ಕುರಟ್ಟಿ ಹೊಸೂರು ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ರಾಜಮ್ಮ ಅವಿರೋಧ ಆಯ್ಕೆ.
ಹನೂರು : ತಾಲೂಕಿನ ಕುರಟ್ಟಿ ಹೊಸೂರು ಗ್ರಾಮ ಪಂಚಾಯತಿಯ ಅಧ್ಯಕ್ಷೆಗಾದಿಯನ್ನು ಗಿರಿಜನರಿಗೆ ಒಬ್ಬ ಹಿಂದುಳಿದ ಮಹಿಳೆಗೆ ಒಲಿದಿದೆ ಇದು ನಮಗೆ ಅಂಬೇಡ್ಕರ್ ರವರ ಸಂವಿಧಾನದ ಆಶಯದಿಂದಾಗಿದೆ ಆದ್ದರಿಂದ ನಮ್ಮ ಪಂಚಾಯತಿ ಎಲ್ಲಾ ಸದಸ್ಯರು ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ದಂಟಳ್ಳಿ ಗ್ರಾಮ ಪಂಚಾಯತಿಯ ಸದಸ್ಯ ಶಿವು ತಿಳಿಸಿದರು.
ನಂತರ ಮಾತನಾಡಿದ ಅವರು ಈಗಾಗಲೇ ನಮ್ಮ ವರಿಷ್ಠರಾದ ಮಾಜಿ ಶಾಸಕ ಆರ್ ನರೇಂದ್ರರವರ ಮಾರ್ಗದರ್ಶನದಲ್ಲಿ ಹಾಗೂ ನಮ್ಮ ನಾಯಕರಾದ ರಂಗಸ್ವಾಮಿ ರವರ ಸಲಹೆಯಂತೆ ಗ್ರಾಮದ ಅಭಿವೃದ್ಧಿಗೆ ನೂತನವಾಗಿ ಆಯ್ಕೆಯಾದ ಎಲ್ಲಾ ಸದಸ್ಯರು ಒಮ್ಮತದಿಂದ ಸಹಕರಿಸುತ್ತವೆ ಎಂದರು.
ಹನೂರು ತಾಲ್ಲೂಕಿನ ಕುರಟ್ಟಿಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ರಾಜಮ್ಮ ಕೋ ನೀಲೆಗೌಡ( ಕಾಂಗ್ರೆಸ್ ಬೆಂಬತ ಅಭ್ಯರ್ಥಿ) ರವರು ಅವಿರೋಧ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಿದ್ದು,ಒಟ್ಟು ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆ 14 ಅದರಲ್ಲಿ 9 ಸದಸ್ಯರ ಬೆಂಬಲದೊಂದಿಗೆ ಉಪಾಧ್ಯಕ್ಷರಾಗಿ ಲಲಿತ (ಬಿಜೆಪಿ ಜೆಡಿಎಸ್ ಬೆಂಬಲಿತ) ಆಯ್ಕೆಯಾದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಬಸವರಾಜು , ಶ್ರೀರಂಗಶೇಟ್ರು ,ವೆಂಕಟಚಲ , ಅಶೋಕ್, ದಂಟಳ್ಳಿ ಬಸವರಾಜು,ದೇವರಾಜ್, ದೇವು , ನಟರಾಜು, ಶಿವಕುಮಾರ್ ,
ಭದ್ರಯನಹಳ್ಳಿ ಶಿವಣ್ಣ ಇನ್ನು ಮುಂತಾದವರು ಹಾಜರಿದ್ದರು.
ವರದಿ : ಚೇತನ್ ಕುಮಾರ್ ಎಲ್ ಚಾಮರಾಜನಗರ ಜಿಲ್ಲೆ