• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ತಂದೆ ತಾಯಿ ಸ್ಮರಣಾರ್ಥ ನಾಗರಿಕ ಸಮಾಜದಲ್ಲಿ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಸಾರ್ಥಕ ಕಾರ್ಯ ಮನಿಯಾರ ಚಾರಿಟಬಲ್ ಟ್ರಸ್ಟ್  ಮಾಡುತ್ತಿದೆ: ಸಚಿವ ದರ್ಶನಾಪೂರ

    ತಂದೆ ತಾಯಿ ಸ್ಮರಣಾರ್ಥ ನಾಗರಿಕ ಸಮಾಜದಲ್ಲಿ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಸಾರ್ಥಕ ಕಾರ್ಯ ಮನಿಯಾರ ಚಾರಿಟಬಲ್ ಟ್ರಸ್ಟ್  ಮಾಡುತ್ತಿದೆ: ಸಚಿವ ದರ್ಶನಾಪೂರ

    ಮುದ್ದೇಬಿಹಾಳ‌| ಮೊಸಳೆ ಬಲಿಯಾದ ಕಾಶಪ್ಪ ಕುಟುಂಬಸ್ಥರ ನೋವಿಗೆ ಶಾಸಕ‌‌ ನಾಡಗೌಡ ಸ್ಪಂದಿನೆ‌ ಹಾಗೂ ₹25000 ನೆರವನ್ನು ನೀಡಿ ಕುಟುಂಬಕ್ಕೆ ಸಾಂತ್ವನ 

    ಮುದ್ದೇಬಿಹಾಳ‌| ಮೊಸಳೆ ಬಲಿಯಾದ ಕಾಶಪ್ಪ ಕುಟುಂಬಸ್ಥರ ನೋವಿಗೆ ಶಾಸಕ‌‌ ನಾಡಗೌಡ ಸ್ಪಂದಿನೆ‌ ಹಾಗೂ ₹25000 ನೆರವನ್ನು ನೀಡಿ ಕುಟುಂಬಕ್ಕೆ ಸಾಂತ್ವನ 

    ಆಲೂರ ಗ್ರಾಮದಲ್ಲಿ ಆನೆಕಾಲು ರೋಗ ಸಮೀಕ್ಷೆ 120 ಜನರ ರಕ್ತ ಲೇಪನ ಸಂಗ್ರಹ

    ಆಲೂರ ಗ್ರಾಮದಲ್ಲಿ ಆನೆಕಾಲು ರೋಗ ಸಮೀಕ್ಷೆ 120 ಜನರ ರಕ್ತ ಲೇಪನ ಸಂಗ್ರಹ

    ಮಳೆನೀರು ಕೊಯ್ಲು, ಘನತ್ಯಾಜ್ಯ ನಿರ್ವಹಣೆ ಹಾಗೂ ಸೌರಶಕ್ತಿ ಬಳಕೆಯಲ್ಲಿ ಹೆಚ್ಚು ಜಾಗೃತರಾಗಬೇಕು

    ಮಳೆನೀರು ಕೊಯ್ಲು, ಘನತ್ಯಾಜ್ಯ ನಿರ್ವಹಣೆ ಹಾಗೂ ಸೌರಶಕ್ತಿ ಬಳಕೆಯಲ್ಲಿ ಹೆಚ್ಚು ಜಾಗೃತರಾಗಬೇಕು

    ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ

    ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ

    ಮಾದಕ ವ್ಯಸನ ಮುಕ್ತ ಕರ್ನಾಟಕ ಅಭಿಯಾನ ಯಶಸ್ವಿಗೊಳಿಸಿ -ಜಿಪಂ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ

    ಮಾದಕ ವ್ಯಸನ ಮುಕ್ತ ಕರ್ನಾಟಕ ಅಭಿಯಾನ ಯಶಸ್ವಿಗೊಳಿಸಿ -ಜಿಪಂ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ

    ನದಿಯಲ್ಲಿ ಎತ್ತುಗಳಿಗೆ ಸ್ನಾನ ಮಾಡಿಸುವ ಸಂದರ್ಭದಲ್ಲಿ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆ.

    ನದಿಯಲ್ಲಿ ಎತ್ತುಗಳಿಗೆ ಸ್ನಾನ ಮಾಡಿಸುವ ಸಂದರ್ಭದಲ್ಲಿ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆ.

    ಅಂಜುಮನ್ ಚುನಾವಣೆ ಶೀಘ್ರದಲ್ಲಿ ನಡೆಸಲು ತಹಶಿಲ್ದಾರರಿಗೆ ಮನವಿ

    ಅಂಜುಮನ್ ಚುನಾವಣೆ ಶೀಘ್ರದಲ್ಲಿ ನಡೆಸಲು ತಹಶಿಲ್ದಾರರಿಗೆ ಮನವಿ

    ಮುಖ್ಯ ಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ : ಕಿವಡೆ

    ಮಳೆ ಅವಾಂತರ, ತಕ್ಷಣ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಅಗ್ರಪಡಿಸುತ್ತೇನೆ :ಬಿಜೆಪಿ ಮುಖಂಡ ಕಿವಡೆ

    ಮಣ್ಣಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ:ವೃತ್ತ ನಿರೀಕ್ಷಕರು ಆನಂದ್ ಮೂರ್ತಿ

    ಮಣ್ಣಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ:ವೃತ್ತ ನಿರೀಕ್ಷಕರು ಆನಂದ್ ಮೂರ್ತಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸಂಪಾದಕೀಯ

      ಕೊಹ್ಲಿಗೆ ಬೇಕಿದೆ ಬೂಸ್ಟ್… ಯಾಕೇ ಗೊತ್ತಾ…?

