ಚಾಂಪಿಯನ್ನರಿಗೆ ಆರ್‌ಸಿಬಿ ಮೊದಲ ಪರೀಕ್ಷೆ
Voiceofjanata.in : Sports NEWS : IPL 2025 :
ಕೋಲ್ಕತ್ತ: ನೂತನ ನಾಯಕ, ಹೊಸದಾಗಿ ಬಂದ ಆಟಗಾರರ ಸಂಯೋಜನೆಯೊಡನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಶನಿವಾರ ಎದುರಿಸಲಿದೆ. ಮತ್ತೊಮ್ಮೆ ಮೊದಲ ಪ್ರಶಸ್ತಿಯ ನಿರೀಕ್ಷೆಯೊಡನೆ ತನ್ನ ಅಭಿಯಾನ ಆರಂಭಿಸಲಿದೆ.
ಈಡನ್ ಗಾರ್ಡನ್ಸ್‌ನಲ್ಲಿಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಋುತುವಿನ ಆರಂಭಿಕ ಪಂದ್ಯವು ಜಿದ್ದಾಜಿದ್ದಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಉಭಯ ತಂಡಗಳು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅಪ್ರತಿಮ ಆಟಗಾರರನ್ನು ಹೊಂದಿರುವ ಕಾರಣ ಅಭಿಮಾನಿಗಳಿಗೆ ರಸದೌತಣ ದೊರೆಯುವ ನಿರೀಕ್ಷೆಯಿದೆ.
ಆರ್‌ಸಿಬಿ
ರಜತ್ ಪಾಟೀದಾರ್ (ನಾಯಕ), ವಿರಾಟ್ ಕೊಹ್ಲಿ, ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್, ರಸಿಕ್ ಧರ್, ಸುಯಾಷ್ ಶರ್ಮಾ, ಭುವನೇಶ್ವರ್ ಕುಮಾರ್, ಕೃಣಾಲ್ ಪಾಂಡ್ಯ, ಟಿಮ್ ಡೇವಿಡ್, ಜೇಕಬ್ ಬೆಥಲ್, ದೇವದತ್ತ ಪಡಿಕ್ಕಲ್, ನುವಾನ್ ತುಷಾರ, ರೊಮಾರಿಯೊ ಶೆಫರ್ಡ್, ಲುಂಗಿ ಎನ್‌ಗಿಡಿ, ಸ್ವಪ್ನಿಲ್ ಸಿಂಗ್, ಮನೋಜ್ ಭಾಂಡಗೆ, ಸ್ವಿಸ್ತಿಕ್ ಛಿಕಾರ, ಮೋಹಿತ್ ರಾಥೆ, ಅಭಿನಂದನ್ ಸಿಂಗ್
ಕೆಕೆಆರ್ ಸಂಭಾವ್ಯ ಪಟ್ಟಿ
ವೆಂಕಟೇಷ್ ಅಯ್ಯರ್, ಮೋಯೀನ್ ಅಲಿ, ಸುನೀಲ್ ನರೇನ್, ಆ್ಯಂಡ್ರೆ ರಸೆಲ್, ಕ್ವಿಂಟನ್ ಡಿ ಕಾಕ್, ರಹಮನುಲ್ಲಾ ಗುರ್ಬಾಜ್, ಮನೀಷ್ ಪಾಂಡೆ, ಅಜಿಂಕ್ಯ ರಹಾನೆ, ರಿಂಕು ಸಿಂಗ್, ಲುವನಿತ್ ಸಿಸೋಡಿಯಾ, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಮಯಾಂಕ್ ಮಾರ್ಕಂಡೆ, ವೈಭವ್ ಅರೋರಾ, ಎನ್ರಿಚ್ ನೋಕಿಯೆ, ಉಮ್ರಾನ್ ಮಲಿಕ್, ಸ್ಪೆನ್ಸರ್ ಜಾನ್ಸನ್, ಅಂಗ್‌ಕ್ರಿಷ್ ರಘುವಂಶಿ, ರೋವ್ಮನ್ ಪೊವೆಲ್, ಅನುಕೂಲ್ ರಾಯ್, ರಮಣದೀಪ್ ಸಿಂಗ್
ಸ್ಥಳ : ಇಡನ್ ಗಾರ್ಡನ್ ಕೊಲ್ಕತ್ತಾ ಪ.ಬಂಗಾಳ
ಸಮಯ :7:30 PM
ಲೈವ್ ಸ್ಟ್ರೀಮಿಂಗ್
ಭಾರತದಲ್ಲಿ ಐಪಿಎಲ್ ಟೂರ್ನಿಯ ಎಲ್ಲಾ ಪಂದ್ಯಗಳನ್ನು ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು. ಟಿವಿ ಮೂಲಕ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ನೆಟ್‌ವರ್ಕ್ 18 ಚಾನೆಲ್‌ಗಳಲ್ಲಿ ನೇರಪ್ರಸಾರ ಮಾಡಲಾಗುತ್ತದೆ.