ಕರ್ನಾಟಕವು ಆಧ್ಯಾತ್ಮಿಕ ಪುಣ್ಯಕ್ಷೇತ್ರ : ಕೊಯಮತ್ತೂರಿನ ರಾಮಾನಂದ ಕುಮಾರಗುರುಪರ ಸ್ವಾಮೀಜಿ
ವರದಿ: ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು :ಕರ್ನಾಟಕದಲ್ಲಿ ಮಠ ಮಾನ್ಯಗಳು ಧಾರ್ಮಿಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ಸಮಾಜದ ಅಭಿವೃದ್ಧಿಗೆ ಕಾರಣವಾಗಿವೆ ಎಂದು ಕೊಯಮುತ್ತೂರಿನ ಆದೀನ ಪೀಠದ ಅಧ್ಯಕ್ಷರಾದ ರಾಮಾನಂದ ಕುಮಾರಗುರುಪರ ಸ್ವಾಮೀಜಿಗಳು ತಿಳಿಸಿದರು.
ಹನೂರು ತಾಲ್ಲೂಕಿನ ಲೊಕ್ಕನಳ್ಳಿಯ ದೊಡ್ಡ ಸಂಪಿಗೆ ದೇವಾಲಯದ ಸಮೀಪವಿರುವ ಕೊಂಗು ವೆಲ್ಲಾಳ ಗೌಂಡರ್ ಸಮುದಾಯದ ಜಾಗದಲ್ಲಿ ಆಯೋಜಿಸಿದ ಕೊಂಗು ವೆಲ್ಲಾಳ ಗೌಂಡರ್ ಸಮುದಾಯ ಭವನ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮಿಗಳು ಕೊಳ್ಳೆಗಾಲದ ಭಾಗದಲ್ಲಿರುವವರು ಬಹಳ ಪುಣ್ಯವಂತರು ಇಲ್ಲಿ ಆಧ್ಯಾತ್ಮಿಕ ಸ್ಥಳಗಳಿವೆ. ವಿದ್ಯಾಭ್ಯಾಸ ಮಾಡಿದವರು ಉನ್ನತ ಮಟ್ಟದಲ್ಲಿ ಹಲವಾರು ಜನರಿದ್ದಾರೆ, ಕರುನಾಡು ಒಳ್ಳೆಯ ಸ್ಥಳ ಪಟ್ಟಧಾರಿಗಳೆಲ್ಲ ತಮ್ಮ ತಮ್ಮ ಕುಟುಂಬದ ಜೊತೆಯಲ್ಲಿ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ.ಪಾಶ್ಚಿಮಾತ್ಯ ದೇಶಗಳಲ್ಲಿನ ಸಂಸ್ಕೃತಿಗಳ ಮೊರೆ ಹೋಗದೆ ನಮ್ಮ ಸನಾತನ ಧರ್ಮದ ಕಡೆಗೆ ಗಮನ ಹರಿಸವಂತಾಗಬೇಕು ನಾವು ಎಲ್ಲಾರಿಗೂ ಮಾದರಿಯಾಗುವಂತೆ ಬೆಳೆಯಬೇಕು.