      May 1, 2022
      0
      ಕೊಹ್ಲಿಗೆ ಬೇಕಿದೆ ಬೂಸ್ಟ್… ಯಾಕೇ ಗೊತ್ತಾ…?
      0
      SHARES
      485
      VIEWS
      Share on FacebookShare on TwitterShare on whatsappShare on telegramShare on Mail

      ಓ….ವಿರಾಟ್ ನಿನಗಾಗಿ ಕಾಯುತ್ತಿದ್ದೇವೆ..!
      ಮತ್ತೊಮ್ಮೆ ಗುಟುರು ಹಾಕಿ ಘರ್ಜಿಸು..!!

      ದಶಕದಾಚೆಯ ವರುಷಗಳಲ್ಲಿ ಆತ ಭಾರತದ ಅಂಡರ್ -19 ಕ್ರಿಕೆಟ್ ತಂಡದ ನಾಯಕನಾಗಿದ್ದ ದಕ್ಷಿಣ ಆಫ್ರಿಕಾ ತಂಡದೆದುರು ಭಾರತ ಪೈನಲ್ ನಲ್ಲಿ ಮುಖಾಮುಖಿಯಾಗಿತ್ತು. ಅಂದಿನ ಪಂದ್ಯದಲ್ಲಿ ವಿರಾಟ್ ಎಂಬ ಸಿಡಿಲ ಕಿಡಿ ನಾಯಕ ಸ್ಥಾನದಲ್ಲಿ ನಿಂತು ಅವಿರತವಾಗಿ ಭಾರತಕ್ಕೆ ವಿಶ್ವಕಪ್ ಗೆದ್ದು ಕೊಡಲು ಮೈದಾನದ ತುಂಬಾ ಇನ್ನಿಲ್ಲದ ಪರಿಶ್ರಮ ಪಡುತ್ತಿದ್ದ. ಆತನ ಹಾರಾಟ,ಚೀರಾಟ ಬ್ಯಾಟಿಂಗ್ ನಲ್ಲಿನ ಅಕ್ರಮಣಕಾರಿ ಕಸುವು ಓಡಾಟದ ರಭಸಕ್ಕೆ ಆಫ್ರಿಕನ್ ತಂಡ ಮೈದಾನದಲ್ಲಿ ಕತ್ತಿ ಕೆಳಗಿಟ್ಟು ಕಪ್ಪು ಕಾಣಿಕೆ ಕೊಟ್ಟು ಸೋತ ರಾಜನಂತೆ ಶರಣಾಗತವಾಗಿತ್ತು. ಅಂದು ಆತನ ಡ್ಯಾಶಿಂಗ್ ಆಟದ ಅಬ್ಬರ ಕಂಡು ಭಾರತೀಯ ಪ್ರಸಿದ್ಧ ಆಟಗಾರರು ದಂಗಾಗಿದ್ದರು. ಅವರೆಲ್ಲರೂ ಅಂದು ಕೊಂಡಂತೆ ಆಗಿನ ದಿಗ್ಗಜ ಆಟಗಾರ ಕ್ರಿಕೆಟ್ ದಂತಕತೆ ಸಚಿನ ತೆಂಡೂಲ್ಕರ್ ಕ್ರಿಕೆಟ್ ರಂಗದಿಂದ ಮರೆಯಾಗುವ ಮುನ್ನ ಇನ್ನೊಬ್ಬ ಸಚಿನ ಹುಟ್ಟಿದ್ದಾನೆ ಎಂದು ಸಂತಸಪಟ್ಟವರೇ ಅವರಲ್ಲಿ ಹೆಚ್ಚು…..

      – ರನ್ ಚೇಜರ್ ನಾಗಿ ಬೆಳೆದ ಸಚಿನ್ ರನ್ನು ಹೆಗಲ ಮೇಲೆ ಹೊತ್ತು ಕುಣಿದ…!

