ಮುಖ್ಯಶಿಕ್ಷಕಿ ಹಾಗೂ ಸಾಹಿತ್ಯ ಪಾರ್ವತಿ ಸೊನ್ನದ ಅವರಿಗೆ ಕೊಡೆಕಲ್ ಬಸವಶ್ರೀ ರಾಜ್ಯ ಪ್ರಶಸ್ತಿ
ಇಂಡಿ : ಮುಖ್ಯಶಿಕ್ಷಕಿ ಹಾಗೂ ಸಾಹಿತ್ಯ ಪಾರ್ವತಿ ಸೊನ್ನದ ಅವರಿಗೆ ಕೊಡೆಕಲ್ ಬಸವಶ್ರೀ ರಾಜ್ಯ ಪ್ರಶಸ್ತಿ ಭಾಜನರಾಗಿದ್ದಾರೆ.
ಇಂಡಿ ನಗರದ ಪಾರ್ವತಿ ಸೊನ್ನದ ಅವರು ವೃತ್ತಿಯಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಮಾತೆಯಾಗಿರುವ ಅವರು, ಸಾಹಿತ್ಯ ಕ್ಷೇತ್ರದಲ್ಲಿ ಅಮೋಘ ಸಾಧನೆಗೈದಿದ್ದಾರೆ. ಮಕ್ಕಳ ಸಾಹಿತ್ಯ, ಪ್ರೌಢ ಸಾಹಿತ್ಯ, ಮತ್ತು ವಚನ ಸಾಹಿತ್ಯವನ್ನು ರಚಿಸಿದ್ದಾರೆ. ಇನ್ನೂ ಬಸವಸತಿ ಪಾರ್ವತಿಪ್ರೀಯ ಲಚ್ಯಾಣ ಸಿದ್ದಲಿಂಗ ಇವರ ನಾಮಾಂಕಿತ, ಜೊತೆಯಲ್ಲಿ ವಿವಿಧ ಕಾರ್ಯಕ್ಷೇತ್ರಗಳಲ್ಲಿನ ಸೇವೆಗೈದರಿವ ಇವರನ್ನು ಶ್ರೀ ಕೋಡೆಕಲ್ ಬಸವೇಶ್ವರ ಜಾತ್ರಾ ಅಂಗವಾಗಿ ಕೊಡೆಕಲ್ ಬಸವಶ್ರೀ ರಾಜ್ಯ ಪ್ರಶಸ್ತಿಯನ್ನು ಬಸವನ ಬಾಗೇವಾಡಿ ತಾಲ್ಲೂಕು, ವಿಜಯಪುರ ಜಿಲ್ಲೆ ನಂದಿಹಾಳ ಗ್ರಾಮದಲ್ಲಿ ಕೊಡಮಾಡಲ್ಪಟ್ಟಿದ್ದಾರೆ.



















