ನಿಶ್ವಾರ್ಥ ಸೇವಾ ಮನೋಭಾವ ಬೆಳೆಸಲು ಎನ್ ಎಸ್ ಎಸ್ ಸಹಕಾರಿ : ಡಾ.ಶರಣಪ್ಪ ಮಾಳಗಿ
ಕಮಲಾಪುರ : ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ನಾಯಕತ್ವ ಗುಣ, ಕಾಯಕತ್ವ ,ನಾಯಕತ್ವ, ನಿಶ್ವಾರ್ಥ ಸೇವಾ ಮನೋಭಾವ ಬೆಳೆಸಲು ಎನ್ ಎಸ್ ಎಸ್ ಸಹಕಾರಿಯಾಗಿದೆ ಎಂದು ಮಹಾಗಾಂವ ಕ್ರಾಸ್ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಶರಣಪ್ಪ ಮಾಳಗಿ ಹೇಳಿದರು.
ಮಂಗಳವಾರ ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ಸರಕಾರಿ ಪದವಿ ಹಾಗೂ ಸ್ನಾತಕೋತ್ತರ ಕಾಲೇಜಿನಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಮಾಡಿ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂದಿನ ಆಧುನಿಕ ಯುದಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿರುವುದು ವಿಷಾದನೀಯ, ಶಿಬಿರಾರ್ಥಗಳು ಶಿಬಿರದಲ್ಲಿ ಕಲಿತ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದರು.
ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಮಾತನಾಡಿ ಎನ್ ಎಸ್ ಎಸ್ ಯುವಕರ ವ್ಯಕ್ತತ್ವ ನಿರ್ಮಾಣಕ್ಕೆ ಅಗತ್ಯವಾದ ಸಹಕಾರ ನೀಡುತ್ತದೆ, ಶರಣರು, ಸಂತರು ಭೋದಿಸಿದ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ದೇಶದಲ್ಲಿ ಅನೇಕ ನಿಷ್ಠಾವಂತ ಅಧಿಕಾರಿಗಳಿದ್ದು ಅವರಿಂದ ಸ್ಪೂರ್ತಿ ಪಡೆದು ಉನ್ನತ ಸಾಧನೆಯತ್ತ ಮುನ್ನುಗ್ಗಬೇಕು.
ಈ ಸಂದರ್ಭದಲ್ಲಿ ಡಾ. ಶಿವಕುಮಾರ ಭರಣಿ, ಡಾ. ಸುಭಾಶ್ ನಾಯಕ, ಡಾ.ಲಕ್ಷ್ಮೀಕಾಂತ ಶಿರೊಳ್ಳಿ, ಪ್ರಭುಗೌಡ, ಉಪನ್ಯಾಸಕಿ ಶರಣಮ್ಮ, ಡಾ. ವಿಠಲರಾವ ಮುಕರಂಬಿ, , ಡಾ. ಪ್ರಕಾಶ ತಳವಾರ, ಮಲ್ಲಿಕಾರ್ಜುನ ಚಳಕಿ , ಡಾ.ನಬಿ, ಇತರರು ಇದ್ದರು.
ಸುರೇಖಾ ನಿರೂಪಿಸಿದರು, ವಿದ್ಯಾರ್ಥಿನಿಯರಾದ ಪಲ್ಲವಿ ಪ್ರಾರ್ಥಿಸಿದರು, ರುಚಿತಾ ಸ್ವಾಗತಿಸಿದರು.