ಜೂ. 4 ಶುಷ್ಕ ದಿನ ಘೋಷಿಸಿ ಡಿಸಿ ಆದೇಶ
ವಿಜಯಪುರ : ಮೇ 28 : ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಮತ ಎಣಿಕೆಯು ಜೂನ್ 4ರಂದು ನಗರದ ಸೈನಿಕ ಶಾಲೆಯಲ್ಲಿ ನಡೆಯಲಿದ್ದು, ಮತ ಎಣಿಕೆ ಕಾರ್ಯವನ್ನು ಶಾಂತಿ ಹಾಗೂ ಸುವ್ಯವಸ್ಥೆಯಿಂದ ನಡೆಸಲು ಅನೂಕೂಲವಾಗಲು ಹಾಗೂ ಯಾವುದೇ ಅಹಿತಕರ ಘಟನೆಗಳು ಜರಗದಂತೆ ನೋಡಿಕೊಳ್ಳಲು ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 135 ಸಿ ಅಡಿಯಲ್ಲಿ ಜೂ. 4 ರಂದು ಬೆಳಗ್ಗೆ 6 ರಿಂದ ಜೂನ್ 5 ರ ಬೆಳಗಿನ 6 ಗಂಟೆಯವರೆಗೂ ಜಿಲ್ಲೆಯಾದ್ಯಂತ ಮದ್ಯ ಮಾರಾಟ, ಸಾಗಾಣಿಗೆ ಹಾಗೂ ಸಂಗ್ರಹವನ್ನು ನಿಷೇಧಿಸಿ “ಶುಷ್ಕ ದಿನ” ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ಆದೇಶ ಹೊರಡಿಸಿದ್ದಾರೆ.