ವಿಜಯಪುರ : ಕಳ್ಳನೋರ್ವ ಕ್ರೂಜರ್ ವಾಹನ ಕಳ್ಳತನಗೈದು ಪರಾರಿಯಾಗುವ ವೇಳೆಯಲ್ಲಿ ಕಬ್ಬಿನ ಟ್ರ್ಯಾಕ್ಟರ್‌ಗೆ ಡಿಕ್ಕಿಯಾಗಿರುವ ಪರಿಣಾಮ ಕಳ್ಳ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಧೂಳಖೇಡ ಗ್ರಾಮದಲ್ಲಿ ನಡೆದಿದೆ. ಸಾಲೋಟಗಿ ಗ್ರಾಮದ ಆಕಾಶ ವಾಲಿ ಎಂಬುವವರ ವಾಹನ ಕಳ್ಳನೋರ್ವ ಕಳ್ಳತನಗೈದು ಪರಾರಿಯಾಗಿದ್ದಾನೆ. ಈ ವೇಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಆಗಿದೆ. ಕಳ್ಳ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾನೆ. ಝಳಕಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.