ಕಾರ್ತಿಕ ದೀಪೋತ್ಸವ ಬೆಳಕಿನಲ್ಲಿ ಕಂಗೊಳಿಸಿದ ಲಚ್ಯಾಣ ಕಮರಿಮಠ
ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದ ಶ್ರೀ ಸಿದ್ಧಲಿಂಗ ಮಹಾರಾಜರ ಕಮರಿಮಠದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಬಂಥನಾಳದ ಶ್ರೀ ಡಾ. ವೃಷಭ ಲಿಂಗೇಶ್ವರ ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ನಿತ್ಯ ಸಂಜೆ ಕಾರ್ತಿಕ ದೀಪೋತ್ಸವ ಆಯೋಜಿಸಲಾಗಿದ್ದು, ಈ ದೀಪೋತ್ಸವದಲ್ಲಿ ನಿತ್ಯ ಭಕ್ತರು ಪಾಲ್ಗೊಂಡು ದೀಪ ಬೆಳಗಿ ಸಂಭ್ರಮಿಸುತ್ತಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಜರುಗಿದ ಈ ಕಾರ್ಯಕ್ರಮದಲ್ಲಿ ಸ್ಥಳೀಯ ನಿತ್ಯ ಒಬ್ಬರು ಭಕ್ತರು ಉಂಬಾಎಣ ್ಣ, ತಮ್ಮ ಜಮೀನಿನಲ್ಲಿ ಬೆಳೆದ ಹತ್ತಿಯಿಂದ ತಯಾರಿಸಿದ ಬತ್ತಿ, ಫಲ, ಪುಷ್ಪ, ಊದುಬತ್ತಿ, ತೆಂಗಿನ ಕಾಯಿ, ಕರ್ಪೂರದೊಂದಿಗೆ ಸಂಜೆ ಕಮಾರಿಮಠಕ್ಕೆ ಆಗಮಿಸಿ ಅತ್ತ ಸೂರ್ಯನು ತನ್ನ ತಾಯಿಯ ಮಡಿಲು ಸೇರುತ್ತಿದ್ದಂತೆ ಇತ್ತ ಮಠದ ಆವರಣದಲ್ಲಿ ಮುದ್ದು ಮಕ್ಕಳು, ಶಾಲಾ ವಿದ್ಯಾರ್ಥಿಗಳು, ಮಹಿಳೆಯರು ಮಣ ್ಣನ ಪಣತೆಯಲ್ಲಿ ಬತ್ತಿ ಇಟ್ಟು ತೈಲ ಹಾಕಿ, ಸಂತಸ ಭಾವದಿಂದ ದೀಪ ಹಚ್ಚಿ, ದೀಪದಿಂದ ದೀಪ ಬೆಳಗಿ ಪೂಜೆ ಸಲ್ಲಿಸಿ ತೆಂಗಿನ ಕಾಯಿ ಒಡೆದು ಮಕ್ಕಳಿಗೆ ಫಳಾರ ಪ್ರಸಾದ ವಿತರಿಸಿ ಸಂಭ್ರಮಿಸಿದ ನೋಟ ಇಲ್ಲಿ ಕಾಣುವಂತಾಗಿದೆ. ಕಳೆದ ದೀಪಾವಳಿ ಅಮಾವಾಸ್ಯೆಯಿಂದ ಆರಂಭವಾದ ಈ ಕಾರ್ತಿಕ ದೀಪೋತ್ಸವ ಬರುವ ಜಟ್ಟಿ ಅಮಾವಾಸ್ಯೆಯ ವರೆಗೆ ಜರುಗಲಿದೆ. ವಿಶೇಷವಾಗಿ ಸ್ಥಳಿಯ ಶ್ರೀ ಸಂಗನಬಸವೇಶ್ವರ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಥ್ ನೀಡಿದರು. ಉತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಮಠದ ವತಿಯಿಂದ ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇಂಡಿ ತಾಲೂಕಿನ ಲಚ್ಯಾಣದ ಶ್ರೀ ಸಿದ್ಧಲಿಂಗೇಶ್ವರ ಮಠದಲ್ಲಿ ಕಾರ್ತಿಕ ದೀಪೋತ್ಸವದ ಸಂಭ್ರಮದ ನೋಟ