ಇಂಡಿ : ಎಮ್ ಎಸ್ ಐಲ್ ಅಂಗಡಿ, ಬಾರಗಳಲ್ಲಿ ಮಾರಾಟವಾಗ ಬೇಕಾಗಿದ್ದ ಮದ್ಯ ಇಂದು ಗ್ರಾಮೀಣ ಭಾಗದ ಪಾನ ಶಾಪ್ ಮತ್ತು ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿದೆ. ಇದಕ್ಕೆ ಕಡಿವಾಣ ಹಾಗಬೇಕಾಗಿದ್ದ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಅದರಲ್ಲೂ ಅಬಕಾರಿ ಇಲಾಖೆಯು ತನ್ನ ಜವಾಬ್ದಾರಿ ಮರೆತು ಅಕ್ರಮ ಮದ್ಯ ಮಾರಾಟ ಮಾಡುವವರಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಜಯ ಕರ್ನಾಟಕ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟಿನೆ ಪ್ರಾರಂಭಸಿ ಅವರು, ರಾಷ್ಟ್ರೀಯ ಹೆದ್ದಾರಿ ಮೂಲಕ ಹಾದು ನಗರ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ ದಲ್ಲಿ ನಿರ್ಲಕ್ಷ್ಯ ತೋರಿದ್ದ ಅಧಿಕಾರಗಳ ವಿರುದ್ಧ ದಿಕ್ಕಾರ ಕೂಗಿದರು. ತದನಂತರ ತಾಲ್ಲೂಕು ಆಡಳಿತ ಸೌಧಕ್ಕೆ ತೆರಳಿ ತಹಶಿಲ್ದಾರ ನಾಗಯ್ಯ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಜಿಲ್ಲಾ ಅಧ್ಯಕ್ಷ ಮಹೇಶ ನಾಯಕ ಮಾತಾನಾಡಿದ ಅವರು, ಬಡವರು ಬದುಕು ಬಿದಿಗೆ ಬರುತ್ತಿವೆ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕಿರಾಣಿ ಅಂಗಡಿ ಮತ್ತು ಪಾನಶಾಪ್ ಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಕೂಲಿ ನಾಲಿ ಮಾಡಿ ಬದುಕುತ್ತಿರುವ ಹೆಣ್ಣು ಮಕ್ಕಳ ಜೀವನ ನಡೆಸುವುದು ಕಷ್ಟಕರವಾಗಿದೆ. ಬಹುತೇಕ ಗ್ರಾಮಣ ಭಾಗದಲ್ಲಿ ಕೂಲಿಕಾರ್ಮಿಕ ಮತ್ತು ರೈತ ಕುಟುಂಬಗಳು ಇರುತ್ತವೆ. ಅವರ ಜೀವನ ಅಪರೋಕ್ಷವಾಗಿ ಅಧಿಕಾರಿಗಳು ಹಾಳು ಮಾಡಿದಂತಾಗುತ್ತಿದೆ ಎಂದು ಗಂಭೀರವಾಗಿ ಆರೋಪ ಮಾಡಿದರು. ಈ ಕೂಡಲೇ ತಾಲ್ಲೂಕು ಆಡಳಿತ ಮೂಲಕ ಜಯ ಕರ್ನಾಟಕ ಸಂಘಟನೆ ಎಚ್ಚರಿಕೆ ಕೊಡುತ್ತದೆ. ಆದಷ್ಟು ಬೇಗ ಶಿಸ್ತಿನ ಕ್ರಮಕ್ಕಾಗಿ ಜಯ ಕರ್ನಾಟಕ ಸಂಘಟನೆ ಆಗ್ರಹಿಸುತ್ತೆದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಿಯಾಜ ಪಾಂಡು, ಖಾಜು ಪಾಂಡು, ಪರಸಪ್ಪ ದೊಡ್ಡಮನಿ, ಸಂತೋಷ ಕಪನಿಂಬರಗಿ, ವಿಜಯ ಮಾದರ, ಸಚಿನ್ ಹೊಸಮನಿ, ಆಕಾಶ ನಾವಿ, ಬೊರಮ್ಮ ಹರಿಜನ, ಫಾತಿಮಾ ಸೈಯದ್, ಶಾಲಿಮಾ ಕರೋಶಿ ಇನ್ನೂ ಅನೇಕರು ಉಪಸ್ಥಿತರಿದ್ದರು.