ಹನೂರು ಪಟ್ಟಣದಲ್ಲಿ ಅದ್ದೂರಿಯಾಗಿ ಜರುಗಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ..
ಹನೂರು :ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಎಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಹಾಗೆಯೆ ನಮ್ಮ ತಾಲ್ಲೂಕಿನಲ್ಲಿಯು ಸಹ ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದೇವೆ .ನಾವು ಅನ್ಯ ಭಾಷೆ ಜನರಿಗೆ ಕನ್ನಡವನ್ನು ಕಲಿಸಿ, ಕನ್ನಡವನ್ನು ಉಳಿಸಿ . ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಶಾಸಕ ಮಂಜುನಾಥ್ ತಿಳಿಸಿದರು.
ಹನೂರು ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಮಾನ್ಯ ಶಾಸಕರು ದೀಪ ಬೆಳಗಿಸುವ ಮೂಲಕ ಹಾಗೂ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಸಕ ಎಂ ಆರ್ ಮಂಜುನಾಥ್ ರವರು ಮಾತನಾಡಿ
ನಮ್ಮ ಮುಂದಿನ ಪೀಳಿಗೆಗೆ ಕನ್ನಡತನವನ್ನು ಉಳಿಸಿ ಬೆಳೆಸಿ ಹೋಗುವ ಜವಾಬ್ದಾರಿ ನಮ್ಮ ಮೇಲಿದೆ, ನಾವು ಕನ್ನಡಿಗರಾಗಿ ಕನ್ನಡವನ್ನು ಬೆಳೆಸುವ ಕೆಲಸಕ್ಕೆ ನಾವೆಲ್ಲರೂ ಬದ್ಧರಾಗೋಣ ಎಂದು ತಿಳಿಸಿದರು. ಇದೇ ಸಮಯದಲ್ಲಿ
ಮಕ್ಕಳ ನೃತ್ಯಕ್ಕೆ ಮನಸೋತು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 125 ಅಂಕಗಳನ್ನು ಗಳಿಸಿ ತಾಲ್ಲೂಕಿಗೆ ಕೀರ್ತಿ ತಂದ 5 ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ವಿವರಿಸಿದರು. ಇಂದಿನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಲು ಸಹಕಾರ ನೀಡಿದ ಕ್ಷೇತ್ರದ ಪ್ರತಿಯೊಬ್ಬರಿಗೂ ಶುಭಾಶಯ ಕೋರುತ್ತಾ ಗಡಿ ಜಿಲ್ಲೆ ಗಡಿ ತಾಲೂಕಿನಲ್ಲಿ ಕನ್ನಡವನ್ನು ಎಲ್ಲ ರೀತಿಯಲ್ಲಿ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಅದು ಮುಂದಿನ ದಿನಗಳಲ್ಲೂ ಕೂಡ ಮುಂದುವರೆಯುತ್ತದೆ ಎಂದರು. ಟಿಬೆಟಿಯನ್ ಮಹಿಳೆಯೊಬ್ಬರು ಜನಪ್ರಿಯ ಕನ್ನಡ ಗೀತೆಯನ್ನು ಹಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಮನರಂಜಿಸಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಯುವ ಸಾಹಿತಿ ಪೊನ್ನಚಿ ಸ್ವಾಮಿ ರವರು ಕನ್ನಡ ಭಾಷೆಗೆ ಕನ್ನಡಿಗರು ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಕನ್ನಡ ಉಳಿಸಿ ಬೆಳೆಸಬೇಕು ಒಂದು ದಿನ ಆಚರಣೆ ಮಾಡಿ ಬಿಡುವುದಲ್ಲ ಕನ್ನಡಕ್ಕೆ ಕೊಡುವ ಗೌರವ.