ಲಿಂಗಸೂಗೂರು: ರಾಯಚೂರು ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಗೆ ನಾಮನಿರ್ದೆಶನಗೊಂಡಿರುವ ತಾಲೂಕಾ ಬಿಜೆಪಿ ಮಂಡಲ ಕಾರ್ಯದರ್ಶಿ ಹಾಗೂ ಮಹಿಳಾ ಮೋರ್ಚಾ ಉಸ್ತುವಾರಿಗಳಾದ ಜ್ಯೋತಿ ಸುಂಕದ್ ರವರಿಗೆ ಪಟ್ಟಣದ 11 ವಾರ್ಡಿನ ಮಹಿಳೆಯರು ಸನ್ಮಾನ ಮಾಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಖಜಾಂಚಿ ಸುಮಾ ಪಾಟೀಲ್, ಕೆಡಿಪಿ ನಾಮನಿರ್ದೆಶನ ಸದಸ್ಯರಾದ ಸ್ಮಿತಾ ಅಂಗಡಿ, ಶಿಲ್ಪ ಭಾನುಮತಿ,ಸಿದ್ದಮ್ಮ, ಮಂಜುಳಾ ದೇವದುರ್ಗ, ಹೇಮಾವತಿ ದೇವದುರ್ಗ, ಕಮಲಾಕ್ಷಿ ದೇವದುರ್ಗ, ಹಂಪಮ್ಮ,ಅಂಬಿಕಾ, ಲಕ್ಷ್ಮಿ ,ಪದ್ಮಾವತಿ, ಮಾರುತಮ್ಮ,ನಯನ, ಸಾವಿತ್ರಿ ಸೇರಿದಂತೆ ಇನ್ನಿತರ ಮಹಿಳೆಯರು ಉಪಸ್ಥಿತರಿದ್ದರು.