ಇಂಡಿ: ಭಾವಕೈತ್ ಸಂತ್ ಇಬ್ರಾಹಿಂ ಸುತ್ತಾರ ಮತ್ತು ಖ್ಯಾತ ಗಾನ ಕೋಗಿಲೆ ಲತಾ ಮಂಜಷ್ಕರ್ ನ್ನು ಕಳೆದುಕೊಂಡಿದ್ದು ಯಾರಿಂದಲೂ ಭರಿಸಲಾದ ನಷ್ಟ ಎಂದು ಶಾಂತಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅಯೂಬ್ ನಾಟೀಕಾರ ಹೇಳಿದರು.
ನಿಂಬೆ ನಾಡಿನ ಇಂಡಿ ಪಟ್ಟಣದ ಬಸವೇಶ್ವರ ವೃತ್ ದಲ್ಲಿ ಕರವೇ ಕಾರ್ಯಕರ್ತರು ಮತ್ತು ವಿವಿಧ ಸ್ನೇಹಿತರ ಬಳದ ಸೇರಿಕೊಂಡು ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ಇಬ್ರಾಹಿಂ ಸುತಾರ್ ಅವರು ಕರುನಾಡಿನಲ್ಲಿ ಹಿಂದೂ ಮುಸ್ಲಿಂ ಬಂದುಗಳಿಗೆ ಭಾವೈಕ್ಯತೆ ಸೂಫಿ ಸಂತರಾಗಿದ್ದರು. ಅವರ ಅಗಲಿಕೆ ದೊಡ್ಡ ಪ್ರಮಾಣದ ಹಾನಿ ಮಾನವ ಕುಲಕ್ಕೆ ತಂದಿದೆ. ಅದರಂತೆ ಖ್ಯಾತ ಗಾನ ಕೋಗಿಲೆ ಲತಾ ಮಂಜಷ್ಕರ ಇಡೀ ಭಾರತ ದೇಶಕ್ಕೆ ದೊಡ್ಡ ಕೊಡುಗೆ ನೀಡದ ಹೆಮ್ಮೆಯ ಗಾಯಕಿ, ಇವರು ಎ ಮೆರೆ ವತನಕ್ಕೆ ಎಂಬ ಗೀತೆಯ ಮೂಲಕ ರಾಷ್ಟ್ರದ ಜನರಲ್ಲಿ ದೇಶಾಭಿಮಾನ ಮೂಡಿಸಿದ್ದಾರೆ. ಹಲವಾರು ಭಾಷೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಗೀತೆಗಳನ್ನು ಹಾಡಿ ಜನರಿಗೆ ಊಣಬಡಿಸಿದ್ದಾರೆ ಎಂದು ಹೇಳಿದರು. ಈ ಇಬ್ಬರ ಅಗ್ರಗಣ್ಯರ ಕೊಡುಗೆ ಅಪಾರವಾಗಿದೆ. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಎಲ್ಲಾ ಪ್ರಮುಖ ಪ್ರದೇಶಗಳಲ್ಲಿ ಪ್ರತಿಮೆ ಮಾಡಿ ಗೌರವಸಿಬೇಕು ಮತ್ತು ಸರಕಾರಿ ಕಛೇರಿಗಳಲ್ಲಿ ಇವರನ್ನು ಸ್ಮರಿಸಿಕೊಳ್ಳುವ ಕಾರ್ಯಕ್ರಮ ನಡೆಯಬೇಕು ಎಂದರು. ಇವತ್ತು ಸಮಾಜದಲ್ಲಿ ವ್ಯಯಕ್ತಿಕ ಸ್ವಾರ್ಥಕ್ಕಾಗಿ ಶಾಂತಿ, ಸೌಹಾರ್ದತೆ ಸಹಬಾಳ್ವೆಗೆ ದಕ್ಕೆ ತರುತ್ತಿದ್ದಾರೆ. ದಯಮಾಡಿ ಅರ್ಥಮಾಡಿಕೊಂಡು ಹೋಗುದು ಬಹಳ ಮುಖ್ಯವಾಗಿದೆ. ನಾವು ನೀವು ಎಲ್ಲರೂ ಒಂದೇ, ನಮ್ಮ ನಿಮ್ಮ ಹತ್ತೀರ ಹರಿಯುವ ರಕ್ತ ಒಂದೇ, ಯಾರದೋ ಸ್ವಾರ್ಥದ ವಿಚಾರ ಮಾತಿಗೆ ಮರಳಾಗಿ ಸೌಹಾರ್ದತೆ ದಕ್ಕೆ ಬೇಡ, ನಮ್ಮ ದೇಶ ಅನೆಕತಾದಲ್ಲಿ ಏಕತಾ ಇದೆ ಎಂದು ಹೇಳಿದರು.
ಇದೇ ವೇಳೆಯಲ್ಲಿ ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ಕೂಡ ಶ್ರದ್ಧಾಂಜಲಿ ಭಾಗವಹಿಸಿ ಸುತಾರ್ ಅವರ ಜೀವಮ ಚರಿತ್ರೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಅಲ್ಲದೇ ಜಾತಿ ಭೇದಭಾವ ಮಾಡದೇ ಸರ್ಮ ಧರ್ಮದಂತೆ ಎಲ್ಲರೂ ಸಮಾಜದಲ್ಲಿ ಬದುಕು ಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಕರವೇ ಅಧ್ಯಕ್ಷ ಶಿವು ಮಲಕಗೊಂಡ, ಫಯಾಜ ಬಾಗವಾನ, ಮುಸ್ತಾಕ ನಾಯ್ಕೋಡಿ,ರಮಜಾನ ವಾಲಿಕಾರ,ದಸ್ತಗೀರ ಶೇಖ,ಮುಜಮಿಲ ಬಾಗವಾನ, ಸೊಹೇಲ ಪಠಾಣ,ನಸರುದ್ದೀನ ಮಲಘಾಣ, ಎಜಾಜ ಮುನಶಿ, ಇಸ್ಮಾಯಿಲ್ ಮುನಶಿ,ಸಂತೋಷ ಕರಣಿ ಉಪಸ್ಥಿತರು.