ಇಂಡಿಯಲ್ಲಿ ವೃದ್ದೆಯ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದ ಖದೀಮರು..!
ವಿಜಯಪುರ : ವೃದ್ಧೆಯ ಕಿವಿಯಲ್ಲಿದ್ದ ಚಿನ್ನವನ್ನು ಕಳ್ಳರು ಬೈಕ್‌ನಲ್ಲಿ ಆಗಮಿಸಿ ಕಳ್ಳತನಗೈದು ಎಸ್ಕೇಪ್ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇಬೇವನೂರ ಗ್ರಾಮದಲ್ಲಿ ನಡೆದಿದೆ. 70 ವರ್ಷದ ವೃದ್ಧೆಯಾದ ಸೋನಾಬಾಯಿ ಪರೀಟ್ ಎಂಬುವರ 3 ತೊಲಿಯ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇನ್ನು ಗಾಯಾಳು ಸೋನಾಬಾಯಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.


