      ರಾಹುಲ್ ದ್ರಾವಿಡ್ ರ ತಾಂತ್ರಿಕ ಕೌಶಲ್ಯ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಶೈಲಿಯನ್ನು ಎರಕ ಹೊಯ್ದಂತೆ ಮಿಶ್ರಣ ಮಾಡಿ ಅವರ ಪಡಿ ನೆರಳೆ ಎಂಬಂತೆ ಬ್ಯಾಟಿಂಗ್ ಶೈಲಿಯಿಂದ ವಿರಾಟ್ ಬಹುಬೇಗ ಜನಮಾನಸವನ್ನು ಸೂರೆಗೊಂಡ.ಆತ ಎದುರಾಳಿ ವಿರುದ್ಧ ರನ್ ಚೇಜ್ ಮಾಡಿ ಆಡುವಾಗ ಕ್ರೀಜ್ ನಲ್ಲಿ ನೆಲೆ ನಿಂತರೆ ಸಾಕು ಎದುರಾಳಿ ತಂಡದ ನಾಯಕನಿಗೆ ಸೋಲಿನ ಕೆಟ್ಟ ಕನಸು ಬಂದೇ ಬೀಳುತ್ತಿತ್ತು.ಬೌಲರಗಳು ಗದಗದ ನಡಗುತ್ತಿದ್ದರು. ಎದುರಾಳಿ ನಾಯಕನ ಎದೆಯೊಳಗೆ ಧಗ ಧಗ ಶುರುವಾಗುತ್ತಿತ್ತು. ಮೈದಾನದಲ್ಲಿನ ಫೀಲ್ಡ್ರರ್ ಗಳು ಆತನ ಪ್ಲೇಸ ಮೆಂಟ್ ಹೊಡೆತಗಳಿಗೆ ಕಕ್ಕಾಬಿಕ್ಕಿಯಾಗುತ್ತಿದ್ದರು. ವಿಶ್ವದ ಯಾವುದೇ ಮೂಲೆಯಲ್ಲಿ ವಿರಾಟ ನಿಂತನೆಂದರೇ ಸಾಕು ಭಾರತೀಯರು ಗೆಲುವಿನ ಸಂಕೇತವಾಗಿ ಪಠಾಕ್ಷಿ ಮುಂಚಿತವಾಗಿ ಸಜ್ಜುಗೊಳಿಸುತ್ತಿದ್ದರು. ರುಚಿ ಹಂಚಲು ಹಾತೊರೆಯುತ್ತಿದ್ದರು.
      ಆತ ಒಂಟಿಯಾಗಿ ಒಂಟಿ ಸಲಗದಂತೆ ಕಾನನ ಸುತ್ತಿ ಇತರೆ ಪ್ರಾಣಿಗಳನ್ನು ಭಯ ಭೀತಗೊಳಿಸಿದಂತೆ ಮೈದಾನದಲ್ಲಿ ಕವರ್ ಶ್ಯಾಟ್, ಸ್ಟ್ರೇಟ್ ಶ್ಯಾಟ್, ಗ್ಲಾನ್ ಲೇಟ್ ಕಟ್ ಅಪರ್ ಕಟ್ ಪೈಡಲ್ ಸ್ವಿಪ್ ಸ್ವ್ಕೇರ್ ಕಟ್ ಮನ ಮೋಹಕವಾಗಿ ಆಡುತ್ತ ಬ್ಯಾಕ್ ಪುಟ್, ಪ್ರಂಟ್ ಪುಟ್ ನಲ್ಲಿ ಬಂದು ಸಿಕ್ಸರ್ ಪೋರಗಳ ಸುರಿಮಳೆ ಸುರಿಸುತ್ತಿದ್ದ.ಆತನ ಕೆಚ್ಚೆದೆಯ ಆಟ ಹೇಗ ಸಾಗುತ್ತಿದೆಂದರೇ, ಸ್ಕೋರ್ ಭೋರ್ಡನಲ್ಲಿ ರನ್ ಕಾರ್ಡ್ ಬದಲಾಯಿಸುವವನಿಗೂ ಒಮ್ಮೊಮ್ಮೆ ಗರ ಬಡಿಯಿತಿತ್ತು. ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆತನ ನಾಗಾಲೋಟದ ಆಟ ನೋಡ ನೋಡುತ್ತಲೇ ಶತಕಗಳ ಸಂಖ್ಯೆಯನ್ನು ಅರ್ಧ ಶತಕಗಳನ್ನಾಗಿ ಮೀರಿ ಮುನ್ನೆಡೆದ ಇಷ್ಟೆಲ್ಲಾ ಏಳು ಬೀಳುಗಳು ಮಧ್ಯ ಆಶ್ಚರ್ಯಕರ ಸಂಗತಿ ಎಂದರೇ ಆತನ ಬ್ಯಾಟಿಂಗ್ ಸರಾಸರಿ ಈಗಲೂ ಒಂದು ದಿನದ ಪಂದ್ಯದಲ್ಲಿ ಅರವತ್ತರ ಆಸುಪಾಸಿನಲ್ಲಿದ್ದರೇ,
      ಟೆಸ್ಟ್ ಕ್ರಿಕೆಟ್ ಅದು ಐವತ್ತರ ಆಸುಪಾಸಿನಲ್ಲಿದೆ….

      ಸಚಿನ ಮರೆಯಾದ.! ಧೋನಿ ದೂರಾದ.!!
      ವಿರಾಟನ ಹಡಗು ದಿಕ್ಕು ತಪ್ಪಿತು…!!!

      ಆತನ ಬಿರುಸಿನಿಂದ ಕೂಡಿದ ಕ್ರಿಕೆಟ್ ಮನೋಭಾವ ಹೊರಗಡೆಯಿದ್ದಷ್ಟು ಆತನ ಅಕ್ರಮಣಕಾರಿ ನಡವಳಿಕೆ ಈಗಲೂ ಒಳಗಡೆಯಿಲ್ಲ.ಆತ ಒಳಗಡೆ ಒಂಚೂರು ಅಧೈರ್ಯವಂತ ಆದರೂ ಆತ ಎಂದಿಗೂ ತನ್ನ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ. ಮೊದ ಮೂದಲು ಆತ ಸಚಿನ್ ರನ್ನು ಹಿಂಬಾಲಿಸುತ್ತ ಸಚಿನ್ ಛಾಪು ತನ್ನಲ್ಲಿದೇ ಎಂದು ಆತ ಹಲವಾರು ಪಂದ್ಯಗಳಲ್ಲಿ ತನ್ನ ಹೊಡಿ ಬಡಿಯ ಶೈಲಿಯ ಬ್ಯಾಟಿಂಗ್ ನಿಂದ ವಿಶ್ವದ ಅನೇಕ ಮೈದಾನಗಳಲ್ಲಿ ತೋರಿಸಿಕೊಟ್ಟು ಮನೆ ಮಾತಾದ.ಆತ ಬಿರುಗಾಳಿಯ ವೇಗದಲ್ಲಿ ಭಾರತಕ್ಕೆ ಹಲವಾರು ಪಂದ್ಯಗಳನ್ನು ಸಚಿನ್ ರಂತೆ ಗೆಲ್ಲಿಸಿಕೊಟ್ಟ.ಆತನ ಬ್ಯಾಟಿಂಗ್ ಮನ ಸೋತ ವಿಶ್ವ ಕಂಡ ದಿಗ್ಗಜ ಸಚಿನ್ ತೆಂಡೂಲ್ಕರ್ ಒಮ್ಮೆ ಸಂದರ್ಶನ ದಲ್ಲಿ ತನ್ನ ಎಲ್ಲಾ ದಾಖಲೆಗಳನ್ನು ಪುಡಿಗಟ್ಟ ಬಲ್ಲ ಬೃಹತ್ ಸುತ್ತಿಗೆಯಂತಹ ಆಟಗಾರ ಯಾರೆಂದರೆ ಅದು ವಿರಾಟ ಕೊಹ್ಲಿಯೇ ಎಂದರು….

      ಇನ್ನು ಸಚಿನ್ ತೆಂಡೂಲ್ಕರ್ ವಿರಾಟ ಕೊಹ್ಲಿಯ ಕ್ರಿಕೆಟ್ ಆರಾಧ್ಯ ದೈವವಾಗಿದ್ದ ಆತನ ಜೊತೆ ಡ್ರೆಸಿಂಗ್ ಕೋಣೆ ಹಂಚಿಕೊಳ್ಳುವು ಆತನ ಬದುಕಿನ ಬಹು ದೊಡ್ಡ ಸೌಭಾಗ್ಯ ಎನ್ನಬಹುದು ಅದು ವಿರಾಟನ ಅದೃಷ್ಟ ಕೂಡಾ ಹೌದು ಎನ್ನಬಹುದು.ಸಚಿನರಿಂದ ಭವಿಷ್ಯದ ಸೂಪರ್ ಸ್ಟಾರ್ ಎನಿಸಿಕೊಂಡ ವಿರಾಟ್ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬಹು ಬೇಗ ಬೇರೆ ಆಟಗಾರರ ದಾಖಲೆಗಳನ್ನು ನುಚ್ಚು ನೂರು ಮಾಡುತ್ತ ಸಾಗಿದ. ಇತ್ತ ಮಹೇಂದ್ರ ಸಿಂಗ್ ಧೋನಿಯ ಎಂಬ ಪ್ರಬುದ್ಧ ಆಟಗಾರನು ಕೂಡಾ ಇತನಲ್ಲಿರುವ ಆಗಾಧ ಪ್ರತಿಭೆಗೆ ಹುರುಪು ತುಂಬಿ ಆಸರೆಯಾದ.ವಿರಾಟ್ ನ ಆಟಕ್ಕೆ ಅನೇಕ ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬೆನ್ನು ಹತ್ತಿ ಓಡೋಡಿ ಬಂದವು.ಅವುಗಳಲ್ಲಿ ಇತ 2011 ವರ್ಲ್ಡ್ ಕಪ್ ವಿನ್ನಿಂಗ್ ತಂಡದ ಆಟಗಾರನಾಗಿ ಆ ಗೆಲುವನ್ನು ಸಂಭ್ರಮಿಸಿ ತನ್ನ ಆರಾಧ್ಯ ದೈವ ತೆಂಡೂಲ್ಕರ್ ರನ್ನು ಮೈದಾನದ ತುಂಬಾ ಅವಿಸ್ಮರಣೀಯವಾಗಿ ಹೆಗಲ ಮೇಲೆ ಹೊತ್ತು ಕುಣಿದ. ಮುಂದೆ ಸಚಿನ ಎಂಬ ಹೆಮ್ಮರ ಸಂಜೆಯ ಸೂರ್ಯನಂತೆ ನೈಪಥ್ಯಕ್ಕೆ ಸರಿದರೇ ಕೂಲ್ ಖ್ಯಾತಿಯ ಧೋನಿ ಎಂಬ ಹಿಮ ಪರ್ವತ ಕರಗಿ ಕಣ್ಮರೆಯಾಯಿತು. ಬೇಸರದ ಸಂಗತಿ ಎಂದರೇ ಇತನ ಬೆಂಗಾವಲಾಗಿದ್ದ ಆ ಎರಡು ಅಮೂಲ್ಯ ರತ್ನಗಳು ಸದ್ದಿಲ್ಲದೇ ಮರೆಯಾಗಿ ಹೋದವು..

