ಪ್ರಸ್ತುತ ಕವಲು ದಾರಿಯಲ್ಲಿರುವ ಸಮಾಜವನ್ನು ಸರಿದಾರಿಗೆ ತರುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ’ ಎಂದು ಜಟ್ಟಿಂಗರಾಯ ದೇವಸ್ಥಾನದ ಅರ್ಚಕರ ಬಾಬು ಮಾವಿನಹಳ್ಳಿ ಹೇಳಿದರು.ನೂತನವಾಗಿ ಆರಂಭವಾಗುತ್ತಿರುವ “ವಾಯ್ಸ್ ಆಫ್ ಜನತಾ”ವಾಹಿನಿಗೆ ಶುಭ ಹಾರೈಸಿದರು.
ತದನಂತರ ಮಾತಾನಾಡಿ ರೈತರ ಕಷ್ಟ ಸುಖಗಳಲ್ಲಿ,ದೀನ ದಲಿತರ,ಅನ್ಯಾಯಕ್ಕೋಳಗಾದವರ ಪರ ಕೆಲಸಮಾಡಬೇಕು.ಶಾಸಕಾಂಗ ನ್ಯಾಯಾಂಗ,ಕಾರ್ಯಾಂಗದ ಹಾಗೆ ಮಾಧ್ಯಮವೂ ಕೂಡಾ ಒಂದು ಅಂಗ.ಅದೇ ರೀತಿ ಸಾಮಾಜಿಕ ಬದ್ದತೆಯೊಂದಿಗೆ ಕಾರ್ಯ ಆರಂಭಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿ,ಮುಗಿಲೆತ್ತರಕ್ಕೆ ಬೆಳೆಯಲಿ ಎಂದು ಶುಭಕೋರಿದ್ದಾರೆ.