ಆದಿಚುಂಚನಗಿರಿ ಮಠದ ವತಿಯಿಂದ ನಡೆಯುವ ಹಲವಾರು ಸಾಮಾಜಿಕ ಕೆಲಸಕ್ಕೆ ನಮ್ಮವರು ಸಹ ಭಾಗಿಯಾಗಿದ್ದಾರೆ , ಇಂತಹ ಕಾಲಘಟ್ಟದಲ್ಲಿ ಎಲ್ಲಾರಲ್ಲು ಒಂದಾಗಿ ಬಾಳಬೇಕು ಎಂಬ ಭಾವನೆಮೂಡಿಸಬೇಕು. ಮುಂದಿನದಿನಗಳಲ್ಲಿ ಈ ಭವನದ ಉದ್ಘಾಟನೆಗೆ ನಮ್ಮ ಸಮುದಾಯದ ಮಠಮಾನ್ಯರ ಜೊತೆಯಲ್ಲಿ ನಾನು ಸಹ ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಕೊಯಮುತ್ತೂರಿನ ಅಶ್ವಿನಿ ಆಸ್ಪತ್ರೆಯ ಸಂಸ್ಥಾಪಕರಾದ
ಡಾಕ್ಟರ್ ಎಲ್ . ಪಿ .ತಂಗವೇಲ್ ಮಾತನಾಡಿ ಲೊಕ್ಕನಹಳ್ಳಿ ಊರಿನ ಜನ ಬಹಳ ಒಳ್ಳೆಯ ಕೆಲಸಕ್ಕೆ ನನ್ನ ಸಹಕಾರ ಕೇಳಿದ್ದೀರಾ ನಿಮ್ಮ ಎಲ್ಲಾ ಕೆಲಸಕ್ಕೂ ನಾನು ಬೆನ್ನೆಲ್ಲುಬಾಗಿರುವೆ. ನಮ್ಮ ಸಮುದಾಯದ ಏಳ್ಗೆಗೆ ನಾನು ಸದಾ ಸಿದ್ದ ಈ ಸ್ಥಳವು ನನ್ನ ಸ್ವಂತ ಊರು,ಇದರಲ್ಲಿ ಎಲ್ಲರ ಶ್ರಮ ಅತಿ ಮುಖ್ಯವಾಗಿದೆ, ನಮ್ಮ ಕುಟುಂಬದ ಸದಸ್ಯರು ನಮ್ಮ ಕೆಲಸಕ್ಕೆ ಸಹಾಯ ಮಾಡಲು ಮುಂದೆಬಂದ ಕಾರಣ ನಾನು ಬಿಡುವು ಮಾಡಿಕೊಂಡು ನಿಮ್ಮಲ್ಲಿ ಬೆರೆಯುತ್ತಿದ್ದೇನೆ , ನಮ್ಮ ಊರಲ್ಲಿ ಪ್ರಪ್ರಥಮ ಪಟ್ಟದಾರಿಯು ನಾನಾಗಿದ್ದೆನೆ .ಹಾಗೂ ವೃತ್ತಿಯಲ್ಲಿ ನಾನು ಡಾಕ್ಟರ್ ಕೂಡ ಹೌದು ಎಲ್ಲಾರು ವಿದ್ಯಾಭ್ಯಾಸ ಮಾಡಬೇಕು .
ನಮ್ಮ ಊರಿನಲ್ಲಿ ಒಳ್ಳೆಯ ಶಿಕ್ಷಣ ಸಂಸ್ಥೆಗಳು ಇದೆ ಉನ್ನತ ಮಟ್ಟದ ಶಿಕ್ಷಣ ಪಡೆಯುವಂತಾಗಬೇಕು . ನಿವುಗಳು ವ್ಯವಸಾಯದ ಜೊತೆಯಲ್ಲಿ ಉನ್ನತ ಮಟ್ಟಕ್ಕೆರಬೇಕು . ನಮ್ಮಲ್ಲಿ ಎಲ್ಲಾರು ಒಗ್ಗಟ್ಟಾಗಿರಬೆಕು . ಪ್ರತಿ ಪಕ್ಷದಲ್ಲಿಯು ಸಹ ನಮ್ಮವರು ಬೆಳೆಯಬೇಕು .ನೀವು ಯುವಕರನ್ನು ಒಂದು ಪಟ್ಟಿ ಮಾಡಬೇಕು ಅವರನ್ನು ಬೆಳೆಸಬೇಕು. ಇದು ದೊಡ್ಡ ಕಲ್ಯಾಣ ಮಂಟಪವಾಗಬೇಕು .ಇಲ್ಲಿರುವ ಎಲ್ಲರು ಬುದ್ದಿವಂತರು . ವಿದ್ಯೆಯೆ ಎಲ್ಲದಕ್ಕು ಮುಖ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ , ಲೋಕನಹಳ್ಳಿ, ಕೊಂಗುಬಲ್ಲಾಳ ಕೌಂಟರ್ ಮುಖಂಡರುಗಳಾದ ಟಿ ಎಂ ಮುತ್ತುಸ್ವಾಮಿ ಗೌಂಡರ್ ರವರು ಕೆ ಎಸ್ ಕರುಪಣ್ಣ ಗೌಂಡರ್ ರವರು,ಸತ್ಯಮಂಗಲಂ ನ ಮಾಜಿ ವಿಧಾನಸಭಾ ಸದಸ್ಯರಾದ ಎಲ್‌ಪಿ ಧರ್ಮ ಲಿಂಗಂ ರವರು, ತಿರುಪೂರಿನ ಯೋಗೇಶ್ ಪ್ರಿಂಟರ್ಸ್ ಮಾಲೀಕರಾದ ಎಲ್ಎಸ್ ಮದಿಯಳಗನ್ ರವರು, ಕರ್ನಾಟಕ ಗೌಂಡರ್ ಸಂಘದ ಅಧ್ಯಕ್ಷರಾದ ಮೋಹನ್ ರವರು, ದಾವಣಗೆರೆಯ ಕೊಂಗುವೆಲ್ಲಾಳ ಗೌಡರ್ ಸಂಘದ ಅಧ್ಯಕ್ಷರಾದ ಮುತ್ತುವೆಲ್ ರವರು, ಭದ್ರಾವತಿ ಕೊಂಗುವೆಲ್ಲಾಳ ಗೌಡರ್ ಸಂಘದ ಅಧ್ಯಕ್ಷರಾದ ಆರ್ ಮದಿಯೊಳಗನ್ ರವರು, ಗುಂಡಲ್ ಪೇಟೆ ತಮಿಳು ಸಂಘದ ಕಾರ್ಯದರ್ಶಿಗಳಾದ ವಿ ಬಾಲಕೃಷ್ಣನ್ ರವರು, ಎಚ್ ಡಿ ಕೋಟೆ, ಕೊಂಗುವೆಲ್ಲಾಳ ಸಂಘದ ಅಧ್ಯಕ್ಷರಾದ ಪಳನಿ ಸ್ವಾಮಿರವರು, ಚಾಮರಾಜನಗರ ತಮಿಳು ಸಂಘದ ಅಧ್ಯಕ್ಷರಾದ ಚಿನ್ನಸ್ವಾಮಿ ರವರು, ಮೈಸೂರು ತಮಿಳು ಸಂಘದ ಪ್ರಧಾನ ಕಾರ್ಯದರ್ಶಿಗಳಾದ ರಘುಪತಿ ರವರು, ಹೊಸಪೇಟೆ, ಕೊಂಗುವೆಲ್ಲಾಳ ಗೌಂಡರ್ ಸಂಘದ ಅಧ್ಯಕ್ಷರಾದ ಆರ್ಮುಗಂ ರವರು, ಚಾಮರಾಜನಗರದ ಕೊಂಗುವೆಲ್ಲಾಳ ಗೌಂಡರ್ ಸಂಘದ ಅಧ್ಯಕ್ಷರಾದ ರಾಮಸ್ವಾಮಿ ರವರು, ಗುಂಡ್ಲುಪೇಟೆಯ ಕೊಂಗುವೆಲ್ಲಾಳ ಗೌಂಡರ್ ಸಂಘದ ಅಧ್ಯಕ್ಷರಾದ ವೇಲು ಸ್ವಾಮಿ ರವರು, ಕೊಳ್ಳೇಗಾಲದ ತಮಿಳು ಸಂಘದ ಅಧ್ಯಕ್ಷರಾದ ನಲ್ಲ ಸ್ವಾಮಿರವರು, ಹಿರಿಯೂರು ಕೊಂಗುವೆಲ್ಲಾಳ ಗೌಂಡರ್ ಸಂಘದ ಅಧ್ಯಕ್ಷರಾದ ಸುಂದರ ರವರು ಹಾಗು ಹನೂರು ಮತ್ತು ಕೊಳ್ಳೇಗಾಲ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಮುದಾಯದ ಮುಖಂಡರುಗಳು ಹಾಗೂ ಲೊಕ್ಕನಹಳ್ಳಿ ಗ್ರಾಮದ ಸಮುದಾಯದ ಮುಖಂಡರುಗಳು ಯಜಮಾನರುಗಳು ಯುವಕರುಗಳು ಹಾಜರಿದ್ದರು.