ಅಫಜಲಪುರ : ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಅಲ್ಲೆಲ್ಲ ಮಹಾನ್ ವ್ಯಕ್ತಿಗಳ ಸಾಧನೆಯ ಬದುಕಿನ ಕಥೆಗಳು ಕಣ್ಣು ಕುಕ್ಕುತ್ತವೆ. ಸ್ವಾರಸ್ಯವೇನೆಂದರೆ, ಒಂದು ಗೆಲುವಿನ ಮೆಟ್ಟಿಲು ಹತ್ತಿ ನಿಲ್ಲುವ ಮುನ್ನ ಅದೇ ಸಾಧಕ ಹತ್ತಕ್ಕೂ ಹೆಚ್ಚು ಬಾರಿ ಸೋಲಿನ ಮೆಟ್ಟಿಲು ಮೇಲೆ ಹೊರಳಾಡಿರುತ್ತಾನೆ ಎಂಬ ಸತ್ಯ ಕಥೆಗಳಿವೆ ಎಂಬ ಮಾತನ್ನು ಪ್ರಾರಂಭಿಸುತ್ತ.
ಶರಣರ ನಾಡು ಕಡಕೋಳ ಮಡಿವಾಳೇಶ್ವರರು ಹುಟ್ಟಿದ ಪುಣ್ಯಕ್ಷೇತ್ರ ಅಫಜಲಪುರ ತಾಲೂಕಿನ ಬಿದನೂರ ಗ್ರಾಮದ ಮಧ್ಯಮ ವರ್ಗದ ಸೈದಪ್ಪ ಎಂ. ಕರಿಕಲ್ ಅವರ ಉದರದಲ್ಲಿ ಜನಿಸಿದ ಹೆಮ್ಮೆಯ ಪುತ್ರರಾದ ಕುಮಾರ ಚಿರಂಜೀವಿ, ರಾಕೇಶ, ಹರೀಶ ಈ ಮೂರು ಜನ ಪುತ್ರರಲ್ಲಿ ಡಾ.ಚಿರಂಜೀವಿಯವರು ಬೆಳೆಯುವ ಸಿರಿ ಮೋಳಕೆ ಎಂಬಂತೆ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶ್ರೀ ಭೋಗೇಶ್ವರ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಪ್ರಥಮ ದರ್ಜೆಯೊಂದಿಗೆ ಶಿಕ್ಷಕರಿಗೆ ಅತ್ಯಂತ ಪ್ರೀತಿಯ ವಿದ್ಯಾರ್ಥಿಯಾಗಿದ್ದನು ನಂತರ ಶ್ರೀ ಶರಣಬಸವೇಶ್ವರ ಪಬ್ಲಿಕ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಅತ್ಯಂತ ಶಿಸ್ತಿನಿಂದ ಮತ್ತು ಪ್ರತಿ ಪರೀಕ್ಷೆ ಫಲಿತಾಂಶವನ್ನು ಅತ್ಯುತ್ತಮ ರೀತಿಯಲ್ಲಿ ಪಡೆಯುತ್ತಾ ಪಠ್ಯೇತರ ಚಟುವಟಿಕೆಗಳಲ್ಲಿ ಅಂದರೆ NCC ಮಾಡಿ ಶಿಸ್ತಿನ ಸಿಪಾಯಿಯಾಗಿ ಕ್ರೀಡೆಯಲ್ಲಿ ಬಹಳ ಆಶಕ್ತಿ ಪುಟ್ಬಾಲ್ ಹೆಚ್ಚು ಹೆಚ್ಚು ಆಸಕ್ತಿ ತೋರಿಸುತ್ತಿದ್ದರು ಹೀಗೆ ಕೂಡ ತಮ್ಮ ಪ್ರಾಥಮಿಕ ಇಂದ ಪ್ರೌಢ ಮತ್ತು ಕಾಲೇಜಿನಲ್ಲಿ ಅತ್ಯುತ್ತಮ ಅಂಕ ಪಡೆದು ಗುರುಗಳಿಂದ ಸೈ ಎನಿಸಿಕೊಂಡಿದ್ದಾರೆ.
ಖ್ಯಾತ ವೈದ್ಯನಾಗುವ ಆಸೆಯ ಚಿಗುರು..
