ಮಸ್ಕಿ : ತಾಲೂಕಿನ ವಿವಿಧಡೆ ಅಬಕಾರಿ ಇಲಾಖೆ ದಾಳಿ, ಅಕ್ರಮವಾಗಿ ಮಾಡಲಾಗುತ್ತಿದ್ದ ಕಳ್ಳಬಟ್ಟಿ ವಶಪಡಿಸಿಕೊಂಡ ಅಧಿಕಾರಿಗಳು. ತಾಲೂಕಿನ ಜಕ್ಕೇರುಮಾಡು ತಾಂಡ ಹಾಗೂ ಮಾರಲದಿನ್ನಿ ತಾಂಡ ಎರಡು ಕಡೆ ರಾಯಚೂರು ಅಬಕಾರಿ ಉಪ ಅಧೀಕ್ಷಕರ ಹರಿಕೃಷ್ಣ ನೇತೃತ್ವದ ತಂಡ ದಾಳಿ ನೆಡೆಸಿ ೧೮೦ ಲೀಟರ್ ಬೆಲ್ಲದ ಕೊಳೆ ಸೇರಿ ಕಳ್ಳ ಭಟ್ಟಿ ಸಾರಾಯಿ ಯನ್ನು ವಶಪಡಿಸಿಕೊಂಡು ನಾಶಪಡಿಸಿದ್ದಾರೆ. ದಾಳಿಯಲ್ಲಿ ಲಿಂಗಸುಗೂರು ಅಬಕಾರಿ ನಿರೀಕ್ಷಕ ಸಂತೋಷ ಹರಿಜನ, ಅಬಕಾರಿ ಇನ್ಸ್ಪೆಕ್ಟರ್ ಮಹಮದ್ ಹುಸೇನ್, ರಾಯಚೂರು ಉಪ ವಿಭಾಗ ಅಬಕಾರಿ ನಿರೀಕ್ಷಕರಾದ ಕವಿತಾ, ಅಬಕಾರಿ ಪೇದೆಗಳಾದ ಮಹಾಲಿಂಗರಾಯ ನಬಿಸಾಬ ಅಬಕಾರಿ ಇಲಾಖೆ ಸಿಬ್ಬಂದಿ ವರ್ಗದವರು ಇದ್ದರು.