ವಿಜಯಪುರ: ಕೆ.ಎಸ್. ಈಶ್ವರಪ್ಪ ರಾಜೀನಾಮೆ ಸ್ವಾಗತಿಸುತ್ತೇನೆ ಎಂದು ವಿಜಯಪುರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. ನೈತಿಕ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ. ಸಂತೋಷ ಪಾಟೀಲರ ಸಾವಿನ ಹಿಂದೆ ಅನುಮಾನದ ಹುತ್ತ ಬೆಳೆದಿದೆ. ತನಿಖೆ ನಂತರ ಸತ್ಯಾಂಶ ಹೊರ ಬರಲಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದರು. ಇನ್ನು ಸಂತೋಷ ಸಾವಿನ ಹಿಂದೆ ಅನೇಕ ಸಂಶಯಗಳಿವೆ. ಈಶ್ವರಪ್ಪನವರು ಅವರೇ ಹೇಳಿದ ಪ್ರಕಾರ ನಿರ್ದೋಷಿಯಾಗಿ ಹೊರ ಬರುವ ವಿಶ್ವಾಸ ಇದೆ ಎಂದರು.