ತಮಿಳು ಇಂಗ್ಲಿಷ್ ವಿವಿಧ ಭಾಷೆ ಮಾತಾಡುವವ ಜನರೇ ಅತ್ಯಂತ ಜನಪ್ರಿಯ ಭಾಷೆ ಕನ್ನಡ ಅಂತ ಒಪ್ಪಿಕೊಂಡಿದ್ದಾರೆ. ಎಂಟು ಜ್ಞಾನ ಪೀಠ ಪ್ರಶಸ್ತಿ ಪಡೆದುಕೊಂಡಿರುವ ಭಾಷೆ ನಮ್ಮ ಕನ್ನಡ ಭಾಷೆ ಕರ್ನಾಟಕ ರಾಜ್ಯವನ್ನು ಡೆಚ್ಚರು,ಪ್ರೆಂಚರು,ಟಿಪ್ಪು ಸುಲ್ತಾನ್ ಇನ್ನು ಹಲವಾರು ಬೇರೆ ಭಾಷೆಯ ಜನರು ದಾಳಿ ಮಾಡಿ ಹಲವಾರು ವರ್ಷಗಳು ಆಳ್ವಿಕೆ ಮಾಡಿದರು ರಾಜ್ಯದಲ್ಲಿ ಕನ್ನಡವೇ ಶ್ರೇಷ್ಠ ಭಾಷೆಯಾಗಿ ಉಳಿದಿದೆ ಆಗಾಗಿ ಕನ್ನಡಿಗರಾಗಿ ಹೆಮ್ಮೆ ಪಡಬೇಕು ಭಾರತೀಯ ಭಾಷೆಗಳಲ್ಲಿ ಮಾತಾಡುವದನ್ನು ಬರೆಯಲು ಬರೆದದನ್ನು ಮಾತನಾಡಲು ಬರುವ ಹಾಗೆ ಇರುವ ಏಕೈಕ ಭಾಷೆ ಕನ್ನಡ ತುಂಬಾ ಚಂದದ ಭಾಷೆ ಕನ್ನಡ. ಹಿಂದಿ ಭಾಷೆ ಶ್ರೇಷ್ಠ ಅಂತ ಹೇಳ್ತಾರೆ ಕೆಲವರು ಆದರೆ ಕನ್ನಡ ಭಾಷೆ ಶೂಟ್ ಬೂಟು ಅಕೊಂಡು ಮಿಂಚುತ್ತಿದ್ದ ವೇಳೆಯಲ್ಲಿ ಬೇರೆ ಭಾಷೆಗಳು ಚಡ್ಡಿ ಅಕೋದು ಗೊತ್ತಿರಲಿಲ್ಲ. ಕನ್ನಡ ಭಾಷೆಯನ್ನು ವಿಶ್ವ ಲಿಪಿಗಳ ರಾಣಿ ಎಂದು ಕರೆಯುತ್ತಾರೆ ಅಂತಹ ಪ್ರಸಿದ್ದಿ ಇರುವ ಭಾಷೆ ನಮ್ಮ ಕನ್ನಡ. ಎಂದು ಸವಿವರವಾಗಿ ಕನ್ನಡ ಭಾಷೆಯ ಬಗ್ಗೆ
ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮ
ಆರ್.ಎಂ.ಸಿ. ಆವರಣದಲ್ಲಿ ವಿವಿಧ ಕಲಾ ತಂಡಗಳ ಸಮಾಗಮದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ಶಾಸಕ ಎಂ ಆರ್ ಮಂಜುನಾಥ್ ರವರು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳಾದ ವಾದ್ಯ ಮೇಳ ವೀರಗಾಸೆ ತಮಟೆ ಮಕ್ಕಳಿಂದ ಉತ್ತಮ ಕಲಾ ಪ್ರದರ್ಶನ ನಡೆಯಿತು.
ಹನೂರು ಪಟ್ಟಣದಲ್ಲಿ ವಿಜೃಂಭಣೆಯ ಕನ್ನಡ ರಾಜ್ಯೋತ್ಸವ ಸಂಭ್ರಮ ಮೆರುಗು ತಂದು ಕೊಟ್ಟ ಟಿಬೇಟಿಯನ್ನರ ತಂಡ ನೃತ್ಯ ಮಾಡುವುದರ ಮುಖಾಂತರ ನೆರೆದಿದ್ದವರ ಮನಸ್ಸನ್ನು ಸೂರ್ಯಗೊಳಿಸಿತು.
ಈ ಸಮಯದಲ್ಲಿ ತಹಸೀಲ್ದಾರ್ ವೈ ಕೆ ಗುರುಪ್ರಸಾದ್, ಬಿಗ್ ಬಾಸ್ ಖ್ಯಾತಿಯ ಪ್ರಥಮ್, ಇ ಓ ಆರ್ ಉಮೇಶ್, ಕ್ಷೇತ್ರ ಶಿಕ್ಷಣಧಿಕಾರಿ ಶಿವರಾಜು, ಸಿಡಿಪಿಒ ನಂಜಮಣಿ. ಮತ್ತು ಪಟ್ಟಣ ಪಂಚಾಯತ್ಸದಸ್ಯರುಗಳಾದ ಆನಂದ್ ಗಿರೀಶ್ ಹರೀಶ್ ಮಹೇಶ್ ಸಂಪತ್ ಸುದೇಶ್ ಪವಿತ್ರ ಮಂಜುಳಾ ರೈತ ಸಂಘದ ಅಧ್ಯಕ್ಷ ಸಂಗ್ರಹಿ ಕರಿಯಪ್ಪ ಟಿಬೆಟಿಯನ್ ಕ್ಯಾಂಪ್ನ ಆಡಳಿತ ಅಧಿಕಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಚೇತನ್ ಕುಮಾರ್ ಎಲ್, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ..