ನೀತಿ ಸಂಬಂಧದ ಸಂದೇಶ ಸಾರಿದ ನಾಗಲಿಂಗರು: ಬಂಥನಾಳ ಶ್ರೀ
ಅಜಾತ ನಾಗಲಿಂಗ ಅಜ್ಜನವರ ಜೀವನ ಚರಿತ್ರೆಯ ಕುರಿತ ಪುರಾಣ
ಇಂಡಿ : ಪುರಾಣ ಪುರುಷ ನಾಗಲಿಂಗ ಅಜ್ಜನವರು ಭಕ್ತೆ ಮಾದರ ಭೀಮವ್ವಳ ಮನೆಯಲ್ಲಿ ನೆಲೆಸಿ, ಪ್ರಸಾದ ಸ್ವಿಕರಿಸಿ ಭಕ್ತಿಗೆ ಜಾತಿ ಸಂಬಂಧ ಇಲ್ಲ. ಅದು ನೀತಿ ಸಂಬಂಧವಾಗಿರುತ್ತದೆ ಎಂಬ ಸಂದೇಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದು ಬಂಥನಾಳದ ಶ್ರೀ ಡಾ. ವೃಷಭಲಿಂಗ ಮಹಾಶಿವಯೋಗಿಗಳು ಹೇಳಿದರು.
ತಾಲೂಕಿನ ಲಚ್ಯಾಣದಲ್ಲಿ ಸದ್ಗುರು ಶ್ರೀ ಸಿದ್ಧಲಿಂಗ ಮಹಾರಾಜರ ೯೭ನೇ ಪುಣ್ಯಾರಾಧನೆಯ ಅಂಗವಾಗಿ ಮದರಖಂಡಿಯ ಶ್ರೀ ನಿಜಗುಣದೇವ ಮಹಾಸ್ವಾಮೀಜಿ ೫ನೇ ದಿನವಾದ ಸೋಮವಾರದಂದು ನಡೆಸಿಕೊಟ್ಟ ಅಜಾತ ನಾಗಲಿಂಗ ಅಜ್ಜನವರ ಜೀವನ ಚರಿತ್ರೆಯ ಕುರಿತ ಪುರಾಣ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಬಂಥನಾಳದ ಶ್ರೀ ಶಂಕರಲಿಂಗ ಮಹಾಶಿವಯೋಗಿಗಳು ಜಂಗಮರಾಗಿ ಪಂಚಾಳ ಕುಲದ ಸಿದ್ದಲಿಂಗನಿಗೆ ದೀಕ್ಷೆ ನೀಡಿದರು. ಅದೇ ರೀತಿ ಸಿದ್ಧಲಿಂಗರು ಹಾಲುಮತದ ಯಲ್ಲಪ್ಪನಿಗೆ ದೀಕ್ಷೆ ನೀಡಿದಾಗ ಯಲ್ಲಾಲಿಂಗರಾದರು. ಇದಲ್ಲದೆ ಗಂಗಾಮತದ ಕ್ಷೀರಾಲಿಂಗರಿಗೂ ದೀಕ್ಷೆ ನೀಡಿ, ಬಸವ ತತ್ವದ ಪ್ರವರ್ತಕರಾದ ಬಂಥನಾಳದ ಈ ಹಿಂದಿನ ಪೀಠಾಧೀಶರಾಗಿದ್ದ ಶ್ರೀ ಸಂಗನಬಸವ ಶ್ರೀಗಳಿಗೆ ಸಂತೃಪ್ತಿ ನೀಡಿದರು ಎಂದು ಸ್ಮರಿಸಿದರು.
ಅಡವಿಲಿಂಗ ಮಹಾರಾಜರು ಮಾತನಾಡಿ, ಮನುಷ್ಯ ಸೃಷ್ಟಿಗೆ ಕೃತಜ್ಞತೆ ಸಲ್ಲಿಸಬೇಕು. ನಿಸರ್ಗಕ್ಕೆ ಋಣ ಯಾಗುವ ಜೊತೆಗೆ ನೀಡುವ ಗುಣ ಮನುಷ್ಯ ಹೊಂದಿರಬೇಕು ಎಂದರು.
ಅಗರಖೇಡದ ಅಭಿನವ ಪ್ರಭುಲಿಂಗೇಶ್ವರ ಮಹಾಸ್ವಾಮೀಜಿ,
ಪ್ರವಚನಕಾರರಾದ ಮದರಖಂಡಿಯ ಶ್ರೀ ನಿಜಗುಣದೇವ ಮಹಾಸ್ವಾಮೀಜಿ ನಾಗಲಿಂಗರ ಜೀವನ ಚರಿತ್ರೆಯನ್ನು ಕುರಿತು, ಹಣಮಂತ ಕಾಗವಾಡ ಮಾತನಾಡಿದರು.
ಮಠದಲ್ಲಿ ನಿಯೋಜಿತ ಶಿಖರ ಮೇಲಿನ ಕಳಶಕ್ಕಾಗಿ ೨೫ ಗ್ರಾಂ. ಬಂಗಾರ ದೇಣ ಗೆ ನೀಡಿದ ಸ್ಥಳಿಯ ಭಕ್ತ ಪರಮಾನಂದ ಚಾಂದಕವಠೆ ಅವರಿಗೆ ಬಂಥನಾಳ ಪೂಜ್ಯರು ಸನ್ಮಾನಿಸಿ ಆಶಿರ್ವದಿಸಿದರು.
ಗವಾಯಿ ರುದ್ರಪ್ಪ ಹೂಗಾರ ಹಾಗೂ ತಬಲಾವಾದಕ ನಿರಂಜನ ರುಇಕರ ಸಂಗೀತ ಸೇವೆ ಸಲ್ಲಿಸಿದರು. ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡ, ಡಿ.ಎಸ್. ಪಾಟೀಲ, ವ್ಹಿ.ಎಂ. ಕರಾಳೆ, ಎಂ.ಎಸ್. ಮುಜಗೊಂಡ, ಸಂಕಪ್ಪಗೌಡ ಬಿರಾದಾರ, ವ್ಹಿ.ಸಿ. ಬಿರಾದಾರ ಸತ್ತಲ ಲೋಣ . ಕೆ.ಡಿ, ಬರಗೂಡಿ, ಆಳೂರ, ಅಹಿರಸಂಗ, ಪಡನೂರ ಸೇರಿದಂತೆ ವಿವಿಧ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.
ಇಂಡಿ ತಾಲೂಕಿನ ಲಚ್ಯಾಣದಲ್ಲಿ ಸದ್ಗುರು ಶ್ರೀ ಸಿದ್ಧಲಿಂಗ ಮಹಾರಾಜರ ೯೭ನೇ ಪುಣ್ಯಾರಾಧನೆಯ ಅಂಗವಾಗಿ ವೃಷಭಲಿಂಗೇಶ್ವರ ಶ್ರೀಗಳು ಮಾತನಾಡಿದರು.