ರಾಯಚೂರು : ಡಾ.ಬಿ.ಆರ್. ಅಂಬೇಡ್ಕರ ರವರನ್ನು ಅಪಮಾನಿಸಿದ ಜಿಲ್ಲಾನ್ಯಾಯಾಧೀಶರನ್ನು ವಜಾಗೊಳಿಸುವಂತೆ ಆಗ್ರಹಿಸಿ ಫೆಬ್ರವರಿ 19 ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಪ್ರತಿಭಟನಾ ರ್ಯಾಲಿ ಮಾಡಲಾಗುತ್ತಿದ್ದು, ಎಲ್ಲಾ ದಲಿತರು ಭಾಗವಹಿಸಬೇಕು ಎಂದು ಸಂವಿಧಾನ ಸಂರಕ್ಷಣೆ ಮಹಾ ಒಕ್ಕೂಟ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿತು.
ನಗರದ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಇಡಲಾಗಿದ್ದ ಭಾವಚಿತ್ರವನ್ನು ತೆಗೆಸಿ ಅಂಬೇಡ್ಕರವರನ್ನು ಸಂವಿಧಾನವನ್ನು ಅಪಮಾನಿಸಿದ ರಾಯಚೂರು ನಗರ ಸತ್ರ ನ್ಯಾಯಾಲಯದ ಜಿಲ್ಲಾ ನ್ಯಾಯದೀಶರನ್ನು ಸೇವೆಯಿಂದ ಅಮಾನತ್ತು/ವಜಾ ಗೊಳಿಸಬೇಕು, ಸದರಿ ನ್ಯಾಯಾಧೀಶರನ್ನು ಪ.ಜಾತಿ ಮತ್ತು ಪ.ಪಂ. ದೌರ್ಜನ್ಯ ತಡೆ ಕಾಯ್ದೆ 1989/2015/2018 ಆಡಿ ಕಲಂ 3 (1) (ಎ) ಮತ್ತು 18 (ಎ) ಪ್ರಕಾರ ಬಂಧಿರ್ಸಿ ಜೈಲು ಶಿಕ್ಷೆ ವಿಧಿಸಬೇಕು.
ರಾಜ್ಯಾದ್ಯಾಂತ ಎಲ್ಲಾ ಕೋಟ್ ಹಾಲ್‌ಗಳಲ್ಲಿ ಅಂಬೇಡ್ಕರರವರ ಭಾವಚಿತ್ರ ಇಡಲು ರಾಜ್ಯ ಸರ್ಕಾರ ಮತ್ತು ಹೈಕೋರ್ಟಗಳು ಆದೇಶ ಹೊರಡಿಸುವಂತೆ ಮತ್ತು ಹೈಕೋರ್ಟಿಗಳು ಮತ್ತು ಸುಪ್ರೀಮ್ ಕೋರ್ಟಿನ ನ್ಯಾಯಾಧೀಶರ ನೇಮಕಾತಿಯನ್ನು ಪರಿಶಿಷ್ಟರು ಮತ್ತು ಹಿಂದುಳಿದ ಜಾತಿಯವರಿಗೆ ಮೀಸಲಾತಿ ಕಾನೂನು ಆದೇಶ ಜಾರಿಗೊಳಿಸುವಂತೆ ಅಗ್ರಹಿಸಿ ರಾಜ್ಯ ಎಲ್ಲಾ 31 ಜಿಲ್ಲೆಗಳಲ್ಲಿ ವಿವಿಧ ದಲಿತ ಮತ್ತು ಸಂವಿಧಾನ ಪರವಾದ ಸಂಘಟನೆಗಳು ಹಲವಾರು ಪ್ರತಿಭಟನಾ ಕಾರ್ಯಾಕ್ರಮಗಳನ್ನು ಹಮ್ಮಿಕೊಂಡಿದ್ದವು.
ಆದರೆ ರಾಜ್ಯ ಸರ್ಕಾರ ಮತ್ತು ಹೈಕೋರ್ಟ ಬೆಂಗಳೂರು ಈ ಕುರಿತು ಆದೇಶಗಳನ್ನು ಈವರೆಗೆ ಹೊರಡಿಸಿಲ್ಲ. ಇದನ್ನು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ಕರ್ನಾಟಕ ರಾಜ್ಯ ಸಮಿತಿ ಬೆಂಗಳೂರು ಖಂಡಿಸುತ್ತದೆ. ಸದರಿ ಬೇಡಿಕೆಗಳನ್ನು ಅಂಗೀಕರಿಸಿ ಆದೇಶಗಳನ್ನು ಹೊರಡಿಸಬೇಕೆಂದು ಸದರಿ ಒಕ್ಕೂಟದ ರಾಜ್ಯ ಸಮಿತಿ ಮತ್ತು ರಾಯಚೂರು ಜಿಲ್ಲಾ ಸಮಿತಿಗಳು ಅಗ್ರಹಿಸುತ್ತದೆ.
ಸದರಿ ಒಕ್ಕೂಟದ ರಾಜ್ಯ ಸಮಿತಿ ಮತ್ತು ಜಿಲ್ಲಾ ಸಮಿತಿಯ ನಿರ್ಣಯಗಳಂತೆ ಮೇಲ್ಕಂಡ ಬೇಡಿಕೆಗಳನ್ನು ಅಂಗೀಕರಿಸಿ ಆದೇಶ ಹೊರಡಿಸುವಂತೆ ಆಗ್ರಹಿಸಲು ಬೆಂಗಳೂರಿನಲ್ಲಿ ಫೆಬ್ರುವರಿ 19 ರಂದು ವಿಧಾನಸೌಧ ಹೈಕೋರ್ಟ ಚಲೋ ಎಂಬ ರಾಜ್ಯ ಮಟ್ಟದ ಪ್ರತಿಭಟನಾ ರ‌್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ರಾಯಚೂರು ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ಸದರಿ ರಾಲಿಯಲ್ಲಿ ಭಾಗವಹಿಸಲು ಕರೆ ನೀಡಿದರು.