ಯಾದಗಿರಿ: ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಕುರಿಹಾಳ ಗ್ರಾಮದಲ್ಲಿ ಗ್ರಾಮೀಣ ಮಟ್ಟದ ಟೆನ್ನಿಸ್ ಬಾಲ್ ಹಾಗೂ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಪಂದ್ಯಗಳು ಜನವರಿ 02 ರ ರವಿವಾರದಂದು ಆರಂಭಗೊಳ್ಳಲಿದ್ದು, ಪಂದ್ಯದ ಹೆಸರು ನೋಂದಣಿಗೆ ಶನಿವಾರ ಕೊನೆಯ ದಿನವಾಗಿದೆ.
ಹೆಸರನ್ನು ನೊಂದಾಯಿಸುವ ತಂಡಗಳಿಗೆ 850 ರೂ. ಪ್ರವೇಶ ಶುಲ್ಕವಿರುತ್ತದೆ. ಪ್ರಥಮ ಬಹುಮಾನ 21 ಸಾವಿರ ಹಾಗೂ ಕಪ್, ದ್ವಿತೀಯ ಬಹುಮಾನ 11 ಸಾವಿರ ಹಾಗೂ ಒಂದು ಕಪ್ ಇರಲಿದೆ.
ಹೆಚ್ಚಿನ ಮಾಹಿತಿಗಾಗಿ ‘ಕುರಿಹಾಳ ಕ್ರಿಕೆಟ್ ಕ್ಲಬ್’ ಸದಸ್ಯರನ್ನು ಸಂಪರ್ಕಿಸಲು ತಿಳಿಸಲಾಗಿದೆ.