ಮಕ್ಕಳಲ್ಲಿ ಸಂಸ್ಕಾರದ ಕೊರತೆ: ಶಾಂತಮಯ ಶ್ರೀ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಆಧುನೀಕತೆ ಭರಾಟೆಯಲ್ಲಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳ ಕೊರತೆ ಎದ್ದು ಕಾಣುತ್ತಿದ್ದು ಮತ್ತೊಂದೆಡೆ ತಲೆ ಕೆಳಗೆ ಮಾಡುವಂತ ಮಕ್ಕಳ ಉಡುಗೆ ತೊಡುಗೆಗಳು ಅಸಹ್ಯ ಸ್ಥಿತಿಯಲ್ಲಿವೆ, ಇದು ಸಮಾಜದ ಪಿಡುಗು ಎಂದು ಸರೂರಿನ ಶಾಖಾ ಮಠ ಅಗತಿರ್ಥದ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮೀಗಳು ಹೇಳಿದರು.
ತಾಲ್ಲೂಕಿನ ಘಾಳಪೂಜಿ ಗ್ರಾಮದ ಆರಾದ್ಯ ದೈವ ಬೀರಲಿಂಗೇಶ್ವರ ಜಾತ್ರೆ ನಿಮತ್ತ ಹಮ್ಮಿಕೊಂಡಿದ್ದ ನಾನಾ ಕಾರ್ಯಕ್ರಮಗಳು ಹಾಗೂ ಧರ್ಮಸಭೆಯನ್ನು ದೀಪ ಬೆಳಗಿಸಿ ಮಾತನಾಡಿದರು.
ಹೆತ್ತವರಲ್ಲಿ ಮಕ್ಕಳ ಪಾಲನೆ ಪೋಷಣೆಯ ಕಾಳಜಿ ಇರಬೇಕು, ಇತ್ತೀಚಿನ ದಿನಮಾನಗಳಲ್ಲಿ ಕಳೆಯುತ್ತೀರುವ ಒಂದೊಂದು ಗಳಿಗೆಯೂ ಗಂಡಾಂತರ ಉಂಟು ಮಾಡುವ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ ಪಾಲಕರು ಎಚ್ಚರವಹಿಸಿ ಮಕ್ಕಳನ್ನು ಉತ್ತಮ ಸಂಸ್ಕಾರದತ್ತ ಬೆಳೆಸಿ ಎಂದರು.
ಘಾಳಪೂಜಿ ಗ್ರಾಮ ಧಾರ್ಮಿಕ ಕ್ಷೇತ್ರದ ತಾಣವಾಗಿದೆ ದೇಗುಲಗಳು ತಲೆ ಎತ್ತುತ್ತೀವೆ ಇದಕ್ಕೆ ನಿಮ್ಮಲ್ಲಿರುವ ಧಾರ್ಮಿಕ ನಂಬಿಕೆ ಎಂದ ಅವರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದಾನ ಧರ್ಮದತ್ತ ಮುಖ ಮಾಡಿ ಎಂದರು.
ಈ ವೇಳೆ ಕಂದಾಯ ನಿರೀಕ್ಷಕರಾದ ಗಂಗಾಧರ ಜೂಲಗುಡ್ಡ ಅವರು ಗ್ರಾಮದಲ್ಲಿ ನಡೆದು ಬಂದ ನಾನಾ ಧಾರ್ಮಿಕ ಕಾರ್ಯಗಳು ಮತ್ತು ಸ್ಥಳಿಯರ ಹೊಂದಾಣಿಕೆ ಕುರಿತು ಪ್ರಸ್ತಾವೀಕವಾಗಿ ಮಾತನಾಡಿದರು, ನಂತರ ವೇದಿಕೆಯಲ್ಲಿದ್ದ ಲೊಟಗೇರಿಯ ದೇವಿ ಆರಾಧಕರಾದ ಡಾ.ಗುರುಮೂರ್ತಿ ಕಣಕಾಲಮಠ, ಸರೂರಿನ ಸಿದ್ದಯ್ಯ ಗುರುವಿನ,ಸೋಮೇಶ್ವರ ಆಶ್ರಮ ಗುಬ್ಬೇವಾಡದ ಕನ್ನಯ್ಯ ಮಹಾರಾಜರು, ಜಂಬಗಿಮಠದ ಶಂಕರಲಿಂಗ ಮಹಾಸ್ವಾಮೀಗಳು, ಕೊಡೇಕಲ್ ಅನಾಥಾಶ್ರಮದ ದಾವಲಮಲೀಕ ಅಜ್ಜನವರು,ಚನ್ನಯ್ಯ ಹಿರೇಮಠ,ಬಸಯ್ಯ ಹಿರೇಮಠ ಅವರು ಮಾತನಾಡಿ ಕಳೆದ ಹಲವು ವರ್ಷಗಳಿಂದಲೂ ಪ್ರತೀಷ್ಟೀತರ ಗ್ರಾಮವಾದ ಘಾಳಪೂಜಿ ಯಲ್ಲಿ ಹಬ್ಬ ಹರಿದಿನ ಹಾಗೂ ಜಾತ್ರೆಗಳನ್ನು ಮಾಡುತ್ತಾ ಬಂದಿರುವುದು ಇಲ್ಲಿ ಜಾತಿಯೇ ಇಲ್ಲ ಎಂಬಂತೆ ರೇವಣಸಿದ್ದೇಶ್ವರ, ಬೀರಲಿಂಗೇಶ್ವರ ಮತ್ತು ಚನ್ನಬಸವೇಶ್ವರರ ಜಾತ್ರೆಗಳನ್ನು ಆಚರಿಸುತ್ತೀರುವುದು ನಿಜಕ್ಕೂ ಸ್ಥಳಿಯರ ಹೊಂದಾಣಿಕೆ ಮೆಚ್ಚುವಂತಹದ್ದು ಎಂದರು.
ಮೆರವಣಿಗೆ: ಕಾರ್ಯಕ್ರಮಕ್ಕೂ ಮುಂಚೆ ಗ್ರಾಮದ ವಿವಿಧ ಬೀದಿಗಳಲ್ಲಿ ಗೊಂಬೆ ಕುಣಿತ, ಡೊಳ್ಳಿನ ನೃತ್ಯ, ಕಳಸ ಮತ್ತು ಪಲ್ಲಕ್ಕಿ ಮೆರವಣಿಗೆ ವಿಜ್ರಂಭಣೆಯಿಂದ ನೆರವೇರಿತು. ನಂತರ ದೇಗುಲಕ್ಕೆ ಕಳಸಾರೋಹಣ ಗಮನ ಸೆಳೆಯಿತು.ರಾತ್ರಿ ನಾನಾ ಬಗೆಯ ಡೊಳ್ಳಿನ ಪದಗಳು ಮತ್ತು ಸಂಗೀತ ಸಂಜೆ ನೆರವೇರಿತು. ಮಲ್ಲಣ್ಣ ಹೂಗಾರ ಹಾಗೂ ನಾರಾ ಹಣಮಂತ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿದ್ದ ಶ್ರೀಗಳನ್ನು ಜಾತ್ರಾ ಸಮೀತಿಯ ಸದಸ್ಯರಾದ ಬಸಣ್ಣ ಹುಗ್ಗಿ,ಯಲ್ಲಪ್ಪ ನಾಗರಬೆಟ್ಟ, ಮಲ್ಲಪ್ಪ ಜೂಲಗುಡ್ಡ, ಚನಬಸಪ್ಪ ಹಾದಿಮನಿ, ಶಿವಪುತ್ರಪ್ಪ ಬಂಗಾಳಿ, ಸುರೇಶ ಹುಗ್ಗಿ, ರೇವಣಸಿದ್ದಪ್ಪ ದಳಪತಿ, ಬೀರಪ್ಪ ನಾಗರಬೆಟ್ಟ, ಬಿ.ಕೆ.ಮಂಗಳೂರ, ನಾಗೇಶ ಬಾಚಿಹಾಳ, ಐ.ಜಿ.ನಾಡಗೌಡ, ಚಿದಾನಂದ ಲೊಟಗೇರಿ, ಚನ್ನಪ್ಪ ರಡ್ಡಿ, ಹಣಮಂತ ನಾಗರಬೆಟ್ಟ ಹಾಗೂ ಬಸಪ್ಪ ಗೌಂಡಿ ಅವರು ಸಾಮೂಹಿಕವಾಗಿ ಶ್ರೀಗಳನ್ನು ಸನ್ಮಾನಿಸಿ ಗೌರವಿಸಿದರು.