ಪಿಯುಸಿ ಮುಗಿದ ನಂತರ ಚಿರಂಜೀವಿಯಲ್ಲಿ ಖ್ಯಾತ ವೈದ್ಯನಾಗುವ ಆಸೆ ಚಿಗುರೊಡೆಯಿತು ಎಷ್ಟೇ ಕಷ್ಟವಾದರೂ ನಾನೂ ವೈದ್ಯನಾಗಬೇಕು ಎಂಬ ಹಂಬಲ ತನ್ನ ತಂದೆ ತಾಯಿ ಬಳಿ ಪ್ರಸ್ತಾಪಿಸಿದಾಗ ಅದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು ಮುಂದಿನ ಉನ್ನತ ವ್ಯಾಸಂಗಕ್ಕೆ ಅಮೇರಿಕಾದ ಪ್ರತಿಷ್ಠಿತ ಟೆಕ್ಸಿಲ್ ಅಮೇರಿಕನ್ ವಿಶ್ವ ವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ಪ್ರವೇಶ ಪಡೆದು ಹಠಯೋಗಿಯಂತೆ ಕಷ್ಟ ಕಾರ್ಪಣ್ಯಗಳೊಂದಿಗೆ ಯಾವುದು ಲೆಕ್ಕಸದೇ ನಿರಂತರ ಅಧ್ಯಯನ ಮಾಡಿ ಗುರಿಯನ್ನು ತಲುಪಲವ ಮಹಾದಾಸೆಯೊಂದಿಗೆ ಸುಮಾರು ಐದು ವರ್ಷ MBBS ಪದವಿ ಪೊರೈಸಿ ಉತ್ತಮ ಫಲಿತಾಂಶದೊಂದಿಗೆ ತನ್ನ ಗುರಿ ಮುಟ್ಟಿದರು.
ಅನಿಸಿಕೆ ೧..
ನನ್ನ ಪುತ್ರನಾದ ಚಿರಂಜೀವಿ ಅವರಲ್ಲಿ ಬಾಲ್ಯದಲ್ಲೇ ಹೊಸತನ ವಿನೋತನ ಕಂಡು ಹಿಡಿಯುವ ಉತ್ಸಾಹದ ಮನೋಭಾವಿತ್ತು ಪ್ರಾಥಮಿಕ ಹಿಡಿದು ಕಾಲೇಜು ಮಟ್ಟದಲ್ಲಿ ಉತ್ತಮ ವಿದ್ಯಾರ್ಥಿನಾಗಿ ಉತ್ತಮ ಫಲಿತಾಂಶ ತಂದಿದ್ದಾರೆ ಮುಂದೆ ನಾನೂ ವೈದ್ಯನಾಗಿ ಬಡ ಜನರ ಆರೋಗ್ಯ ಸೇವೆ ಮಾಡುವುದಾಗಿ ನನ್ನ ಮಗ ಹೇಳಿದಾಗ ಅವನ ಆಸೆಗೆ ಬೆಂಬಲಿಸಿದ್ದೇವೆ ಈಗ ತಾಯ್ನಾಡಿನಲ್ಲಿ ಬಡ ಜನರ ಆರೋಗ್ಯ ಸೇವೆ ಮಾಡಲಿ ಎಂಬುವುದೆ ನನ್ನಾಸೆಯ.
ಸೈದಪ್ಪ ಎಂ.ಕರಿಕಲ್ ( ಡಾ.ಚಿರಂಜೀವಿ ತಂದೆ)
ಅನಿಸಿಕೆ ೨..
ನಾನೂ ಅಮೇರಿಕಾದಲ್ಲಿ ಐದು ವರ್ಷ ಉತ್ತಮ ವೈದ್ಯಕೀಯ ಅದ್ಯಯನ ಪೊರೈಸಿ ತಾಯ್ನಾಡಿಗೆ ಬಂದಿದ್ದೇನೆ ತಾಯ್ನಾಡಿನಲ್ಲಿ ಒಬ್ಬ ಉತ್ತಮ ವೈದ್ಯನ್ನಾಗಿ ಬಡ ಜನರ ಆರೋಗ್ಯ ಸೇವೆ ಮಾಡುವುದರೊಂದಿ ಆರೋಗ್ಯ ಸಮಾಜ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದೇನೆ ತಮ್ಮಲ್ಲರ ಸಹಕಾರ ಆಶೀರ್ವಾದ ಇರಲಿ.
– ಡಾ.ಚಿರಂಜೀವಿ ಎಸ್.ಕರಿಕಲ್ ( ವೈದ್ಯರು ಕಲ್ಬುರ್ಗಿ)
ಅಮೇರಿಕಾದಿಂದ ತಾಯ್ನಾಡಿಗೆ ಆಗಮಿಸಿದ ಡಾ. ಚಿರಂಜೀವಿ ಅವರಿಗೆ ಅವರ ನಿವಾಸದಲ್ಲಿ ಗ್ರಾಮಸ್ಥರು ಗೆಳೆಯರು, ಕುಟುಂಬಸ್ಥರು, ತಂದೆ ಸೈದಪ್ಪ ತಾಯಿ ತಾರಾಬಾಯಿ ಕರಿಕಲ್ ಪರಿವಾರ ಹೀಗೆ ಅನೇಕರು ಸೇರಿ ಅದ್ದೂರಿಯಾಗಿ ಡಾ. ಚಿರಂಜೀವಿ ಅವರಿಗೆ ಸ್ವಾಗತಿಸಿ ಸನ್ಮಾನಿಸಿ ಸಿಹಿ ತಿನ್ಮಿಸಿ ಸಂಭ್ರಮಿಸಿದರು.