ಪ್ರಥಮಸ್ಥಾನಗೈದಿರುವ ವಿಧ್ಯಾರ್ಥಿನಿ ಅಮೂಲ್ಯ ಕಲ್ಲೂರ ಗೆ ಸನ್ಮಾನ
ಇಂಡಿ : 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ -1 ನಾದ ಕೆಡಿ ಪರೀಕ್ಷೆ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದ ಅಮೂಲ್ಯ ಕಲ್ಲೂರ ವಿಧ್ಯಾರ್ಥಿನಿಗೆ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಸನ್ಮಾನಿಸಿ ಗೌರವಿಸಿದರು.
ತಾಲ್ಲೂಕಿನ ಶಿರಶ್ಯಾಡ ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿದ 78 ನೇ ಸ್ವತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲೆಗೆ ಹಾಗೂ ನಾದ ಕೆಡಿ ಪರೀಕ್ಷೆ ಕೇಂದ್ರದಲ್ಲಿ ಅತೀ ಹೆಚ್ಚು ಅಂಕ ಪಡೆದು ಪ್ರಥಮಸ್ಥಾನಗೈದಿರುವ ವಿಧ್ಯಾರ್ಥಿ ಅಮೂಲ್ಯ ಕಲ್ಲೂರ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ಹಾಗೂ ಮುಖ್ಯೋಪಾಧ್ಯಾಯರು ಸನ್ಮಾನಿಸಿದರು.
ಇನ್ನೂ ವೇದಮೂರ್ತಿ ವಿರೂಪಾಕ್ಷಯ್ಯ ಮಠ ಇವರ ಧರ್ಮಪತ್ನಿ ದಿವಂಗತ ಶೈಲಜಾ ಮಠ ಸ್ಮರಣಾರ್ಥವಾಗಿ 50 ಸಾವಿರ ರೂಪಾಯಿಗಳನ್ನು ಬ್ಯಾಂಕಿನಲ್ಲಿ ಇರಿಸಿ, ಬರುವ ಹಣದಲ್ಲಿ 5000 ರೂ ಪ್ರತಿವರ್ಷ ಶಾಲೆಗೆ ಪ್ರಥಮ ಬರುವ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ನೀಡಲಾಗುತ್ತಿದ್ದಾರೆ. ಈ ವರ್ಷವೂ ಕೂಡ ವಿದ್ಯಾರ್ಥಿನಿ ಕುಮಾರಿ ಅಮೂಲ್ಯ ಕಲ್ಲೂರ್ 94.40% ಪ್ರತಿಶತ ಅಂಕ ಪಡೆದು ಶಾಲೆಗೆ ಪ್ರಥಮ ಬಂದಿದ್ದಕ್ಕಾಗಿ 5000 ರೂ. ಬಹುಮಾನವನ್ನು ನೀಡಿ ಸನ್ಮಾನಿಸಲಾಯಿತು.
ಅದೇ ತೆರನಾಗಿ ಊರಿನ ಇನ್ನೋರ್ವ ಗಣ್ಯರಾದ ರಾಮನಗೌಡ ಬಗಲಿ ಇವರು ಕೂಡ ವಿದ್ಯಾರ್ಥಿನಿಗೆ 1000 ರೂಪಾಯಿಗಳನ್ನು ಬಹುಮನವಾಗಿ ನೀಡಿ ಸತ್ಕರಿಸಿದರು.
ಅದೇ ರೀತಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಟೋಪಣ್ಣ ಬಿರಾದಾರ್ ಇವರು ಕ್ರೀಡಾ ಸಮವಸ್ತ್ರಕ್ಕಾಗಿ 38 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ 15 ಸಾವಿರ ರೂ. ಗಳನ್ನು ದೇಣಿಗೆಯಾಗಿ ಶಾಲೆಗೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಊರಿನ ಹಿರಿಯರು ಹಾಗೂ ನಿವೃತ್ತ ಉಪನ್ಯಾಸಕರಾದ ಶ್ರೀ ಎಸ್.ಎಸ್.ಮಜಗಿ, ರವರು ಮಾತನಾಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವನ್ನು ನೀಡುವುದರಿಂದ ಅವರು ಉನ್ನತ ಸಾಧನೆಗಳನ್ನು ಮಾಡುವರು ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಟೋಪಣ್ಣ ಪುಂಡಲಿಕ್ ಬಿರಾದಾರ್, ಹಾಗೂ ಸದಸ್ಯರು, ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಶ್ರೀ ಆರ್.ಕೆ.ದುದಗಿ, ಹಿರಿಯ ಶಿಕ್ಷಕರಾದ ಶ್ರೀ ಶಿವಾನಂದ ಅಂದೇವಾಡಿ, ಶ್ರೀ ಎಸ್.ಜಿ ತಾಳಿಕೋಟಿ, ಶ್ರೀ ಎ.ಕೆ.ಬಾಗವಾನ, ಶ್ರೀ ಶಿವಾನಂದ ರಾಂಪುರ, ಶ್ರೀ ಗಂಗಾಧರ ಕಾಂಬಳೆ, ಶ್ರೀ ಶ್ರೀಶೈಲ್ ನಾವಿ, ಕುಮಾರಿ ಅರ್ಚನಾ ಬಿರಾದರ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಗೂ ಊರಿನ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶ್ರೀ ವಿಜಯಕುಮಾರ ಬೆಕಿನಾಳ ನಿರೂಪಿಸಿದರು. ಪ್ರಭಾರಿ ಮುಖ್ಯ ಗುರುಗಳಾದ ಶ್ರೀ ಆರ್ ಕೆ ದುದಗಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀ ಶ್ರೀಶೈಲ ನಾವಿ ಶಿಕ್ಷಕರು ವಂದಿಸಿದರು.