ಅಜು೯ಣಗಿ ಕೆಡಿ ಶಾಲೆಯಲ್ಲಿ ಕಲಿಕಾ ಹಬ್ಬ
ಇಂಡಿ : ತಾಲೂಕಿನ ಸಮೀಪದ ಅಜು೯ಣಗಿ ಕೆಡಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಪ್ ಎಲ್ ಎನ್ ಕಲಿಕಾ ಹಬ್ಬ ಕಾರ್ಯಕ್ರಮ ಜರೂಗೀತು ಪಾವನ ಸಾನಿಧ್ಯ ಗೋಳಸಾರದ ಪೂಜ್ಯ ಅಭಿನವ ಪುಂಡಲಿಂಗ ಶಿವಯೋಗಿಗಳು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರೂ ಆರೂಢ ಮಠ ಆಲಮೇಲದ ಪೂಜ್ಯ ಬಸವಲಿಂಗ ಶರಣರು ಶಿಕ್ಷಕ ವೃತ್ತಿ ಬಹಳ ಪವಿತ್ರವಾದದ್ದು ಮತ್ತು ಶ್ರೇಷ್ಟವಾದದ್ದು ಅನ್ಯಕ್ಷೇತ್ರೆ ಕೃತಂ ಪಾಪಂ ಪುಣ್ಯ ಕ್ಷೇತ್ರ ವಿನಶ್ಯತಿ ಪುಣ್ಯ ಕ್ಷೇತ್ರ ಕೃತಂ ಪಾಪ ವಜ್ರ ಲೇಪಿ ಭವಿಷ್ಯತಿ ಎಂದು ಹೇಳಿದರು ಜೊತೆಗೆ ಶಿಕ್ಷಕರ ಜೊತೆಗೆ ಪಾಲಕ ಬಾಲಕ ಶಿಕ್ಷಕ ಈ ತ್ರೀವೇಣಿ ಸಂಗಮ ಚೆನ್ನಾಗಿ ಗಿದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು ಅಧ್ಯಕ್ಷತೆ ಡಾ|| ಸುರೇಶ ಪ್ಯಾಟಿ ವಹಿಸಿದ್ದರೂ ಮುಖ್ಯ ಅತಿಥಿಗಳಾಗಿ C. RP ಫರ್ವೇಜ್ ಪಟೇಲ BRP ಕುಲಕರ್ಣಿ ಸರ್ ಪ್ರೌಢ ಶಾಲೆಯ ಮುಖ್ಯಗುರುಗಳಾರ ವಿನೋದ ದೊಡ್ಡ ಗಾಣಿಗೇರೆ ಡಿ.ಬಿ ಕುಂಬಾರ ಯುವ ನೇತಾರ ಮಂಜು ನಾಥ ಕಾಮಗೊಂಡ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಬ್ಯಾಗು ವಿತರಿಸಿದರೂ ಸುಮಾರು 14 ಶಾಲೆಯ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು ಮಕ್ಕಳಿಗೆ ಸಮಾರೋಪ ಸಮಾರಂಭದಲ್ಲಿ ವಿವಿಧ ರೀತಿಯ ಕಂಪಾಸು ಪೆನ್ನು ನೋಟ್ ಬುಕ್ಕು ಪ್ಯಾಡ್ ವಿತರಣೆ ಮಾಡಲಾಯಿತು ಇದೇ ಸಂದರ್ಭದಲ್ಲಿ ಶಾಲೆಯಿಂದ ವರ್ಗಾವಣೆಗೊಂಡ ಸಿ. ಎನ್ ಮಿಂಚನಾಳ ಶಿಕ್ಷಕರಿಗೆ 5ಗ್ರಾಂ ಬೆಳ್ಳಿ ಪದಕ ಉಡುಗೊರೆ ನೀಡಿ ಗೌರವಿಸಲಾಯಿತು ಕ್ಲಸ್ಟರಿಂದ 5 ಜನರಿಗೆ ಬಿಳ್ಕೋಡಲಾಯಿತು ಶಿಕ್ಷಕರತ್ನ ಪ್ರಶಸ್ತಿ ಪಡೇದ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ಈರಣ್ಣಾ ತಳವಾರ ರೇಷ್ಮಾ ಪವಾರ ಮುಂತಾದ 70 ಹೆಚ್ಚುಜನ ಶಿಕ್ಷಕರು 400 ಹೆಚ್ಚು ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು. ಮೆರವಣಿಗೆ ಉದ್ಘಾಟನೆ ಗ್ರಾಂ ಪಂಚಾಯತ್ ಅಧ್ಯಕ್ಷ ಚಿಗರಿರೆಬ್ಬಿನ್ ಕಟ್ ಮಾಡುವ ಮೂಲಕ ಅದ್ದೂರಿ ಚಾಲನೆ ನೀಡಿದರು. ಯು ಬಿ.ಎಸ್ ಶಾಲೆಯಿಂದ ಕನ್ನಡ ಗಂಡು ಮಕ್ಕಳ ಶಾಲೆ ಅರ್ಜುಣಿಗಿ ಕೆ. ಡಿ ಶಾಲೆಯವರೆಗೆ ಮೆರವಣಿಗೆ ರಾಣಿ ಚನ್ನಮ್ಮ ಒನಿಕೆ ಓಬವ್ವ ಸಂಗೊಳ್ಳಿ ರಾಯಣ್ಣ ವಿವಿಧ ವೇಶಧರಿಸಿದ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡರು ಪಂಡಿತ ಅವಜಿ ಮುಗು ಸ್ವಾಗತಿಸಿ ನಿರೂಪಿಸಿದರು ರೇಷ್ಮಾ ಪವಾರ ಗುರುಮಾತೆ ವಂದಿಸಿದರು.



















