ಸಿಂಧನೂರು: ತಾಲೂಕಿನ ಕೆ. ಹೊಸಹಳ್ಳಿ ಗ್ರಾಮದಲ್ಲಿ ಜಲ್ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಬೀದಿ ನಾಟಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಬೀದಿ ನಾಟಕದ ಆಯೋಜಕರು ಮತ್ತು ಕಲಾವಿದರು ಜನರಿಗೆ ಗ್ರಾಮದಲ್ಲಿ ನೀರನ್ನು ಮಿತವಾಗಿ ಬಳಸುವುದು, ನೀರಿನ ಸಂರಕ್ಷಣೆ, ಸ್ವಚ್ಚತೆ, ಪ್ಲಾಸ್ಟಿಕ್ ನಿಷೇಧ, ಜಿಲ್ಲಾ ಪಂಚಾಯತಿ ಯಿಂದ ಕೊಡಲಾದ ಕಸದ ಬುಟ್ಟಿಗಳನ್ನು ಬಳಸುವುದು, ಎಲ್ಲೆಂದರಲ್ಲಿ ನೀರು ನಿಂತುಕೊಳ್ಳದಂತೆ ಎಚ್ಚರವಹಿಸುವುದರ ಬಗ್ಗೆ ತುಂಬಾ ಅಚ್ಚುಕಟ್ಟಾಗಿ ಬೀದಿ ನಾಟಕದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾದ್ಯಕ್ಷರಾದ ಅಮರೇಶ ಕಲ್ಮಂಗಿ, ಸದಸ್ಯರುಗಳಾದ ಅಮರೇಶ ನೆಕಡೆ, ಮಾಜಿ ಸದಸ್ಯರಾದ ಅಮರೇಶ ಮಠ, SDMC ಸದಸ್ಯರಾದ ಗಂಗಪ್ಪ, ತೊಂಡೆಪ್ಪ, ಶ್ರೀ ಮಹರ್ಷಿ ವಾಲ್ಮೀಕಿ ಜನಜಾಗೃತಿ ಸಂಘ ದ ಅದ್ಯಕ್ಷರಾದ ಬಸವರಾಜ ಬೈರಾಪೂರ, ಪಂಚಾಯತಿ ಸಿಬ್ಬಂದಿಯಾದ ವೀರೇಶ ಕಾರಲಕುಂಟೆ, ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಚನ್ನಪ್ಪ, ನಾಗರಾಜ, ರಡ್ಡೆಪ್ಪ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.