      ತಂಡದಲ್ಲಿ ಇತನೇ ಸೀನಿಯರ್
      ಹಾಳಾಗ ತೊಡಗಿತು ಕೆರಿಯರ್…!

      ತಾರಾಬಲ ಕಂಕಣ ಬಲ ನೋಡದೇ ಮದುವೆ ಮುಹೂರ್ತ ಪಿಕ್ಸ್ ಮಾಡಿದಂತೆ ಕ್ರಿಕೆಟ್ ಲೋಕದಲ್ಲಿ ತರಾ ತುರಿಯಲ್ಲಿ ಮುವತ್ತರೊಳಗಿನ ವಯಸ್ಸಿನಲ್ಲೇ ನಾಯಕನಾಗಿ ವಿರಾಟ್ ಘೋಷಿತನಾದ ಹಾಗಂತ ಇದು ತಪ್ಪು ನಿರ್ಧಾರವಲ್ಲ ಆತುರದ ನಿರ್ಧಾರ ವೇನೋ ಸರಿ ಅಂಡರ್-19 ತಂಡದ ನಾಯಕನಾಗಿ ಆಟ ಆಡುವದೇ ಬೇರೆ ಒಂದು ಇಡೀ ದೇಶದ ತಂಡವನ್ನು ತನ್ನ ಹೆಗಲ ಮೇಲೆ ಹೊತ್ತು ಗೆಲುವಿಗಾಗಿ ಹೋರಾಡುವದೇ ಬೇರೆ ಆದರೂ ಸೋಲು-ಗೆಲುವು ಅಂಕಿ-ಸಂಖ್ಯೆ ಗಮನಿಸಿ ನೋಡಿದಾಗ ವಿರಾಟ್ ನ ವೈಫಲ್ಯಗಳು ಕಡಿಮೆ ಆತನ ಕೈಯಲ್ಲಿ ವಿಶ್ವಕಪ್ ಗೆಲ್ಲಲಾಗಲಿಲ್ಲಿ. ಹಾಗಂತ ಇದು ಆತನ ವೈಫಲ್ಯಗಳಿಗೆ ಹಿಡಿದ ಕೈಗನ್ನಡಿಯಲ್ಲ. ಅತಿಯಾದ ಕ್ರಿಕೆಟ್ ನಲ್ಲಿ ಆಡುತ್ತ ಹಾಗೆ ಬರು ಬರುತ್ತಾ ತಂಡದ ನಾಯಕತ್ವದ ಒತ್ತಡ ವಿರಾಟ್ ಕೈಯಲ್ಲಿನ ಬ್ಯಾಟಿನ ಹರಿತವನ್ನು ತೀಕ್ಷಣೆತೆಯನ್ನು ಮೊಂಡು ಮಾಡಿತು. ಅದರ ಮೊನಚು ಕಳೆಯಿತು ತೊಡಗಿತು. ಕೆಲವೊಮ್ಮೆ ಆತನ ಇಡೀ ಶರೀರ ಮೈದಾನದಲ್ಲಿದ್ದರೇ, ಆತನ ಆಲೋಚನೆಯ ತರಂಗಗಳು ಖಿನ್ನವಾಗಿ ಮೈದಾನದಾಚೆಯಲ್ಲಿ ಹರಿದಾಡುತ್ತ ಸಾಗ ತೊಡಗಿದವು. ಆತ ಮೈದಾನದಲ್ಲಿ ಶತಕ ಸಿಡಿಸಿ ಪತ್ನಿ ಅನುಷ್ಕಾಳಿಗೆ ಮೋಹಕ ನಗೆಯ ನಗು ಮಾಯವಾಯಿತು. ವಿರಾಟನಿಗೆ ಏನಾಯಿತು ಎನ್ನುವದೊಳಗಾಗಿ ಆತನ ಬ್ಯಾಟಿಂಗ್ ದಿಕ್ಕು ತಪ್ಪಿತು. ಲಯದ ಹಾದಿ ಹಳಿ ತಪ್ಪಿತು ಆತನೊಳಗಿನ ಕ್ಯಾಪ್ಟನ್ ಸಿ ಖದರ್ ಮಾಯವಾಯಿತು. ಒಂದು ಕಡೇ ಸೀನಿಯರ್ ಆಟಗಾರರ ಅನುಪಸ್ಥಿತಿ ಇನ್ನೊಂದು ಕಡೇ ಹಳ್ಳಿ ಗಮಾರನಂತೆ ಒಂಟಿ ಕೈಯಲ್ಲಿ ಹೊಡೆಯುವ ವೃಷಭಪಂತ, ವಿಕೇಟ್ ಬಿಟ್ಟು ಅಡ್ಡಿ ಬ್ಯಾಟ್ ಆಡುವ ಮನೀಷ ಪಾಂಡೆ ಒನ್ ಸೈಡ್ ಆಡುವ ಶ್ರೇಯಸ್ ಅಯ್ಯರ್ ಇಸಾನ್ ಕಿಸನರ ಕಳಪೆಯಾಟ, ಬರೀ ರನೌಟ್ ಆಗುವ ದಿನೇಶ್ ಕಾರ್ತಿಕ್ ಪ್ರಥ್ವಿ ಷಾ ನಂತಹ ಲಂಗು ಲಗಾಮವಿಲ್ಲದ ಬ್ಯಾಟಗಾರ ಇವರನೆಲ್ಲಾ ಕಟ್ಟಿಕೊಂಡು ಚಕ್ರವ್ಯೂಹ ಭೇದಿಸಲು ಹೊರಟ ವಿರಾಟ ಅಕ್ಷರಶಃ ಕ್ರಿಕೆಟ್ ರಣಾಗಂಗಣದ ಮೈದಾನದಲ್ಲಿ ಏಕಾಂಗಿ ಅಭಿಮನ್ಯುವಿನಂತೆ ಧಾರುಣ ಪರಿಸ್ಥಿತಿ ವಿರಾಟ್ ಕೊಹ್ಲಿಗಾಯಿತು. ಸಾಲದಕ್ಕೆ ರಣ ಹಸಿವಿನ ವ್ಯಕ್ತಿ ಊಟಕ್ಕೆ ಕುಳಿತಾಗ ಆತನ ತಟ್ಟೆ ಎಗರಿಸಿದಂತೆ. ಆತನ ಕ್ಯಾಪ್ಟನ್ ಸಿಫ್ ನ್ನು ಏಕಾಏಕಿ ಗಂಗೂಲಿ ಕಸಿದುಕೊಂಡನು. ಒಂದು ಕಡೇ ವಿಶ್ವ ಕಪ್ ಕನಸು ಭಗ್ನ ಇನ್ನೊಂದು ಕಡೇ ತಿಕ್ಕಲು ಪುಕ್ಕಲು ಆಟಗಾರರ ಹಿಂಡು ಹಿರಿಯ ಆಟಗಾರರ ಕಣ್ಮರೆ ಇದರ ಜೊತೆಗೆ ಅತಿಯಾದ ಕ್ರಿಕೆಟ್ ಬಯೋಬಬಲ್ ದಿಂದ ತಾನು ಎಲ್ಲಿ ತಪ್ಪೆಸಗುತ್ತಿರುವೆ ಎಂದು ಯೋಚನೆ ಮಾಡಲಾರದಷ್ಟು ಹಿಂಡುಘಟ್ಟಲೇ ಪಂದ್ಯಗಳು ಅವನನ್ನು ಹಿಂಡಿ ಹಿಪ್ಪೆ ಮಾಡಿದವು. ಅಂದು ಸೌರವ ಹೇಳದೇ ಕೇಳದೇ ಮಾಡಿದ ನಾಯಕತ್ವದ ಅವಮಾನದ ಘಾಸಿ ಇನ್ನೂ ಆತನ ಮನಸಿನಿಂದ ಮಾಯವಾಗಿಲ್ಲ.

      ತನ್ನಲ್ಲಿರುವ ಬ್ಯಾಟಗಾರನ ಮರೆತು
      ಡಿವಿಯಲಿಯರ್ಸ ಬೆನ್ನು ತಟ್ಟ ತೊಡಗಿದ…!!

