ವಿಜಯಪುರ : ಸರ್ಕಾರ ಜನರ ಮನೆ ಬಾಗಿಲೆಗೆ ನಮ್ಮ ದಾಖಲಾತಿಗಳನ್ನು ಕೊಡಲು ನಿನ್ನೆಯಿಂದ ಆರಂಭಿಸಿದೆ. ಆದರೆ ತಳವಾರ ಸಮುದಾಯದ ಮುಖಂಡರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಝಳಕಿ ಗ್ರಾಮದಲ್ಲಿ ನಡೆದಿದೆ. ಸರ್ಕಾರದ ಕಂದಾಯ ಸೌಲಭ್ಯಗಳು ಮನೆ ಬಾಗಿಲಿಗೆ ಎಂದು ಹೇಳಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರದ ನೀಡುವ ಬದಲು ಹಿಂದುಳಿ ವರ್ಗದ ಪ್ರ ವರ್ಗ 1ರ ಜಾತಿ ಸರ್ಟಿಫಿಕೇಟ್ ನೀಡಿ ಮೋಸ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡಲು ಅಧಿಕೃತ ಆದೇಶ ಹೊರಡಿಸಿದೆ. ಆದರೆ ಅಧಿಕಾರಿಗಳು ಸರಕಾರದ ಆದೇಶಗಳಿಗೆ ಮಾನ್ಯತೆ ಮಾಡದೇ ತಳವಾರ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಜೊತೆಗೆ ಯಾವುದೇ ಕಾರಣಕ್ಕೂ ನಿಮ್ಮ ಮನೆ ಬಾಗಿಲಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಸೇವಕ, ಅಥವಾ ಅಂಗನವಾಡಿ ಕಾರ್ಯಕರ್ತೆಯರು ಆಗಮಿಸಿ ಹಿಂದುಳಿದ ವರ್ಗದ ಪ್ರ ವರ್ಗ 1 ರ ಜಾತಿ ಸರ್ಟಿಫಿಕೇಟ್ ನೀಡಿದರೆ ತೆಗೆದುಕೋಳಬೇಡಿ. ಪರಿಶಿಷ್ಟ ಪಂಗಡ ಸರ್ಟಿಫಿಕೇಟ್ ನೀಡಿ ಇಲ್ಲದಿದ್ದರೆ ಬೇಡ ಎಂದು ಹೇಳಿ ವಾಪಸ್ ಕಳಿಸಿ ಎಂದು ಝಳಕಿ ಗ್ರಾಮ ಲೆಕ್ಕಾಧಿಕಾರಿಯ ಮೂಲಕ ತಹಶಿಲ್ದಾರರಿಗೆ ಪರಿಶಿಷ್ಟ ಪಂಗಡ (st) ಜಾತಿ ಸರ್ಟಿಫಿಕೇಟ್ ಬೇಡಿಕೆ ಇಟ್ಟಿದ್ದಾರೆ. ಪ ವರ್ಗ 1ಜಾತಿ ಸರ್ಟಿಫಿಕೇಟ್ ಬೇಡ ಎಂದು ನಿರಾಕರಿಸಿದ್ದಾರೆ. ಸಂದೀಪ ಬೆಳ್ಳಿ ಯುವನಾಯಕ ಅದನ್ನು ಹರೆದು ಕೆಳಗೆ ಬೀಸಾಕಿ, ಸರಕಾರದ ವಿರುದ್ಧ ಧಿಕ್ಕಾರ ಕೂಗಿದ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಜಯ ವಠಾರೆ, ಸಿದ್ದಣ್ಣ ಕೋಳಿ, ದಶವಂತ ತಲಾಟಿ, ಸಿದ್ದಾರಾಮ ಕೋಳಿ, ರಮೇಶ ಕೋಳಿ, ರಾಮಚಂದ್ರ ಕೋಳಿ , ಶ್ರೀಕಾಂತ್ ಕೋಳಿ, ಚಂದ್ರಶೇಖರ ಕೋಳಿ, ದ್ಯಾಮಗೊಂಡ ಹಬ್ಬೂಸಿ, ಪಂಡಿತ ಪಡನೂರ, ಅಪ್ಪಾಸಾಹೇಬ ರಂಜಣಗಿ, ಜಯಶ್ರೀ ಬೆಳ್ಳಿ, ಲಕ್ಷ್ಮೀ ಕೋಳಿ, ಗೀತಾ ರಂಜಣಗಿ, ಇಂದ್ರಾಬಾಯಿ ಕೋಳಿ,