ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅವಿಷ್ಕಾರ ಅಗತ್ಯ
ಇಂಡಿ : ಉನ್ನತ ಶಿಕ್ಷಣದಲ್ಲಿ ಹೊಸ ಅವಿಷ್ಕಾರಗಳು ನಡೆದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾದ ವಾತಾವರಣ ನಿರ್ಮಾಣ ವಾಗಬೇಕು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೊಸ ಬದಲಾವಣೆ ಯಾಗುತ್ತದೆ. ಅದರಿಂದ ಆಗುವ ಪ್ರಯೋಜನಗಳು ಏನು, ನಮ್ಮ ಭವಿಷ್ಯ ಹೇಗೆ
ಉಜ್ವಲವಾಗಲಿದೆ ಎಂಬುದು ಮಾಹಿತಿ ತೆಗೆದುಕೊಳ್ಳಬೇಕು ಎಂದು ವಿಜಯಪುರದ ಸಿ.ಪಿ.ಐ
ಶಶಿಕಾಂತ ತೊರವಿ ಹೇಳಿದರು.
ಪಟ್ಟಣದ ಕರ್ನಾಟಕ ವಿದ್ಯಾವರ್ಧಕ ಸಂಸ್ಥೆಯ ಕರ್ನಾಟಕ ಶಿಕ್ಷಕರ ಮಹಾವಿದ್ಯಾಲಯದಲ್ಲಿ 2023 – 24
ನೇ ಸಾಲಿನ ಪ್ರಥಮ ಸೆಮಿಸ್ಟರ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಹಾಗೂ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ರಾಣಿ ಚೆನ್ನಮ್ಮ ವಿವಿಯ ವಿಜಯಪುರ ಸ್ನಾತಕೊತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ರಮೇಶ ಕಾಂಬಳೆ ಮಾತನಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಉತ್ತಮ ಚಾರಿತ್ರ್ಯ ನಿರ್ಮಾಣ ನೈತಿಕ ಮೌಲ್ಯಗಳನ್ನು ಬೆಳೆಸಬೇಕು.
ವಿದ್ಯಾರ್ಥಿಗಳು ಮುಗಿಸಿ ಹೊರ ಬಂದ ನಂತರ
ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು
ಎಂದರು.
ಚಡಚಣ ಶ್ರೀ ಸಂಗಮೇಶ್ವರ ಮಹಾವಿದ್ಯಾಲಯದ
ಪ್ರಾಧ್ಯಾಪಕ ಡಾ. ಎಸ್.ಎಸ್.ದೇಸಾಯಿ ಮಾತನಾಡಿ ಪಠ್ಯ ಶಿಕ್ಷಣದಿಂದ ದೊರೆಯುವ ಎಲ್ಲ ಸೌಲಭ್ಯಗಳು
ಇಂದು ಪಠ್ಯೇತರ ಚಟುವಟಿಕೆಗಳಲ್ಲಿ ಅಭಿವೃದ್ಧಿ
ಹೊಂದುವದರಿಂದಲೂ ದೊರೆಯುತ್ತವೆ. ಈ ಎರಡು
ಮಾರ್ಗಗಳು ಇಂದು ಉದ್ಯೋಗ ಸಾಮಾಜಿಕ ಭದ್ರತೆಯುಳ್ಳ ಭವಿಷ್ಯ ರೂಪುಗಳಿಸಲು ನಮಗೆ ಸಹಕಾರಿಯಾಗಿವೆ ಎಂದರು. ಪ್ರಾಚಾರ್ಯ ಡಾ. ಸುಧಾ ಸುಣಗಾರ, ನಿವೃತ್ತ ಪ್ರಾಚಾರ್ಯ ಉಮೇಶ ಕೋಳೆಕರ,ಅಧ್ಯಕ್ಷತೆ ವಹಿಸಿ ಶಿವಪುತ್ರ ಕಡಕೋಳ ಗುರುಗಳು, ಬಿ.ಎಚ್.ಬಗಲಿ , ಸೋನಿ ಝಿಗಾಂಡೆ, ಎನ್.ಎಮ್.ಬುಳ್ಳಾ, ಎಂ.ಎಂ. ಪೊದ್ದಾರ, ಬಿ.ಕೆ.ಉಕಮನಾಳ, ಡಿ.ಎಸ್.ಮಠಪತಿ
ಮಾತನಾಡಿದರು.
ವೇದಿಕೆಯ ಮೇಲೆ ಶರಣು ಕುಮಸಗಿ, ನಿರ್ದೇಶಕ
ಬಿ.ಆಯ್.ಬಿರಾದಾರ, ಪ್ರಧಾನ ಕಾರ್ಯದರ್ಶಿ ಸಾಗರ
ಚವ್ಹಾಣ, ಐಶ್ವರ್ಯಾ ಕಕ್ಕಳಮೇಲಿ ಮತ್ತಿತರಿದ್ದರು.
ಇಂಡಿ ಪಟ್ಟಣದ ಕರ್ನಾಟಕ ಶಿಕ್ಷಕರ ಮಹಾವಿದ್ಯಾಲಯದಲ್ಲಿ ಪ್ರಥಮ ಸೆಮಿಸ್ಟರ
ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ
ತೊರವಿ ಮಾತನಾಡಿದರು.