು.