ನ್ಯಾಯಾಧೀಶರ ಬಾಡಿಗೆ ಮನೆಗೆ ಕನ್ನ ಹಾಕಿದ ಕಳ್ಳರು..!
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಮುದ್ದೇಬಿಹಾಳದ ಹುಡೋ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ 5ನೇ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಮನೆಗೆ ಕಳ್ಳರು ಕನ್ನ ಹಾಕಿದ್ದು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ, ನಗದು ದೋಚಿದ ಘಟನೆ ಬಂದಿದೆ ಸಂಪೂರ್ಣ ತನಿಖೆ ನಂತರ ತಿಳಿಬಹುದು.
ಸೋಮವಾರ ಆ.25 ಮಧ್ಯಾಹ್ನ ಬೆಳಕಿಗೆ ಬಂದಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ರವಿವಾರ ಮಧ್ಯರಾತ್ರಿ ಘಟನೆ ನಡೆದಿದ್ದು ಮಧ್ಯಾಹ್ನ ಅಕ್ಕಪಕ್ಕದವರು ಇವರ ಮನೆಯ ಬಾಗಿಲು ಓಪನ್ ಆಗಿದ್ದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪೊಲೀಸರು ಸ್ಥಳಕ್ಕೆ ಬಂದಾಗ ವಿಷಯ ಬಹಿರಂಗಗೊಂಡಿದೆ.
ಶನಿವಾರ, ರವಿವಾರ ರಜೆ ಇದ್ದ ಕಾರಣ ನ್ಯಾಯಾಧೀಶ ಸಚಿನ್ ಕೌಶಿಕ್ ಅವರು ಕುಟುಂಬ ಸಮೇತ ತಮ್ಮೂರಿಗೆ ಹೋಗಿದ್ದರು.
ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಕೃತ್ಯ ಎಸಗಲಾಗಿದೆ. ಮನೆಯ ಬಾಗಿಲಿಗೆ ಹಾಕಿದ್ದ ಬೀಗ ತೆಗೆದು ಮುಂಬಾಗಿಲಿನಿಂದಲೇ ಕಳ್ಳರು ಒಳಗೆ ನುಗ್ಗಿ ಬಟ್ಟೆ ಬರೆ, ಟ್ರೇಜರಿ, ದೇವರ ಕೋಣೆ ಹೀಗೆ ಒಂದನ್ನೂ ಬಿಡದೆ ಎಲ್ಲವನ್ನೂ ಜಾಲಾಡಿದ್ದಾರೆ. ಬಟ್ಟೆ ಬರೆ ಇನ್ನಿತರ ಸಾಮಾನು ಮನೆಯೊಳಗೆ ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ವಿಷಯದ ಗಂಭೀರತೆ ಅರಿತು ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರಗಿ, ಬಸವನ ಬಾಗೇವಾಡಿ ಡಿಎಸ್ಪಿ ಬಲ್ಲಪ್ಪ ನಂದಗಾಂವಿ, ಸಿಪಿಐ ಮೆಹಮೂದ್ ಫಸಿಯುದ್ದೀನ್, ಪಿಎಸ್‌ಐಗಳಾಗ ಸಂಜಯ್ ತಿಪ್ಪರಡ್ಡಿ ಸ್ಥಳಕ್ಕೆ ನೀಡಿ ಪಕ್ಕದ ಮನೆಯ ವಕೀಲರೊಬ್ಬರ ಸಮ್ಮುಖ ತಪಾಸಣೆ ನಡೆಸಿ ಪ್ರಥಮ ಮಾಹಿತಿ ದಾಖಲಿಸಿಕೊಂಡಿದ್ದಾರೆ.
ನ್ಯಾಯಾಧೀಶರು ಬಂದ ಕೂಡಲೇ ಏನೇನು ಕಳ್ಳತನವಾಗಿದೆ ಎನ್ನುವ ನಿಖರ ಮಾಹಿತಿ ಸಿಕ್ಕ ಮೇಲೆ ಪ್ರಕರಣ ದಾಖಲಾಗಲಿದೆ. ಕೆಲವೇ ತಿಂಗಳ ಹಿಂದೆ ಮುದ್ದೇಬಿಹಾಳಕ್ಕೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಂಜೂರಾಗಿತ್ತು. ನ್ಯಾ.ಕೌಶಿಕ್ ಅವರು ವರ್ಗಾವಣೆಯಾಗಿ ಬಂದ ನಂತರ ಹುಡೋದ ಈ ಮನೆಯನ್ನು ಬಾಡಿಗೆಗೆ ಪಡೆದು ಕುಟುಂಬ ಸಮೇತ ವಾಸಿಸುತ್ತಿದ್ದರು.
ಆಕ್ರೋಶ: ಹುಡೋ ಬಡಾವಣೆ ಶ್ರೀಮಂತರು, ಸುಶಿಕ್ಷಿತರು
ಮಾತ್ರವಲ್ಲದೆ ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಅವರು ವಾಸವಾಗಿರುವ ಬಡಾವಣೆಯಾಗಿದೆ. ಇಲ್ಲಿ ಸರಿಯಾಗಿ ಬೀದಿ ದೀಪಗಳಿಲ್ಲ, ಸಿಸಿ ಕ್ಯಾಮರಾ ಇದ್ದರೂ ಬಂದ್ ಆಗಿವೆ, ಪೊಲೀಸರು ಸರಿಯಾಗಿ ಗಸ್ತು ತಿರುಗುವುಗಿಲ್ಲ. ಇವೆಲ್ಲ ಕಾರಣ ಕಳ್ಳರಿಗೆ ಅನುಕೂಲ ಕಲ್ಪಿಸುವಂತಿವೆ. ಪೊಲೀಸರ ನಿರ್ಲಕ್ಷ್ಯವೂ ಕಾರಣವಾಗಿದೆ ಎಂದು ಸುತ್ತಲಿನ ನಿವಾಸಿಗಳು, ವಾರ್ಡ ಪ್ರತಿನಿಧಿಸುವ ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಆರೋಪಿಸಿದರು.