ಕುರುವಪುರ ದತ್ತ ಜಯಂತಿ ಆಚರಣ
ರಾಯಚೂರು: ತಾಲ್ಲೂಕಿನ ಕೃಷ್ಣಾನದಿಯ ನಡುಗಡ್ಡೆ ಗ್ರಾಮ ಕುರುವಪುರದಲ್ಲಿ ಶ್ರೀಪಾದ ವಲ್ಲಭ ದೇವಸ್ಥಾನದಲ್ಲಿ ದತ್ತ ಜಯಂತಿ ಭಾನುವಾರ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಶನಿವಾರದಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಭಾನುವಾರ ಬೆಳಿಗ್ಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಅಭಿಷೇಕ, ಅಲಂಕಾರ ಸೇವೆ ನೆರವೇರಿಸಲಾಯಿತು. ಮಧ್ಯಾಹ್ನ ದೇವಸ್ಥಾನದ ಪ್ರಾಂಗಣದಲ್ಲಿ ಪಲ್ಲಕ್ಕಿ ಸೇವೆ ಜರುಗಿಸಲಾಯಿತು. ಬಳಿಕ ದೇವರನ್ನು ನದಿಗೆ ಕರೆದೊಯ್ದು ಪುಣ್ಯಸ್ನಾನ ನಡೆಸಲಾಯಿತು. ಭಕ್ತರು ಕೂಡ ನದಿಯಲ್ಲಿ ಮಿಂದೆದ್ದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಂಡಿದ್ದರು.
ನೆರೆದಿದ್ದ ಭಕ್ತರು ಮಠದ ಪ್ರಾಂಗಣದಲ್ಲಿ ದತ್ತ ಪಾರಾಯಣ ಮಾಡಿದರು. ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು.