ವಿಜಯಪುರ : ಬೆಳ್ಳಂಬೆಳಿಗ್ಗೆ ಜವರಾಯನ ಅಟ್ಟಹಾಸದಿಂದ ಸ್ಥಳದಲ್ಲೇ ಅಪ್ಪ – ಮಗನ ದಾರಣ ಸಾವು. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ -ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ ಪರಿಣಾಮ ತಂದೆ ಮಗ ಸ್ಥಳದಲ್ಲೇ ಮೃತ ಪಟ್ಟ ಘಟನೆ ನಡೆದಿದೆ. ರಾಮ ಶರಣಪ್ಪ ಗೊರನಾಳ (45), ಮಗ ಲಕ್ಷ್ಮಣ (22) ತಂದೆ-ಮಗ ಕನ್ನೊಳ್ಳಿಯಿಂದ ದೇವರಹಿಪ್ಪರಗಿ ಕಡೆಗೆ ಹೊರಾಟಾಗ ಅವಘಡ ಸಂಭವಿಸಿದೆ. ದೇವರಹಿಪ್ಪರಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.