ಶಾಸಕ ಯಶವಂತ್ರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಲು ವಕೀಲರ ಸಂಘದಿಂದ ಆಗ್ರಹ..!
ಇಂಡಿ: ಇಂಡಿ ಕ್ಷೇತ್ರದ ಶಾಸಕ ಯಶವಂತ್ರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಿ ನಮ್ಮ ಮತಕ್ಷೇತ್ರಕ್ಕೆ ಇಷ್ಟು ವರ್ಷಗಳ ಕಾಲ ಆದ ಅನ್ಯಾಯವನ್ನು ಈಗಲಾದರೂ ಸರಿಪಡಿಸುವ ಕಾರ್ಯ ಕಾಂಗ್ರೇಸ್ ಪಕ್ಷದ ವರಿಷ್ಠರು ಮಾಡಬೇಕು ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸಿದ್ದಣ್ಣ ಬೂದಿಹಾಳ ಹೇಳಿದರು.
ಅವರು ಬುಧವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿನ ವಕೀಲರ ಸಂಘದ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಸ್ವಾತಂತ್ರಾö್ಯ ನಂತರ ಇಲ್ಲಿಯವರೆಗೂ ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆತಿಲ್ಲ. ಹೀಗಾಗಿ ಪಕ್ಷಾತೀತವಾಗಿ ಇಂಡಿ ಶಾಸಕರಿಗೆ ಸಚಿವ ಸ್ಥಾನ ಸಿಗಬೇಕೆಂಬುವುದು ಕ್ಷೇತ್ರದ ಜನರ ಬಹುದೊಡ್ಡ ಆಶಯವಾಗಿದೆ. ಕಾಂಗ್ರೇಸ್ ಪಕ್ಷದ ವರಿಷ್ಠರು ಯಶವಂತ್ರಾಯಗೌಡರಿಗೆ ಸಚಿವ ಸ್ಥಾನ ನೀಡಿ ಸಚಿವ ಸ್ಥಾನ ವಂಚಿತ ಕ್ಷೇತ್ರ ಎಂಬ ಹಣೆಪಟ್ಟಿ ಅಳಕಿಸುವ ಕಾರ್ಯ ಮಾಡಬೇಕೆಂದರು.
ಇನ್ನೋರ್ವ ನ್ಯಾಯವಾದಿ ಎ.ಎಂ. ಬಿರಾದಾರ ಮಾತನಾಡಿ, ಅಭಿವೃಧ್ಧಿವಂಚಿತ ಪ್ರದೇಶವಾದ ಇಂಡಿಯನ್ನು ಅಭಿವೃಧ್ಧಿಪಡಿಸುವಲ್ಲಿ ಶಾಸಕ ಯಶವಂತ್ರಾಯಗೌಡ ಪಾಟೀಲರ ಪಾತ್ರ ಬಹುಮುಖ್ಯವಾಗಿದೆ. ಕ್ಷೇತ್ರದಲ್ಲಿ ಹಲವು ಅಭಿವೃಧ್ಧಿ ಕಾರ್ಯ ಮಾಡಿದ್ದಾರೆ. ಮೂರು ಬಾರಿ ಶಾಸಕರಾಗಿ ಉತ್ತಮ ಆಡಳಿತ ನಡೆಸುತ್ತಿರುವ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಎನ್.ಕೆ. ನಾಡಪುರೋಹಿತ, ಎಸ್.ಎಲ್. ನಿಂಬರಗಿಮಠ, ಎ.ಜೆ.ಧನಶೆಟ್ಟಿ, ಡಿ.ಜಿ. ಜೋತಗೊಂಡ, ಎಸ್.ಆರ್. ಮುಜಗೊಂಡ, ಬಿ.ಬಿ. ಬಿರಾದಾರ, ಎಸ್.ಆರ್. ಬಿರಾದಾರ, ವೈ.ಎಸ್. ಪೂಜಾರಿ, ಎಂ.ಎಸ.ಭೋಸಗಿ, ಎಸ್.ಕೆ. ರಾಠೋಡ, ಎಂ.ಎಸ್. ಪಾಟೀಲ, ಬಿ.ಬಿ. ಬಿರಾದಾರ, ಜಿ.ಎಸ್. ಪಾಟೀಲ, ಪಿ.ಬಿ. ಪಾಟೀಲ, ಎ.ಎ. ಗಜಾಕೋಶ, ಜೆ.ಬಿ. ಬೇನೂರ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ನ್ಯಾಯವಾದಿಗಳ ಸಂಘದಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಎಸ್.ಬಿ. ಬೂದಿಹಾಳ ಮಾತನಾಡಿದರು.


















