ಎಂ.ಎನ್.ಮದರಿ ಅವರಿಂದ ಪತ್ರಿಕಾಗೋಷ್ಠಿ: ಕಿರಣ್, ಶ್ರದ್ಧಾ ಕಲ್ಯಾಣೋತ್ಸವ: ೪೦೦೦೦ಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ:
೧೮ರಂದು ೪೬ ಜೋಡಿಗಳ ಉಚಿತ ಸಾಮೂಹಿಕ ವಿವಾಹ
ಕಿರಣ್ ಶ್ರದ್ಧಾ ಕಲ್ಯಾಣೋತ್ಸವ: 40 ಸಾವಿರ ಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ..! 46 ಜೋಡಿಗಳ ಉಚಿತ ಸಾಮೂಹಿಕ ವಿವಾಹ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿರುವ ಜೇಷ್ಠ ಪುತ್ರ ಕಿರಣ್, ಶ್ರದ್ಧಾ ಅವರ ಕಲ್ಯಾಣೋತ್ಸವ ಅಂಗವಾಗಿ ಅಭ್ಯುದಯ ಸೈನ್ಸ್ ಪಿಯು ಕಾಲೇಜು ಮೈದಾನದಲ್ಲಿ ಮೇ ೧೮ ರಂದು ಮದ್ಯಾಹ್ನ ೧೨.೨೫ ಗಂಟೆಗೆ ೪೬ ಜೋಡಿಗಳ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ನಾಡಿನ ಮಠಾಧೀಶರು, ರಾಜಕೀಯ ಮುಖಂಡರು ಸೇರಿದಂತೆ ೪೦೦೦೦ಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ ತಿಳಿಸಿದರು.
ಕಾಲೇಜು ಆವರಣದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಗ್ರಾಮ ಮುದ್ದೇಬಿಹಾಳ ತಾಲೂಕಿನ ಖಿಲಾರಹಟ್ಟಿಯಲ್ಲಿ ಕಳೆದ ೧೫ ವರ್ಷಗಳಿಂದ ಪ್ರತಿ ವರ್ಷ ಯುಗಾದಿ ಜಾತ್ರೆಯಂದು ನಮ್ಮ ತಂದೆ ನೀಲಕಂಠಪ್ಪ, ತಾಯಿ ಮಲ್ಲಮ್ಮ ಅವರ ಸದಿಚ್ಚೆಯ ಮೇರೆಗೆ ನಮ್ಮ ಕುಟುಂಬದಿAದ ಉಚಿತ ಸಾಮೂಹಿಕ ವಿವಾಹ ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲೀವರೆಗೂ ಅಂದಾಜು ೭೦೦ ಜೋಡಿಗಳ ದಾಂಪತ್ಯ ಜೀವನಕ್ಕೆ ಅನುವು ಮಾಡಿಕೊಡಲಾಗಿದೆ. ಈ ವರ್ಷ ಮಗನ ಮದುವೆ ಇದ್ದ ಕಾರಣ ಯುಗಾದಿ ಜಾತ್ರೆಯಲ್ಲಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಿಲ್ಲ. ಅದರ ಬದಲು ಈಗ ಹಮ್ಮಿಕೊಳ್ಳಲಾಗುತ್ತಿದೆ. ವಧು ವರರಿಗೆ ಎರಡು ಜೊತೆ ಬಟ್ಟೆ, ತಾಳಿ, ಕಾಲುಂಗುರ ಸೇರಿ ಮದುವೆಗೆ ಅಗತ್ಯವಾದ ಎಲ್ಲ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತೇವೆ. ಈ ಮದುವೆಗೆ ಹಿಂದುಳಿದ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿದ್ದಾರೆ ಎಂದರು.
ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಜಗದ್ಗುರು ನಿರಂಜನಾನAದಪುರಿ ಮಹಾಸ್ವಾಮೀಜಿ, ಸಿದ್ದರಮಾನಂದಪುರಿ ಮಹಾಸ್ವಾಮೀಜಿ, ಕೂಡಲಸಂಗಮದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ, ತಾಳಿಕೋಟೆಯ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು, ಅಡವಿಲಿಂಗ ಮಹಾರಾಜರು, ಗೊಳಸಾರ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ನವದಂಪತಿಗಳನ್ನು ಆಶೀರ್ವದಿಸಲು ಆಗಮಿಸಲಿದ್ದಾರೆ ಎಂದರು.
ಸಾಮೂಹಿಕ ವಿವಾಹದ ವೇದಿಕೆಯಲ್ಲಿ ಯಾವುದೆ ಸಭೆ, ರಾಜಕೀಯ ಭಾಷಣ ಇರುವುದಿಲ್ಲ. ಕಿರಣ್, ಶ್ರದ್ಧಾ ಅವರೊಂದಿಗೆ ಸಮಾನಾಂತರ ಉತ್ತರಮುಖಿ ವೇದಿಕೆಯಲ್ಲಿ ಎಲ್ಲ ನವದಂಪತಿಗಳನ್ನು ಒಂದೆಡೆ ಕೂಡಿಸಲಾಗುತ್ತದೆ. ಕಿರಣ್, ಶ್ರದ್ಧಾ ಅವರನ್ನು ಹರಸಿ ಆಶೀರ್ವದಿಸುವ ಎಲ್ಲ ಪೂಜ್ಯರು, ಗಣ್ಯರು, ಬಂಧುಗಳು ಇತರೆ ನವದಂಪತಿಗಳನ್ನೂ ಹರಸಿ, ಆಶೀರ್ವದಿಸಲು ಅವಕಾಶ ಮಾಡಿಕೊಡಲಾಗಿದೆ. ಮೇಲು, ಕೀಳು ಎನ್ನದೆ ಎಲ್ಲ ನವದಂಪತಿಗಳನ್ನು ಒಂದೇ ದೃಷ್ಟಿಯಲ್ಲಿ ನೋಡಲಾಗುತ್ತದೆ. ನಲವತ್ತು ಸಾವಿರಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ ಎಂದರು.
ಕಾಲೇಜಿನ ಹಾಸ್ಟೇಲ್ ಎದುರು ವಿಶಾಲವಾದ ಜಾಗದಲ್ಲಿ ಗದ್ದಲವಾಗದಂತಿರಲು ಸಾರ್ವಜನಿಕರಿಗೆ ಹೆಚ್ಚಿನ ಕೌಂಟರ್‌ಗಳ ಮೂಲಕ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಊಟದಲ್ಲಿ ತಿರುಪತಿ ಲಾಡು ವಿಶೇಷ ಸಿಹಿತಿಂಡಿ ಸಹಿತಿ ಭೂರಿ ಭೋಜನಕ್ಕೆ, ಪಾರ್ಕಿಂಗ್‌ಗೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಲಾಗಿದೆ. ತಿರುಪತಿಯ ಶ್ರೀ ಬಾಲಾಜಿ ಮಂಟಪದ ಮಾದರಿಯಲ್ಲಿ ಮದುವೆ ಮಂಟಪ ಸಿದ್ದಗೊಳ್ಳಲಿದೆ ಎಂದರು.
ಪಿಎಲ್‌ಡಿ ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಸಂಸ್ಥೆಯ ಲೆಕ್ಕಾಧಿಕಾರಿ ಬಸವರಾಜ ಬಿಜ್ಜೂರ, ಕಾಲೇಜಿನ ಆಡಳಿತಾಧಿಕಾರಿ ಬಿ.ಜಿ.ಬಿರಾದಾರ, ಗುತ್ತಿಗೆದಾರ ಬಾಗಣ್ಣ ಕಡ್ಲಿ ಇತರರು ಇದ್ದರು.
ಸಾಮೂಹಿಕ ವಿವಾಹದ ಪ್ರಯೋಜನವನ್ನು ಅನೇಕ ಬಡವರು, ಹಿಂದುಳಿದವರು ಪಡೆದುಕೊಂಡಿದ್ದಾರೆ. ನಮ್ಮ ಹಿರಿಯರ, ನಮ್ಮ ಆತ್ಮಸಂತೋಷಕ್ಕಾಗಿ ಇದನ್ನು ಮಾಡುತ್ತಿದ್ದೇವೆ. ಮೇ ೧೮ರಂದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಎಲ್ಲರನ್ನೂ ಹರಸಬೇಕು ಎಂದು ಅವರು ಮನವಿ ಮಾಡುತ್ತೇನೆ.
-ಎಂ.ಎನ್.ಮದರಿ, ಸಮಾಜ ಸೇವಕರು, ಮುದ್ದೇಬಿಹಾಳ.
ಮುದ್ದೇಬಿಹಾಳ: ಪತ್ರಿಕಾಗೋಷ್ಠಿಯಲ್ಲಿ ಎಂ.ಎನ್.ಮದರಿ ಅವರು ಮಾತನಾಡಿದರು. ಬಿ.ಕೆ.ಬಿರಾದಾರ, ಬಿ.ಜಿ.ಬಿರಾದಾರ, ಬಸವರಾಜ ಬಿಜ್ಜೂರ, ಬಾಗಣ್ಣ ಕಡ್ಲಿ ಇದ್ದಾರೆ.
ಮುದ್ದೇಬಿಹಾಳ: ಅಭ್ಯೂದಯ ಕಾಲೇಜ್ ಹಾಸ್ಟೇಲ್ ಹತ್ತಿರ ವಿಶಾಲ ಜಾಗದಲ್ಲಿ ಹಾಕುತ್ತಿರುವ ಸಾಮೂಹಿಕ ಮದುವೆ ಟೆಂಟ್ ಸಿದ್ದತೆಯನ್ನು ಎಂ.ಎನ್.ಮದರಿ ಇನ್ನಿತರರು ಪರಿಶೀಲಿಸಿದರು.