ಖಾಸಗಿ ಕಂಪನಿಗಳ ವಿವಿಧ ಹುದ್ದೆಗಳ ಭರ್ತಿಗೆ ಆ.14ರಂದು ಉದ್ಯೊಗ ಮೇಳ
ವಿಜಯಪುರ ಆ.8 : ಜಿಲ್ಲಾ ಉದ್ಯೊಗ ವಿನಿಮಯ ಕೇಂದ್ರ ವಿಜಯಪುರ ಹಾಗೂ ಮುದ್ದೇಬಿಹಾಳದ ಎಂಜಿವಿಸಿ ಪದವಿ ಕಾಲೇಜ್ ಮತ್ತು ಧಾರವಾಡದ ಲಾಜಿಕ್ ಕಂಪ್ಯೂಟರ್ ಸೆಂಟರ್ ಇವರ ಸಹಯೋಗದಲ್ಲಿ ಮುದ್ದೇಬಿಹಾಳದ ಎಂಜಿವಿಸಿ ಪದವಿ ಕಾಲೇಜ್ ಆವರಣದಲ್ಲಿ ಇದೇ ಆ.14ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.
ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿಗೆ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ, ಡಿಪ್ಲೋಮಾ, ಬಿಇಡಿ, ಡಿಇಡಿ ಹಾಗೂ ಯಾವುದೇ ಪದವಿ ಪಾಸಾದಂತಹ 35 ವರ್ಷದೊಳಗಿನ ಅರ್ಹ ಆಸಕ್ತರು ತಮ್ಮ ಶಾಲಾ ದಾಖಲಾತಿಗಳು, ಬಯೋಡಾಟಾ, ಆಧಾರ್ ಕಾರ್ಡ 2ಸೆಟ್ ಝರಾಕ್ಸನೊಂದಿಗೆ ಭಾಗವಹಿಸಿಬಹುದಾಗಿದೆ.
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ : 7829529043, 9741428255 ಸಂಖ್ಯೆಗೆ ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.