ಶಿಕ್ಷಕ ಸುಭಾಶ್ಚಂದ್ರಗೆ “ಕರ್ನಾಟಕ ಶಿಕ್ಷಕ ರತ್ನ ಪ್ರಶಸ್ತಿ”
ಇಂಡಿ: ತಾಲ್ಲೂಕಿನ ಲಾಳಸಂಗಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸುಭಾಶ್ಚಂದ್ರ ವಿಠೋಬಾ ನಾವಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದನ್ನು ಗುರುತಿಸಿ ಇತ್ತೀಚೆಗೆ “ಕರ್ನಾಟಕ ಶಿಕ್ಷಕ ರತ್ನ ಪ್ರಶಸ್ತಿ”ಪ್ರಧಾನ ಮಾಡಲಾಯಿತು.
ಬೆಂಗಳೂರಿನ ಜಯನಗರದಲ್ಲಿನ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪದಲ್ಲಿ ಚೇತನ ಪ್ರತಿಷ್ಠಾನ ಕರ್ನಾಟಕ ಸಹಕಾರದೊಂದಿಗೆ ಅಖಿಲ ಕರ್ನಾಟಕ ಏಳನೆಯ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಶಿಕ್ಷಕ ರತ್ನ ರಾಜ್ಯಪ್ರಶಸ್ತಿಯನ್ನು ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಡಾ.ಜಿ.ಶಿವಣ್ಣ ಪ್ರದಾನ ಮಾಡಿದರು.
ಡಾ: ಗಂಗಾಧರ. ವ.ಮ, ಪೀರಸಾಬ ನದಾಫ್ ಡಾ: ಶೃತಿ ಮಧುಸೂದನ್, ಡಾ. “ಎಸ್.ಬಾಲಾಜಿ, ಚಂದ್ರಶೇಖರ ಮಾಡಲಗೇರಿ ಸಂಗನಗೌಡ ಹಚಡದ ಇದ್ದರು.
ಕರ್ನಾಟಕ ಶಿಕ್ಷಕ ರತ್ನ ರಾಜ್ಯಪ್ರಶಸ್ತಿ ಪಡೆದ ಹಿನ್ನೆಲೆ ಎಂ.ಪಿ.ಎಸ್.ಲಾಳಸAಗಿ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಮುಖ್ಯಗುರುಗಳು ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಗ್ರಾಮಸ್ಥರು ಶಿಕ್ಷಕ ನಾವಿ ಅವರಿಗೆ ಸತ್ಕರಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಇಂಡಿ: ತಾಲ್ಲೂಕಿನ ಲಾಳಸಂಗಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸುಭಾಶ್ಚಂದ್ರ ವಿಠೋಬಾ ನಾವಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದನ್ನು ಗುರುತಿಸಿ ಇತ್ತೀಚೆಗೆ “ಕರ್ನಾಟಕ ಶಿಕ್ಷಕ ರತ್ನ ಪ್ರಶಸ್ತಿ”ಪ್ರಧಾನ ಮಾಡಲಾಯಿತು.