ಸಿಂಧನೂರು: ತಾಲೂಕಿನ ಕೆ. ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ಡೇರದೆ ನಾಗಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಮಳೆಯರು ಕಳಸ ಡೊಳ್ಳು ವಾದ್ಯಗಳೊಂದಿಗೆ ಪಲ್ಲಕ್ಕಿ ಮೆರವಣಿಗೆ ನಡೆಸಿ ವಿಜೃಂಭಣೆಯಿಂದ ಭಕ್ತಿಭಾವ ಮೆರೆದರು. ಇನ್ನು ಜಾತ್ರೆಗೆ ಆಗಮಿಸಿದ ಭಕ್ತರು ಭಕ್ತಿ ಪೂರ್ವಕವಾಗಿ ರಥೋತ್ಸವ ಎಳೆದರು. ಬೆಳಿಗ್ಗೆಯಿಂದ ಸಹಸ್ರಾರು ಭಕ್ತರು ದೇವರಿಗೆ ಹುಡಿ ತುಂಬುವುದು, ದೇವರಲ್ಲಿ ಇಷ್ಟಾರ್ಥ ಹರಕೆಗಳನ್ನು ಈಡೇರಿಸಿಕೊಳ್ಳಲು ನಮಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಮುತ್ತಗಯ್ಯ ಸ್ವಾಮಿ, ದೊಡ್ಡಬಸನಗೌಡ, ಶರಣಪ್ಪ ರಡ್ಡೇರ, ಅಮರೇಶ ಕಲ್ಮಂಗಿ, ಚಂದಪ್ಪ PSI, ವನಸಿರಿ ಪೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ, ಅಮರೇಶ ನೆಕಡೆ, ಹನುಮಂತಪ್ಪ ಪೂಜಾರಿ, ಸೋಮಣ್ಣ ಮಸ್ಕಿ,ಮಲ್ಲಿಕ್, ಅಂಬ್ರೇಶ್ ಗೋಮರ್ಶಿ, ಮೌನೇಶ ಬಡಿಗೇರ JE, ಶಂಕರ ನಾಯಕ ಪತ್ರಕರ್ತರಾದ, ಬಸವರಾಜ ಬೈರಾಪೂರ, ಚನ್ನಪ್ಪ ವಿಶ್ವಕರ್ಮ, ಶರಣಪ್ಪ ಅಬ್ಬಗೇರಿ, ಬಸವರಾಜ ದಳಪತಿ, ವೀರೇಶ ಕಾರಲಕುಂಟಿ, ಹೊಳೆಯಪ್ಪ ಗೋಮರ್ಶಿ, ಇನ್ನಿತರರು ಉಪಸ್ಥಿತರಿದ್ದರು.