      ಯಾವಾಗಲೂ ಪಿಂಚ ಹಿಟರ್ ರೀತಿಯಲ್ಲಿ ಆಡುತ್ತಿದ್ದ ಡಿವಿಲಿರ್ಸನ ಆಟಕ್ಕೆ ಮನ ಸೋತ ಕೊಹ್ಲಿ ನಿಧಾನವಾಗಿ ಆತನ ಹ್ಯಾಂಗ್ ಓವರನ ಗುಂಗಿನಲ್ಲಿ ಆತನ ಗುಣಗಾನದ ಭಜನೆ ಮಾಡ ತೊಡಗಿದ ಕೊಹ್ಲಿಯ ಈ ಹೃದಯ ವೈಶ್ಯಾಲತೆ ಒಳ್ಳೆಯದೇ ಆದರೆ ಅದು ಆತನಲ್ಲಿರುವ ಒಬ್ಬ ಆಟಗಾರನನ್ನು ಮರೆಯಾಗ ತೊಡಗಿಸಿತು. ಏಕೆಂದರೆ ನೀವು ಒಬ್ಬ ಪ್ರತಿಭಾವಂತನನ್ನು ಒಮ್ಮೊಮ್ಮೆ ಹೊಗಳವದು ಅವಶ್ಯಕ.! ಆದರೆ ಆತನಲ್ಲಿಯೇ ಅನುರಕ್ತವಾಗಿ ನಮ್ಮನ್ನು ನಾವು ಕಳೆದು ಕೊಳ್ಳುವುದು ಅದು ನಮ್ಮ ದೌರ್ಭಲ್ಯವೇ ಸರಿ.! ಇದು ನನ್ನ ವೈಯಕ್ತಿಕ ಅಭಿಪ್ರಾಯ..! ಉದಾಹರಣೆಯಾಗಿ ಹೇಳಬೇಕಾದರೇ ಸಚಿನ್ ತೆಂಡೂಲ್ಕರ್ ನ ಶತಮಾನದ ಶ್ರೇಷ್ಠ ಬೌಲರ್ ಶೇನ್ ವಾರ್ನ ವಿರುದ್ಧ ಆಡುವಾಗ ಸಚಿನ ತಾನು ವೈಫಲ್ಯಗಳನ್ನು ಎದುರಿಸಬಾರದು ಎನ್ನುವ ಉದ್ದೇಶದಿಂದ ಭಾರತೀಯ ಲೆಗ್ ಸ್ಪಿನರ್ ಎಲ್ ಶಿವರಾಮಕೃಷ್ಣನರಂತ ಬೌಲರನ್ನು ಎಷ್ಟೊಂದು ದಿನಗಳ ಕಾಲ ಎದುರಿಸಿ ಯೋಜನಾಬದ್ದವಾಗಿ ಪೂರ್ವ ಸಿದ್ಧತೆ ಮಾಡಿಕೊಂಡು ಶೇನ್ ವಾರ್ನಗೆ ಸಿಕ್ಸರ್ ಬೌಂಡರಿಗಳ ಉತ್ತರವನ್ನುಆಟದ ಮೈದಾನದಲ್ಲಿ ನೀಡಿದ್ದ ಸಚಿನ್.. ವಿಶ್ವದ ಶ್ರೇಷ್ಠ ಬ್ಯಾಟ್ಸಮನ್ ಕಿಂಗ್ ಕೊಹ್ಲಿಯಂತ ಜನ ಒಪ್ಪಿದ್ದಾರೆ. ಈಗಾಗಲೇ ಹಲವಾರು ಪಂದ್ಯಗಳಲ್ಲಿ ಎಪ್ಪತ್ತರ ಆಸು ಪಾಸು ಶತಕಗಳನ್ನು ಸಿಡಿಸಿದ್ದಾನೆ.. ಮತ್ತೆ ಲಕ್ಷವನ್ನು ಅಲಕ್ಷ ಮಾಡುತ್ತ ಈಗ ಮೈದಾನದಲ್ಲಿ ಪಾಪ್ ಡುಪ್ಲಿಸಿಯ ಬ್ಯಾಟಿಂಗ್ ನೋಡುತ್ತ ಮರೆತು ಹೋಗಬಾರದು ಅದು ಬರೀ ಚಪ್ಪಾಳೆ ತಟ್ಟುವಲ್ಲಿ ಸೀಮೀತವಾಗಬಾರದು…

      ಆತನ ಶಾಂತ ಮನಸಿನ ಸಮುದ್ರದಲ್ಲಿ ಈಗ ಬಿರುಗಾಳಿ ಎದ್ದಿದೆ,ಅದು ಶಾಂತವಾಗಬೇಕು..!!

