ಬಿಜೆಪಿ ಷಡ್ಯಂತ್ರ ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ..! 136 ಶಾಸಕರು ಸಿಎಂ ಸಿದ್ದರಾಮಯ್ಯ ಪರ : ಶಾಸಕ ಯಶವಂತರಾಯಗೌಡ
ಇಂಡಿ : ಸರಕಾರ ಅಭದ್ರಗೊಳಿಸುವ ಹುನ್ನಾರ, ಷಡ್ಯಂತರ ನಡೆಸುತ್ತಿರುವ ಬಿಜೆಪಿ ನಾಯಕರ ಕಸರತ್ತು ನಡೆಯುವುದಿಲ್ಲ, ಮುಖ್ಯಮಂತ್ರಿಗಳ ವಿರುದ್ಧ ಬಿಜೆಪಿ ಅವರು ಡೊಂಬರಾಟ ನಡೆಸುತ್ತಿದ್ದಾರೆ, ಆದರೆ ಅದು ಫಲಿಸುವುದಿಲ್ಲ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದರು
ಅವರು ಇಂಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಗೌರವಾನ್ವಿತ ನ್ಯಾಯಾಲಯ ಮುಖ್ಯಮಂತ್ರಿಗಳ ವಿರುದ್ಧ ಪ್ರಾಥಮಿಕ ತನಿಖೆಗೆ ಆದೇಶ ನೀಡಿದೆ, ನ್ಯಾಯಾಂಗವನ್ನು ಗೌರವಿಸುತ್ತೇವೆ. ವಿರೋಧ ಪಕ್ಷದ ಷಡ್ಯಂತ್ರಕ್ಕೆ ದೆಹಲಿ ಜಾರ್ಖಂಡ್ ರಾಜ್ಯಗಳಲ್ಲಿಯೂ ಸಹ ಮುಖ್ಯಮಂತ್ರಿಗಳಿಗೆ ಕೇಂದ್ರ ಸರ್ಕಾರ ಹಾಗೂ ಅಲ್ಲಿನ ಸ್ಥಳೀಯ ಬಿಜೆಪಿ ನಾಯಕರುಗಳು ಷಡ್ಯಂತರ ರೂಪಿಸಿ ಸರಕಾರ ಅಭದ್ರ ಗೊಳಿಸುವ ಕಾರ್ಯ ಮಾಡಿವೆ. ಆದರೆ ಕರ್ನಾಟಕದಲ್ಲಿ ಅದು ಸಾಧ್ಯವಾಗುವುದಿಲ್ಲ. ಈ ರಾಜ್ಯದ ಪ್ರಜ್ಞಾವಂತ ಜನ 224ರಲ್ಲಿ 136 ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಆಯ್ಕೆ ಮಾಡಿದ್ದು ಇನ್ನೂ ಮುಂಬರುವ ಮೂರುವರೆ ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರವೇ ಅಧಿಕಾರ ನಡೆಸಲಿದೆ, ಶಾಸಕಾಂಗ ಪಕ್ಷದ ಎಲ್ಲಾ ಸಮಿತ್ರರು ಸಚಿವರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿದ್ದಾರೆ.
ಕಾನೂನು ಹೋರಾಟದ ಜೊತೆಗೆ ರಾಜಕೀಯ ಹೋರಾಟಕ್ಕೂ ಸಿದ್ಧರಿದ್ದು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಅಭದ್ರಗೊಳಿಸಲು ಬಿಡುವುದಿಲ್ಲ, 14 ಬಜೆಟ್ ಮಂಡಿಸಿದ ಕ್ರಿಯಾಶೀಲ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೆಳಗಿಳಿಸುವ ಹುನ್ನಾರ ಎಂದಿಗೂ ಸಹ ಸಫಲವಾಗುವುದಿಲ್ಲ ನಾವೆಲ್ಲರೂ ಸಿದ್ದರಾಮಯ್ಯನವರ ಪರವಾಗಿದ್ದೇವೆ ಬಿಜೆಪಿಯವರು ಈಗ ಮಾಡುತ್ತಿರುವ ಷಡ್ಯಂತ್ರಕ್ಕೆ ರಾಜ್ಯದ ಜನ ಮುಂಬರುವ ದಿನಗಳಲ್ಲಿ ಮತ್ತೆ ತಕ್ಕ ಉತ್ತರ ನೀಡಿ ಪಾಠ ಕಲಿಸಲಿದ್ದಾರೆ ಎಂದರು