Voiceofjanata DesK News
‘ಕರುನಾಡ ಚಕ್ರವರ್ತಿ’ ಡಾ. ಶಿವರಾಜ್ ಕುಮಾರ್, ಬೆಳ್ಳಿ ಪರದೆಯ ಮೇಲೆ ಸಾರ್ಥಕ 4 ದಶಕಗಳ ಅಮೋಘ ಸೇವೆ
ಕನ್ನಡ ಚಿತ್ರರಂಗದ ಮೇರು ನಟ, ನಮ್ಮೆಲ್ಲರ ಪ್ರೀತಿಯ ‘ಕರುನಾಡ ಚಕ್ರವರ್ತಿ’ ಡಾ. ಶಿವರಾಜ್ ಕುಮಾರ್ ಅವರು, ಬೆಳ್ಳಿ ಪರದೆಯ ಮೇಲೆ ಸಾರ್ಥಕ 40 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಹೃತ್ಪೂರ್ವಕ ಅಭಿನಂದನೆಗಳು. ಅವರ ಅದ್ಭುತ ನಟನೆ ಮತ್ತು ಸರಳ ಸಜ್ಜನಿಕೆಯ ವ್ಯಕ್ತಿತ್ವ ಕೋಟ್ಯಂತರ ಕನ್ನಡಿಗರಿಗೆ ಸದಾ ಸ್ಫೂರ್ತಿ.
ಚಿತ್ರರಂಗದ ನಾಲ್ಕು ದಶಕಗಳ ಅವರ ʻಆನಂದ’ದ ಅಪ್ರತಿಮ ಪಯಣದಲ್ಲಿ ‘ಓಂ’, ‘ನಮ್ಮೂರ ಮಂದಾರ ಹೂವೇ’, ‘ಜೋಗಿ’, ‘ಭೈರತಿ ರಣಗಲ್’ ಹಾಗೂ ‘45’ ನಂತಹ ಸಿನಿಮಾಗಳು ಅವರ ಅಮೋಘ ಅಭಿನಯಕ್ಕೆ ಸಾಕ್ಷಿಯಾಗಿವೆ. ಒಬ್ಬ ನಟನಾಗಿ ಮಾತ್ರವಲ್ಲದೇ, ಕನ್ನಡಿಗರ ಕಷ್ಟ-ಸುಖಗಳಿಗೆ ಸ್ಪಂದಿಸುವ ಮೂಲಕ ಸಾಮಾಜಿಕ ಕಾಳಜಿ ತೋರುವ ಅವರ ನಡೆ-ನುಡಿ ನಿಜಕ್ಕೂ ಶ್ಲಾಘನೀಯ.
ಹ್ಯಾಟ್ರಿಕ್ ಹೀರೋ ಶಿವಣ್ಣ ಆರೋಗ್ಯವಂತರಾಗಿ ಚಿತ್ರರಸಿಕರನ್ನು ಸದಾ ರಂಜಿಸುತ್ತಿರಲಿ ಹಾಗೂ ಕನ್ನಡ ಕಲಾಮಾತೆಯ ಸೇವೆ ನಿರಂತರವಾಗಿ ನಡೆಯಲಿ ಎಂದು ಹಾರೈಸುತ್ತೇನೆ.
@NimmaShivanna



















