ಕನ್ನಡ ರಾಜ್ಯೋತ್ಸವ; ಕನ್ನಡ ನಾಮಫಲಕ ಕಡ್ಡಾಯವಾಗಿರಲಿ ಕರವೇ ಕೆಂಗನಾಳ ಮನವಿ..
ತಾಂಬಾ ಪಂಚಾಯತನಲ್ಲಿ ಕನ್ನಡ ರಾಜ್ಯೋತ್ಸವ : ಪರವಾನಗಿ ಮೂಲಕ ಕನ್ನಡ ನಾಮಫಲಕ ಕಡ್ಡಾಯವಾಗಿರಲಿ ಕರವೇ ಕೆಂಗನಾಳ ಮನವಿ
ಇಂಡಿ : ತಾಂಬಾ ಗ್ರಾಮದ ಪಂಚಾಯತ ಕಚೇರಿಯ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರವೇ ಅಧ್ಯಕ್ಷ ಶಿವರಾಜ್ ಕೆಂಗನಾಳ ಮೊಟ್ಟ ಮೊದಲ ಬಾರಿಗೆ ಭಾಷಾವಾರು ಪ್ರಾಂತ್ಯಗಳನ್ನು ಒಂದು ಗುಡಿಸಿ 1956 ನವೆಂಬರ್ 1 ರಂದು ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂತು, ನಂತರ 1973 ರಲ್ಲಿ ನವೆಂಬರ್ 1 ರಂದು ಎಲ್ಲ ಭಾಗದವರ ಆಶಾಯದಂತೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು, ಹೀಗೆ ನಮ್ಮ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಜೊತೆಗೆ 8 ಜ್ಞಾನಪೀಠ ಪ್ರಶಸ್ತಿ ಲಬಿಸಿತು ಎಂದು ಹೇಳಿದರು ಹಾಗೆಯೇ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ತಾವು ಪರವಾನಗಿ ನೀಡುವಾಗ ಸಾರ್ವಜನಿಕರಿಗೆ ಕಡ್ಡಾಯವಾಗಿ ಕನ್ನಡ ನಾಮ ಫಲಕ ಹಾಕುವಂತೆ ಸೂಚಿಸಬೇಕು ಎಂದು ಮನವಿ ಮಾಡಿದರು.
ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು ರಜಾಕ್ ಚಿಕ್ಕಗಸಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್ ಹಡಲಸಂಗ ಹಾಗೂ ಪಂಚಾಯತ ಸರ್ವ ಸದಸ್ಯರು ಗ್ರಾಮ ಪಂಚಾಯತ ಸಿಬ್ಬಂದಿಗಳು, ಸಾರ್ವಜನಿಕರು ಭಾಗವಸಿದ್ದರು.