ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿ ನಿಯಮಿತ,ಬೆಂಗಳೂರು ಚುನಾವಣೆಯಲ್ಲಿ ನಿರ್ದೇಶಕ ಆನಂದಗೌಡ ಎನ್ ಬಿರಾದಾರಗೆ ಗೌರವ ಸನ್ಮಾನ
ಮುದ್ದೇಬಿಹಾಳ: ಇತ್ತೀಚಿಗೆ ನಡೆದ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿ ನಿಯಮಿತ,ಬೆಂಗಳೂರು ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ಆನಂದಗೌಡ ಎನ್ ಬಿರಾದಾರ ಅವರನ್ನು ಸಂಗಮೇಶ ಹಿರೇಮಠ ಹಾಗೂ ಸತೀಶ ಹಿರೇಮಠ ಸಹೋದರರು ಹಾಗೂ ಕುಟುಂಬ ಪರಿವಾರದೊಂದಿಗೆ ಮುದ್ದೇಬಿಹಾಳದ ಗ್ರೀನ್ ಸಿಟಿ ಕಾಲೋನಿಯಲ್ಲಿ ಇರುವ ಅವರ ನಿವಾಸದಲ್ಲಿ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸ್ನೇಹಜೀವಿ ಗೆಳೆಯರ ಬಳಗದ ಬಸವರಾಜ ಅಂಬಲಿ, ಬಿ ಆರ್ ಹಳ್ಳೂರ, ಪ್ರಶಾಂತ ಅಂಗಡಿ, ಅಬ್ದುಲ್ ಸತ್ತರ್ ಮೊಮಿನ, ಮುತ್ತು ಸಿದ್ದಾಪುರ, ಗಿರೀಶ ಇಲ್ಲೂರ, ಆನಂದ ಹಿರೇಮಠ, ವೀರೇಶ ಕಲ್ಯಾಣಮಠ, ಹಾಗೂ ಶ್ರೀ ಆನಂದಗೌಡರ ಗೆಳೆಯರ ಬಳಗದ ಎಂ ಎಸ್ ಗೌಡರ, ವ್ಹಿ ವ್ಹಿ ಪವಾಡಶೆಟ್ಟಿ, ಎಸ್ ಐ ಕಮಲಪ್ಪನವರ, ವಿಠ್ಠಲ್ ಕಿಲ್ಲಾರಟ್ಟಿ ಯಲಾಗುರೇಶ ತೊನಿಶ್ಯಾಳ, ಸಂತೋಷ ಅಂಗಡಗೇರಿ,ಸೇರಿದಂತೆ ಉಪಸ್ಥಿತರಿದ್ದರು.