ಇಂಡಿ| ಸಕಾರಾತ್ಮಕ ಸ್ಪಂದನೆ ಮೇ- 5 ರ ಬೃಹತ್ ಹೋರಾಟ ಕೈ ಬಿಟ್ಟಿದ್ದೆವೆ : ಕರವೇ ಅಧ್ಯಕ್ಷ ಬಾಳು ಮುಳಜಿ
ಇಂಡಿ : ತಾಲ್ಲೂಕಿನಲ್ಲಿ ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ಗಂಬೀರ ಪರಿಸ್ಥಿತಿ ಎದುರುಸುತ್ತೀದ್ದೆವೆ. ಕೂಡಲೇ ಹಳ್ಳ, ಕೋಳ, ಕರೆ ಮತ್ತು ಕಾಲುವೆ ಗಳಿಗೆ ನೀರು ಹರಿಸಬೇಕು ಎಂದು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಾಗೂ ನಗರದಲ್ಲಿ ಮೇ 5 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಆದರೆ ಇಂದು ಅಧಿಕಾರಿಗಳು ಹಾಗೂ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದಕ್ಕಾಗಿ ಹೋರಾಟ ಕೈ ಬಿಡಲಾಗುತ್ತಿದೆ ಎಂದು ಕರೆವೇ ತಾಲ್ಲೂಕು ಅಧ್ಯಕ್ಷ ಬಾಳು ಮುಳಜಿ ಮಾಹಿತಿ ನೀಡಿದರು.
ಮೇ – 5 ರಂದು ಕರವೇ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆ ಹಿನ್ನೆಲೆಯಲ್ಲಿ ಭಾನುವಾರ ತಾಲ್ಲೂಕು ಆಡಳಿತ ಸೌಧದ ಉಪವಿಭಾಗದ ಕಛೇರಿಯಲ್ಲಿ ಉಪವಿಭಾಗ ಅಧಿಕಾರಿ ಅನುರಾಧಾ ವಸ್ತ್ರದ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕರವೇ ಸಂಘಟನೆ ಹಾಗೂ ಈ ಭಾಗದ ರೈತರ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದಿಸುವ ಭರವಸೆ ನೀಡಿದರು. ಈಗಾಗಲೇ ಕಾಲುವೆ ಮೂಲಕ ತಾಲ್ಲೂಕಿನ ವ್ಯಾಪ್ತಿಯಲ್ಲಿ ನೀರು ಹರಿಸಲಾಗುತ್ತಿದೆ. ಹಾಗಾಗಿ ಹೋರಾಟ ಕೈ ಬಿಡಲು ತಿಳಿಸಿದರು. ಇನ್ನೂಳಿದ ಬೇಡಿಕೆಗಳ ಬಗ್ಗೆ ಜಿಲ್ಲಾ ಅಧಿಕಾರಿಗಳ ಗಮನಕ್ಕೆ ತಂದು ಅವುಗಳನ್ನು ಸಹ ಶೀಘ್ರದಲ್ಲೇ ಪರಿಹರಿಸುವ ಬಗ್ಗೆ ತಿಳಿಸಿದರು. ಈ ಕಾರಣದಿಂದ ಹೋರಾಟ ಕೈ ಬಿಟ್ಟಿದ್ದೆವೆ.
ಈ ದೇಶದಲ್ಲಿ ಹೋರಾಟವಿಲ್ಲದೇ ಯಾವುದೂ ಸುಲಭವಾಗಿ ದಕ್ಕುವುದಿಲ್ಲ. ಒಂದು ಹಸಿಗೂಸು ಸಹ ತನ್ನ ಹಸಿವನ್ನು ನೀಗಿಸಿಕೊಳ್ಳಬೇಕಾದರೂ ಅಳಬೇಕಾಗುತ್ತದೆ . ಹಾಗೆಯೇ ಜಿಡ್ಡುಗಟ್ಟಿದ ಈ ಆಡಳಿತ ವ್ಯವಸ್ಥೆ ಕಣ್ಣು ತೆರೆಯಬೇಕಾದರೆ ಹೋರಾಟಗಳು, ಸತ್ಯಾಗ್ರಗಳು ಅವಶ್ಯವಿರುತ್ತವೆ. ಕಳೆದ ತಿಂಗಳಲ್ಲಿ ಇಂಡಿ ಮುಖ್ಯ ಕಾಲುವೆಗೆ ನೀರು ಹರಿಸಬೇಕು ಹಾಗೂ ನಷ್ಟ ಆದ ತೂಗರಿ ಪರಿಹಾರ ನೀಡಬೇಕು. ವಿಮಾ ಕಂಪನಿಗಳು ಪರಿಹಾರ ನೀಡಬೇಕು ಎಂದು ಅಧಿಕಾರಿಗಳ ಜೊತೆ ಚರ್ಚಿಸಿದ್ದೇವೆ. ಸರ್ಕಾರದ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಭರವಸೆ ನೀಡಿದರು. ಇಂತಹ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಇಂಡಿಯ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರೈತರು, ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ನಿರಂತರವಾಗಿ 4 ನಾಲ್ಕಾರು ದಿನಗಳ ಅಹೋರಾತ್ರಿ ಧರಣಿ ಸತ್ಯಾಗ್ರಹ 109 ಗಂಟೆ ನಡೆಸಿದ್ದು ಈಗಿನ ಇತಿಹಾಸ. ಧರಣಿ ಮಾಡುವ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ್ದ ಉಪವಿಭಾಗಾಧಿಕಾರಿಗಳು ಕಾಲಮಿತಿಯಲ್ಲಿ ನೀರು ಬಿಡುಗಡೆಗೊಳಿಸಲು ಕ್ರಮ ತೆಗೆದುಕೊಳ್ಳುವುದಾಗಿಯೂ, ತಾವು ಧರಣಿ ಸತ್ಯಾಗ್ರಹವನ್ನು ಅಂತ್ಯಗೊಳಿಸಿಬೆಕೆಂದು ವಿನಂತಿಸಿದ್ದರು. ಅವರ ಮೇಲೆ ಸಂಪೂರ್ಣ ಭರವಸೆ ಇರಿಸಿ, ಇಂಡಿ ಇತಿಹಾಸದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಪ್ರಥಮ ಬಾರಿಗೆ ನಮ್ಮ ಹೋರಾಟ ಅಂತ್ಯಗೊಳಿಸಿದ್ದೆವು. ನಮ್ಮ ಹೋರಾಟಕ್ಕೆ ಮಣಿದು ರೈತರ, ಜನ ಜಾನುವಾರುಗಳ ಪಕ್ಷಿಗಳ ಹಿತದೃಷ್ಟಿಯಿಂದ ಈಗ ಕಾಲುವೆಗೆ ನೀರು ಹರಿಸುತ್ತಿದ್ದಾರೆ ಇದು ಸಂತಸ ಸಂಗತಿ ಎಂದರು.
ಗ್ರಾಮೀಣ ಪಿಎಸ್ಐ ಸೋಮಶೇಖರ್ ಗೆಜ್ಜೆ, ಕರವೇ ಅಧ್ಯಕ್ಷ ಬಾಳು ಮುಳಜಿ, ಸುನೀಲಗೌಡ ಬಿರಾದಾರ, ಮಹೇಶ ಹೂಗಾರ, ಧರ್ಮರಾಜ ಸಾಲೋಟಗಿ, ಅಶೋಕ್ ಅಕಲಾದಿ, ಪ್ರಶಾಂತ್ ಲಾಳಸಂಗಿ, ಮಲ್ಲು ಗುಡ್ಲ, ಸಚಿನ್ ನಾವಿ, ಸಿದ್ದು ಡಂಗಾ, ಶಿವಾನಂದ ಮಡಿವಾಳ, ಶಿವಾನಂದ ಲಕ್ಕುಂಡಿಮಠ, ಮಂಜು ದೇವರ, ಶ್ರೀಕಾಂತ್ ಬಡಿಗೇರ, ಗಿರೀಶ ಪಾಟೀಲ್, ಅಶೋಕಗೌಡ ಬಿರಾದರ, ಎನ್ ಕೆ ಪೂಜಾರಿ, ಕಲ್ಲು ಮೂಸಲಗಿ, ಗದಗಯ್ಯ ಹಿರೇಮಠ, ಆದಿತ್ಯ ಶಿಂದೆ, ಅರವಿಂದ್ ಪಾಟೀಲ, ಅಪ್ಪು ಚಂಡಕೆ, ವಿಜಯಕುಮಾರ್ ರಾಥೋಡ ವಿವಿಧ ಗ್ರಾಮಗಳ ರೈತರ ಉಪಸ್ಥಿತರಿದ್ದರು.