      ಆತನ ಮನಸ್ಸು ಈಗ ಮೈದಾನದಲ್ಲಿ ಇಲ್ಲ.! ಮನಸಿನ ತುಂಬಾ ನಾನಾ ರೀತಿಯ ವಿಚಾರಗಳ ತರಂಗಗಳು ಮೇಳೈಸುತ್ತಿವೆ. ಆತನ ಶಾಂತ ಸಮುದ್ರ ಮನಸಿನಲ್ಲಿ ಬಿರುಗಾಳಿ ತನ್ನ ಕೋಲಾಹಲದ ಕಬಂಧಭಾಹು ಚಾಚಿದೆ.
      ಆತ ಧ್ಯಾನಸ್ಥ ಮನಸಿನಲ್ಲಿ ಮೊದಲಿನಂತೆ ಬ್ಯಾಟ್ ಬೀಸುತ್ತಿಲ್ಲ.ಆತ ಈಗ ಮೊದಲು ಐ ಪಿ ಎಲ್ ನಿಂದ ನಿರ್ಧಾಕ್ಷಿಣ್ಯವಾಗಿ ದೂರ ಸರಿಯಬೇಕು. ಸಂಪೂರ್ಣವಾಗಿ ಮನಸು ಕ್ರಿಕೆಟ್ ಜಂಜಡಗಳ ಬಿಟ್ಟು ಪ್ರಫುಲ್ಲವಾಗಬೇಕು. ಯೋಗ- ಧ್ಯಾನ-ವಿಶ್ರಾಂತಿ ಅವಶ್ಯಕವಾಗಿ ಆತನಿಗೆ ಬೇಕು.
      ಆತ ಕೆಲವು ಕಾಲ ಕ್ರಿಕೆಟ್ ವಿಷಯ ಮರೆತು ಬದುಕಿನ ಅಹ್ಲಾದತೆಯನ್ನು ಸವಿಯಬೇಕು ಇದರಲ್ಲಿ ಧೋನಿಯನ್ನು ಅನುಕರಿಸಬೇಕು ಒಂದಿಷ್ಟು ಕಾಲ ಬಾಲ್ಯದ ಗೆಳೆಯರ ಜೊತೆ ಮೋಜು ಮಜೆ ಮಾಡಬೇಕು.ಏಕೆಂದರೆ ಆತನಿಗಾಗಿ ಭಾರತ ಕಾಯುತ್ತಿದೆ..! ಭಾರತ ಕಣ್ಣು ಬಡಿಯದೇ ಆತನ ಬ್ಯಾಟಿಂಗ್ ನೋಡಲು ಬಯಸುತ್ತಿದೆ..! ಅದಕ್ಕಾದರೂ ಆತ ಮತ್ತೊಮ್ಮೆ ಶತಕಗಳ ಮೇಲೆ ಶತಕ ಬಾರಿಸಬೇಕಾಗಿದೆ..!! ವಿರಾಟನನ್ನು ಈಗ ನಾವು ನೋಡಿದಾಗ ಅಯ್ಯೋ ಪಾಪ ಎನಿಸುತ್ತಿದೆ…

      ಓ ವಿರಾಟ್ ನಿನಗಾಗಿ ನಾವು ಕಾಯುತ್ತಿದ್ದೇವೆ..!
      ಮೊದಲಿನಂತೆ ಆರ್ಭಟಿಸು..! ಜೋರಾಗಿ ಘರ್ಜಿಸು..!! ಗುಟುರು ಹಾಕಿ ಎದುರಾಳಿಯನ್ನು ಕೆಣಕು…!! ನಿನ್ನ ಸಿಡಿಲಬ್ಬರದ ಬ್ಯಾಟಿಂಗ್ ತೋರಿಸು..! ಮತ್ತೊಮ್ಮೆ ಮೈದಾನದಲ್ಲಿ ನಿಂತು ಬ್ಯಾಟ್ ಬಿಸಿ ಗಾಳಿಯಲ್ಲಿ ಕೈ ಗುದ್ದಿ ನಮ್ಮನ್ನು ತಣಿಸು…! ಬಾ…………..! ಬಾ……..!!ಬಾ………..!!!

      ರಚನೆ- ೧೦ರಥ ಕೋರಿ ಶಿಕ್ಷಕರು..ಇಂಡಿ

      Tags: #Cricket#sports#Virat kohili
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಇಂಡಿ | ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಪ್ರತಿಭಟನೆ..!

      ಇಂಡಿ | ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಪ್ರತಿಭಟನೆ..!

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಇಂಡಿ | ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಪ್ರತಿಭಟನೆ..!

      ಇಂಡಿ | ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಪ್ರತಿಭಟನೆ..!

      August 26, 2025
      ನ್ಯಾಯಾಧೀಶರ ಬಾಡಿಗೆ ಮನೆಗೆ ಕನ್ನ ಹಾಕಿದ ಕಳ್ಳರು..!

      ನ್ಯಾಯಾಧೀಶರ ಬಾಡಿಗೆ ಮನೆಗೆ ಕನ್ನ ಹಾಕಿದ ಕಳ್ಳರು..!

      August 26, 2025
      ತಂದೆ ತಾಯಿ ಸ್ಮರಣಾರ್ಥ ನಾಗರಿಕ ಸಮಾಜದಲ್ಲಿ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಸಾರ್ಥಕ ಕಾರ್ಯ ಮನಿಯಾರ ಚಾರಿಟಬಲ್ ಟ್ರಸ್ಟ್  ಮಾಡುತ್ತಿದೆ: ಸಚಿವ ದರ್ಶನಾಪೂರ

      ತಂದೆ ತಾಯಿ ಸ್ಮರಣಾರ್ಥ ನಾಗರಿಕ ಸಮಾಜದಲ್ಲಿ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಸಾರ್ಥಕ ಕಾರ್ಯ ಮನಿಯಾರ ಚಾರಿಟಬಲ್ ಟ್ರಸ್ಟ್  ಮಾಡುತ್ತಿದೆ: ಸಚಿವ ದರ್ಶನಾಪೂರ

      August 26, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.