ಕುಂದಗೋಳ ಮಾ.13: ಎಲ್ಲರಿಗೂ ಶುದ್ಧ ಕುಡಿಯುವ ನೀರು ಪೂರೈಸಲು ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಳಗಳ ಸಂಪರ್ಕ ಒದಗಿಸಲಾಗುತ್ತಿದೆ. ಅಮೂಲ್ಯವಾದ ಜಲಸಂಪತ್ತನ್ನು ಮಿತವಾಗಿ ಬಳಸಿ ಗ್ರಾಮಸ್ಥರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕಿ ಕುಸುಮಾವತಿ ಸಿ ಶಿವಳ್ಳಿ ಹೇಳಿದರು.
ಹುಬ್ಬಳ್ಳಿ ತಾಲೂಕಿನ ರೇವಡಿಹಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಜೆ.ಜೆ.ಎಂ ಯೋಜನೆಯ ಅಡಿಯಲ್ಲಿ 99.49 ಲಕ್ಷ ರೂ.ಗಳ ಮೊತ್ತದ ಮನೆ ಮನೆಗೆ ನಳ ಅಳವಡಿಕೆ ಕಾಮಗಾರಿಗೆ ರವಿವಾರ(ಮಾ.13) ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಈಗಾಗಲೇ ಬೇಸಿಗೆ ಕಾಲ ಆರಂಭವಾಗಿದ್ದು, ಜನರು ನೀರನ್ನು ಮಿತವಾಗಿ ಬಳಸಿ, ಕುಡಿಯುವ ನೀರನ್ನು ಅದರ ಮೂಲಗಳನ್ನು ಸಂರಕ್ಷಣೆ ಮಾಡಲು ಪ್ರಥಮ ಆದ್ಯತೆ ನೀಡಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಲಲಿತಾ ಅರ್ಜುನ ವಾಲಿಕಾರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರ ನೀಡಿದ ಯೋಜನೆಗಳನ್ನು ಸಮರ್ಪಕವಾಗಿ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರು ಮರೆವ್ವ ಜ್ಞಾ ಸವ್ವಾಸೆ, ಗ್ರಾಪಂ ಸದಸ್ಯರಾದ ಖಾತುನಬಿ ಮ ಲಾಡಸಾಬನವರ, ಶಾಂತವ್ವ ಈ ಚವ್ಹಾಣ,ಸುನಂದಾ ಬಿ ನಡುವಿನ ಮನಿ, ರಾಯೆಸಾಬ ಪ ಮುಲ್ಲಾನವರ, ಪಾರ್ವತಿ ಸು ಅರ್ಜಿ, ಸಂಜಯ ಗು ಮುಪ್ಪಯ್ಯನವರ ಸ್ಥಳೀಯ ಹಿರಿಯರಾದ ಗುರುಪಾದಯ್ಯ ಮುಪ್ಪಯ್ಯನವರ ದಯಾನಂದ ಚವ್ಹಾಣ,ಪ್ರಭು ಜಡಿ,ಹನಮಂತಪ್ಪ ಕೆರೋಜಿ,ಲಕ್ಷ್ಮಣ ತಳವಾರ ಹಸನಾಬ ಲಾಡಸಾಬನವರ, ಚನಬಸ್ಸು ಭಜಂತ್ರಿ, ಮೌಲಾಸಾಬ ಲಾಡಸಾಬನವರ, ಮಕ್ತುಮ ಲಾಡಸಾಬನವರ, ಸೂರ್ಯನಾರಾಯಣ ಅರ್ಜಿ ಮಂಜುನಾಥ ಶೆಟ್ಟಪ್ಪನವರ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.