ಇಂಡಿ: 2021-22ನೇ ಸಾಲಿನಲ್ಲಿ ಭೀಮಾಶಂಕರ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದ ರೈತರಿಗೆ ಹಣ ಸಂದಾಯ ಮಾಡಲಾಗುತ್ತಿದೆ ಎಂದು ಭೀಮಾಶಂಕರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಹಾಗೂ ಶಾಸಕ
ಯಶವಂತರಾಯಗೌಡ ಪಾಟೀಲ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. 2021 ರ ನವೆಂಬರ್ 1 ರಿಂದ ಡಿ.15 ರವರೆಗೆ ಕಬ್ಬು ಪೂರೈಸಿದ ಅವಧಿಯಾಗಿದ್ದರೆ ಅವರಿಗೆ ಜ. 31, 2022 ರಂದು ಕಬ್ಬಿನ ಬಿಲ್ಲು ಸಂದಾಯ ಮಾಡಲಾಗುವದು. 2021 ರ ಡಿಸೆಂಬರ್16 ರಿಂದ 2022 ರ ಜನವರಿ 15 ರವರೆಗೆ. ಕಬ್ಬು ಪೂರೈಸಿದ ಅವಧಿಗೆ ಫೆ. 15 ರಂದು ಕಬ್ಬಿನ ಬಿಲ್ಲು ಸಂದಾಯ ಮಾಡಲಾಗುವದು. ಪ್ರಸಕ್ತ ವರ್ಷದ ಜನವರಿ 16 ರಿಂದ ಫೆಬ್ರುವರಿ 28 ರವರೆಗೆ ಕಬ್ಬು ಪೂರೈಸಿದ ರೈತರಿಗೆ ಫೆಬ್ರುವರಿ 28 ರಂದು ಕಬ್ಬಿನ ಬಿಲ್ಲು ಸಂದಾಯ ಮಾಡಲಾಗುವದು ಎಂದು ತಿಳಿಸಿದ್ದಾರೆ.