ಸಿರವಾರ: ನೂತನ ಬಸ್ ನಿಲ್ದಾಣಕ್ಕಾಗಿ ಹಳೆ ಬಸ್ ನಿಲ್ದಾಣದ ಕಟ್ಟಡ ಬಿಳಿಸುವಾಗ ಛಾವಣಿ, ಗೋಡೆ ಕುಸಿದು ಕಾರ್ಮಿಕ ಸಾನವನ್ನಪ್ಪಿದ ಘಟನೆ ಜರುಗಿದೆ.
ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಹಳೇ ಬಸ್ ನಿಲ್ದಾಣ ಸುಮಾರ ೫೦ ವರ್ಷಗಳ ಹಳೆಯ ಕಟ್ಟಡವಾಗಿತ್ತು. ಬೆಳಗಾವಿ- ಹೈದ್ರಾಬಾದ್ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವದರಿಂದ 3 ಕೊಟಿ ರೂ. ವೆಚ್ಚದಲ್ಲಿ ನೂತನವಾಗಿ ಬಸ್ ನಿಲ್ದಾಣ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು.
ಹಳೆಯ ಕಟ್ಟಡವನ್ನು ಕೆಡುವ(ಬಿಳಿಸಲು) ಟೆಂಡರ್ ನೀಡಲಾಗಿತ್ತು. ಕಳೆದೊಂದು ವಾರದಿಂದ ಕಾಮಗಾರಿ ಪ್ರಾರಂಭವಾಗಿ ದಿನ ನಿತ್ಯದಂತೆ ಕಾಮಗಾರಿ ಮಾಡುವಾಗ ಕಾರ್ಮಿಕ ಬಾಬು (36) ಎನ್ನುವವರ ಮೇಲೆ ಛಾವಣಿ ಹಾಗೂ ಗೋಡೆ ಕುಸಿತವಾಗಿರುವದರಿಂದ ಸ್ಥಳದಲ್ಲಿಯೇ ವ್ಯಕ್ತಿ ಅಸುನೀಗಿದ್ದಾನೆ.
ಗುತ್ತಿಗೆದಾರರ ನಿರ್ಲಕ್ಷ:- ಹಳೆ ಕಟ್ಟಡವಾಗಿರುವ ಕಾರಣ ಜೆ.ಸಿ.ಬಿ ಯಂತ್ರದಿಂದ ಕಟ್ಟಡವನ್ನು ನೆಲಸಮ ಮಾಡಬೇಕಾಗಿತ್ತು . ಆದರೆ ಕಾರ್ಮಿಕರ ಮೂಲಕ ಕಾಮಗಾರಿ ಮಾಡಿಸಿರುವುದು ಗುತ್ತೆದಾರರ ನಿರ್ಲಕ್ಷ್ಯವಾಗಿದೆ. ನಿತ್ಯ ಬಸ್ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ಓಡಾಟ ಇರುವ ಬಸ್ ನಿಲ್ದಾಣದ ಕಾಮಗಾರಿ ಸುತ್ತಮುತ್ತ ತಡೆಗೊಡೆ ನಿರ್ಮಾಣ ಮಾಡಿಲ್ಲ.
ಇದು ಸಹ ಗುತ್ತೆದಾರರ ನಿರ್ಲಕ್ಷಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಈ ಸಂಬಂಧ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.